ಬೆಂಗಳೂರು: ಮಂಡ್ಯ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಸುಮಲತಾ, ಪುತ್ರ ಅಭಿಷೇಕ್, ಚಲನಚಿತ್ರ ನಟರಾದ ದರ್ಶನ್ ಮತ್ತು ಯಶ್ಗೆ ಭದ್ರತೆ ಒದಗಿಸುವಂತೆ ಕೇಂದ್ರ ಸರ್ಕಾರಕ್ಕೆ ಪತ್ರದ ಮೂಲಕ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅರವಿಂದ ಲಿಬಾವಳಿ ಮನವಿ ಮಾಡಿದ್ದಾರೆ.
ಸುಮಲತಾ, ದರ್ಶನ್, ಯಶ್ಗೆ ಭದ್ರತೆ ಕೋರಿ ಕೇಂದ್ರಕ್ಕೆ ಬಿಜೆಪಿ ಪತ್ರ - Darshan
ಜಿದ್ದಾಜಿದ್ದಿನ ಹಣಾಹಣಿಗೆ ಸಾಕ್ಷಿಯಾಗುತ್ತಿರುವ ಮಂಡ್ಯ ಲೋಕಸಭಾ ಕ್ಷೇತ್ರ- ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಹಾಗೂ ಅವರ ಬೆಂಬಲಕ್ಕೆ ನಿಂತಿರುವ ದರ್ಶನ್, ಯಶ್ ಅವರಿಗೆ ಸಿಆರ್ಪಿಎಫ್ ಭದ್ರತೆ ನೀಡುವಂತೆ ಕೇಂದ್ರಕ್ಕೆ ರಾಜ್ಯ ಬಿಜೆಪಿ ಪತ್ರ
ಸುಮಲತಾ ಅವರ ಪರ ಪ್ರಚಾರ ಮಾಡುತ್ತಿರುವ ನಟರಾದ ದರ್ಶನ್ ನಿವಾಸದ ಮೇಲೆ ಜೆಡಿಎಸ್ ಮತ್ತು ಕಾಂಗ್ರೆಸ್ ಕಾರ್ಯಕರ್ತರು ಕಲ್ಲು ತೂರಾಡಿದ್ದಾರೆ. ಸುಮಲತಾ ಅಂಬರೀಶ್ ನಾಮಪತ್ರ ಸಲ್ಲಿಕೆ ಮಾಡುವ ವೇಳೆ ಮಂಡ್ಯದಲ್ಲಿ ಕೇಬಲ್ ಸಂಪರ್ಕ ಸ್ಥಗಿತಗೊಳಿಸಿದ್ದರು. ಸರ್ಕಾರಿ ಯಂತ್ರ ದುರುಪಯೋಗವಾಗುತ್ತಿದೆ. ದೂರವಾಣಿ ಕದ್ದಾಲಿಕೆ ಮಾಡಲಾಗುತ್ತಿದೆ. ತಮ್ಮ ಕಚೇರಿ ಸಮೀಪ ಗುಪ್ತದಳದ ಸಿಬ್ಬಂದಿ ನಿಯೋಜಿಸಿ ಗೂಢಾಚಾರಿಕೆ ಮಾಡಿಸಲಾಗುತ್ತಿದೆ ಎಂದು ಆರೋಪಿಸಿ ಸುಮಲತಾ ಅವರು ಸಿಎಂ ಕುಮಾರಸ್ವಾಮಿ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದಾರೆ.
ಕೇವಲ ಮುಖ್ಯಮಂತ್ರಿ ಪುತ್ರ ನಿಖಿಲ್ ಕುಮಾರಸ್ವಾಮಿ ವಿರುದ್ಧ ಸುಮಲತಾ ಸ್ಪರ್ಧೆ ಮಾಡಿದ್ದಾರೆ ಎನ್ನುವ ಕಾರಣಕ್ಕಾಗಿಯೇ ಇಷ್ಟೆಲ್ಲಾ ಆಗುತ್ತಿದೆ. ಹಾಗಾಗಿ ಸುಮಲತಾ, ಅಭಿಷೇಕ್, ದರ್ಶನ್ ಮತ್ತು ಯಶ್ಗೆ ಸಿಆರ್ಪಿಎಫ್ ಭದ್ರತೆ ಒದಗಿಸುವಂತೆ ಕೇಂದ್ರ ಗೃಹಸಚಿವ ರಾಜನಾಥ್ ಸಿಂಗ್ ಅವರಿಗೆ ಲಿಂಬಾವಳಿ ಪತ್ರ ಬರೆದಿದ್ದಾರೆ.