ಬೆಂಗಳೂರು: ರಾಜ್ಯದಲ್ಲಿ ಉಪ ಚುನಾವಣೆ ಹಾಗೂ ಬಿಹಾರ ಚುನಾವಣೆ ವಿಚಾರವಾಗಿ ರಾಜ್ಯ ಬಿಜೆಪಿ ವಕ್ತಾರ ಕ್ಯಾ. ಗಣೇಶ್ ಕಾರ್ಣಿಕ್ ಪ್ರತಿಕ್ರಿಯಿಸಿದ್ದು, ಎರಡೂ ಕಡೆಗಳಲ್ಲೂ ಗೆಲ್ಲುವ ನಿರೀಕ್ಷೆ ಇದೆ ಎಂದಿದ್ದಾರೆ.
ಬಿಹಾರವೂ ಸೇರಿ ರಾಜ್ಯದ 2 ಉಪ ಚುನಾವಣೆ ಗೆಲ್ಲುವ ನಿರೀಕ್ಷೆ ಇದೆ: ಗಣೇಶ್ ಕಾರ್ಣಿಕ್ ವಿಶ್ವಾಸ - ಶಿರಾ ಆರ್ಆರ್ ನಗರ ಫಲಿತಾಂಶ
ಮಹಾಘಟಬಂದನ್ ಅಧಿಕಾರ ಹಿಡಿಯಲಿದೆ ಅನ್ನೋ ಮಾತು ಕೇಳಿ ಬರ್ತಿತ್ತು. ಆದರೆ, ಮೋದಿ ಅವರ ಆಡಳಿತ ಅಭಿವೃದ್ಧಿ ನೋಡಿ, ಮತ್ತೆ ಎನ್ಡಿಎಗೆ ಜನ ಬೆಂಬಲಿಸಿದ್ದಾರೆ. ಚುನಾವಣೆ ಮತ್ತು ಉಪ ಚುನಾವಣೆ ಮತ್ತೆ ಬಿಜೆಪಿಗೆ ಅಧಿಕಾರ ಹಿಡಿಯುವಂತೆ ಮಾಡಿದೆ. ನನಗೆ ವಿಶ್ವಾಸ ಇದೆ ಮಧ್ಯಾಹ್ನದ ಹೊತ್ತಿಗೆ ನಮ್ಮ ಪರವಾಗಿ ಬರಲಿದೆ ಎಂದಿದ್ದಾರೆ.
ಆರಂಭಿಕ ಮತಗಳು ಬಿಜೆಪಿ ಪಕ್ಷಕ್ಕೆ ಖುಷಿ ತಂದಿದೆ. ಇದೇ ರೀತಿ ಮುಂದುವರೆಯಲಿ ಅಂತ ಆಶಿಸುತ್ತೇವೆ. ಬಿಹಾರದಲ್ಲಿ ಬಿಜೆಪಿ 57 ಸ್ಥಾನ ಪಡೆದು, ಜೆಡಿಯು ಜೊತೆ ಹೊಂದಾಣಿಕೆ ಮಾಡಿಕೊಂಡಿತ್ತು. ಈಗ ಚುನಾವಣೆ ಹೊಂದಾಣಿಕೆ ಮಾಡಿಕೊಂಡೇ ಕಣಕ್ಕೆ ಇಳಿದಿದ್ದೇವೆ. ಚುನಾವಣೋತ್ತರ ಸಮೀಕ್ಷೆಯಲ್ಲಿ ಎನ್ಡಿಎ ಅಧಿಕಾರ ಹಿಡಿಯಲು ಸಾಧ್ಯವಿಲ್ಲ, ಮಹಾಘಟಬಂದನ್ ಅಧಿಕಾರ ಹಿಡಿಯಲಿದೆ ಅನ್ನೋ ಮಾತು ಕೇಳಿ ಬರ್ತಿತ್ತು. ಆದರೆ, ಮೋದಿ ಅವರ ಆಡಳಿತ ಅಭಿವೃದ್ಧಿ ನೋಡಿ, ಮತ್ತೆ ಎನ್ಡಿಎಗೆ ಜನ ಬೆಂಬಲಿಸಿದ್ದಾರೆ. ಚುನಾವಣೆ ಮತ್ತು ಉಪ ಚುನಾವಣೆ ಮತ್ತೆ ಬಿಜೆಪಿಗೆ ಅಧಿಕಾರ ಹಿಡಿಯುವಂತೆ ಮಾಡಿದೆ. ನನಗೆ ವಿಶ್ವಾಸ ಇದೆ ಮಧ್ಯಾಹ್ನದ ಹೊತ್ತಿಗೆ ನಮ್ಮ ಪರವಾಗಿ ಬರಲಿದೆ ಎಂದಿದ್ದಾರೆ.
ಶಿರಾ ಕ್ಷೇತ್ರದಲ್ಲಿ ಕಳೆದ ಬಾರಿ 10 ಸಾವಿರ ಮತ ಪಡೆಯಲಾಗಿತ್ತು. ಆದರೆ, ಈ ಬಾರಿ ಜನ ಬಿಜೆಪಿ ಪರ ಮತಯಾಚನೆ ಮಾಡುತ್ತಿರುವುದು ಕಂಡು ಬರುತ್ತಿದೆ. ಆರ್ಆರ್ ನಗರ ಹಾಗೂ ಶಿರಾ ಎರಡೂ ಕ್ಷೇತ್ರವನ್ನೂ ಗೆಲ್ಲುವ ವಿಶ್ವಾಸವಿದೆ ಎಂದಿದ್ದಾರೆ.