ಬೆಂಗಳೂರು: ಬಿಟ್ ಕಾಯಿನ್ (Bitcoin) ವಿವಾದದಲ್ಲಿ ಬಿಜೆಪಿ ವಿರುದ್ಧ ಕಾಂಗ್ರೆಸ್ ನಾಯಕರು ಮಾಡುತ್ತಿರುವ ಕಪೋಲಕಲ್ಪಿತ ಆರೋಪಗಳಿಗೆ ಮತ್ತೆ ಮತ್ತೆ ಉತ್ತರಿಸುವ ಅಗತ್ಯವಿಲ್ಲ ಎಂದು ರಾಜ್ಯ ಬಿಜೆಪಿ ಕೈ ನಾಯಕರ ವಿರುದ್ಧ ಮತ್ತೆ ಕಿಡಿಕಾರಿದೆ.
ಈ ಬಗ್ಗೆ ಟ್ವೀಟ್ (BJP Tweet) ಮಾಡಿರುವ ಬಿಜೆಪಿ, ಸಿದ್ದರಾಮಯ್ಯ ಅವರೇ (Opposition Leader Siddaramaiah) ಟಿಪ್ಪು (Tipu Sulthan Jayanti) ಕುರಿತಾದ ಸುಳ್ಳು ಇತಿಹಾಸ ಓದುವ ಬದಲು ಬಿಟ್ ಕಾಯಿನ್ (Bit coin Row) ಕುರಿತಾದ ಚಾರ್ಜ್ ಶೀಟ್ ತರಿಸಿಕೊಂಡು ಮೊದಲು ಓದಿ. ಆಗ ನಿಮ್ಮ ಪಕ್ಷದ ನಾಯಕರು ಈ ಹಗರಣದಲ್ಲಿ ಹೇಗೆ ಭಾಗಿಯಾಗಿದ್ದರೆ ಎಂಬುದು ಅರ್ಥವಾಗುತ್ತದೆ. ಈ ಹಗರಣಕ್ಕೆ ನೀವೇ ಪರೋಕ್ಷ ಬೆಂಬಲ ನೀಡಿರಬಹುದೆಂಬ ಶಂಕೆ ರಾಜ್ಯದ ಜನರನ್ನು ಕಾಡುತ್ತಿದೆ ಎಂದು ಆರೋಪಿಸಿದೆ.
ಶ್ರೀಕಿ ಜತೆ ಕಾಂಗ್ರೆಸ್ ನಾಯಕರ ಮಕ್ಕಳ ಸಂಪರ್ಕ
ದಲಿತ ವಿರೋಧಿ ಸಿದ್ದರಾಮಯ್ಯ ಈಗ "ಹಿಟ್ & ರನ್ " ರಾಜಕೀಯ ಆರಂಭಿಸಿದ್ದಾರೆ. ದಲಿತ ವಿರೋಧಿ ಹೇಳಿಕೆ ನೀಡಿರುವ ಸಿದ್ದರಾಮಯ್ಯ ಆ ಆಕ್ರೋಶದ ಬೆಂಕಿಯಿಂದ ಪಾರಾಗಲು ಕಾಯಿನ್ ವಿಚಾರ ತೇಲಿ ಬಿಟ್ಟಿದ್ದಾರೆ.
ಈ ದಲಿತ ವಿರೋಧಿಗೆ ತಕ್ಕ ಪಾಠ ಕಲಿಸಲು ಈಗ ಕಾಲ ಪಕ್ವವಾಗಿದೆ. ಬಿಟ್ ಕಾಯಿನ್ ಹಗರಣದಲ್ಲಿ ಪ್ರಭಾವಿಗಳು ಭಾಗಿಯಾಗಿದ್ದಾರೆಂದು ಆರೋಪಿಸುವ ಸಿದ್ದರಾಮಯ್ಯ ಅವರೇ, ದಾಖಲೆ ಬಿಡುಗಡೆ ಮಾಡಲು ಭಯವೇಕೆ? ಈ ಹಗರಣದ ಬೇರುಗಳು ನಿಮ್ಮ ನಾಯಕರ ಬುಡ ಸುತ್ತಿಕೊಳ್ಳಬಹುದೆಂಬ ಭಯವೇ? ಆರೋಪಿ ಶ್ರೀಕಿ (Bit coin case accused Sriki) ಕಾಂಗ್ರೆಸ್ ನಾಯಕರ ಪುತ್ರರತ್ನರ ಜೊತೆಗಲ್ಲವೇ ಸಂಪರ್ಕ ಹೊಂದಿರುವುದು? ಎಂದು ಪ್ರಶ್ನಿಸಿದೆ.
ಬಿಟ್ ಕಾಯಿನ್ (Bit coin case enquiry) ವಿಚಾರದಲ್ಲಿ ಈಗಾಗಲೇ ತನಿಖೆ ನಡೆಯುತ್ತಿದೆ. ಈ ಬಗ್ಗೆ ಸರ್ಕಾರ ತೆಗೆದುಕೊಂಡ ಕ್ರಮಗಳ ಬಗ್ಗೆಯೂ ಸ್ಪಷ್ಟನೆ ನೀಡಲಾಗಿದೆ. ಆದರೆ, ಕಾಂಗ್ರೆಸ್ ನಾಯಕರು ಅನಗತ್ಯ ವಿವಾದ ಸೃಷ್ಟಿಸುತ್ತಿದ್ದಾರೆ. ಸೂಕ್ತ ದಾಖಲೆಗಳಿದ್ದರೆ ಮಂಡಿಸಿ ಎಂದು ಈಗಾಗಲೇ ಹೇಳಿದ್ದೇನೆ.