ಕರ್ನಾಟಕ

karnataka

ETV Bharat / state

ಅಕ್ಟೋಬರ್​ 7ರಂದು ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸಭೆ : ಎಂಎಲ್ ಸಿ ರವಿಕುಮಾರ್ - ಈಟಿವಿ ಭಾರತ ಕನ್ನಡ

ಅಕ್ಟೋಬರ್​ 7ರಂದು ರಾಜ್ಯ ಬಿಜೆಪಿ ಕಾರ್ಯಕಾರಣೆ ಸಭೆ ನಡೆಯಲಿದೆ ಎಂದು ವಿಧಾನಪರಿಷತ್ ಸದಸ್ಯ ರವಿಕುಮಾರ್ ಹೇಳಿದ್ದಾರೆ. ಸಭೆಯ ಬಳಿಕ ಎರಡು ತಂಡಗಳು ರಾಜ್ಯದಲ್ಲಿ ಪ್ರವಾಸ ನಡೆಸಲಿದೆ ಎಂದು ಇದೇ ವೇಳೆ ಹೇಳಿದರು.

state-bjp-executive-meeting-on-october-7
ಅಕ್ಟೋಬರ್​ 7ರಂದು ರಾಜ್ಯ ಬಿಜೆಪಿ ಕಾರ್ಯಕಾರಣೆ ಸಭೆ : ಎಂಎಲ್ ಸಿ ರವಿಕುಮಾರ್

By

Published : Sep 20, 2022, 10:49 PM IST

ಬೆಂಗಳೂರು :ಅಕ್ಟೋಬರ್​ 7ರಂದು ರಾಜ್ಯ ಬಿಜೆಪಿ ಕಾರ್ಯಕಾರಣೆ ಸಭೆ ನಡೆಯಲಿದೆ ಎಂದು ವಿಧಾನಪರಿಷತ್ ಸದಸ್ಯ ರವಿಕುಮಾರ್ ಹೇಳಿದ್ದಾರೆ. ವಿಧಾನಸೌಧದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಸಭೆ ನಡೆಸಬೇಕು ಎಂದು ಶಾಸಕರು, ಸಂಸದರು, ಪದಾಧಿಕಾರಿಗಳು ಅಪೇಕ್ಷಿಸಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಹೇಳಿದರು.

ಅಕ್ಟೋಬರ್ 9 ರ ನಂತರ ಎರಡು ತಂಡಗಳು ರಾಜ್ಯದಲ್ಲಿ ಪ್ರವಾಸ ನಡೆಸಲಿವೆ. ರಾಜ್ಯಾದ್ಯಂತ 104 ಕ್ಷೇತ್ರಗಳಲ್ಲಿ ಪ್ರವಾಸ ನಡೆಯಲಿದ್ದು, ಕೇಂದ್ರ ಸ‍ಚಿವರುಗಳು ನಮ್ಮ ಪ್ರವಾಸದಲ್ಲಿ ಭಾಗವಹಿಸಲಿದ್ದಾರೆ. ಕಲ್ಯಾಣ ಕರ್ನಾಟಕ, ಹಳೆಯ ಮೈಸೂರು ಭಾಗವನ್ನು ಹೆಚ್ಚು ಗಮನದಲ್ಲಿಟ್ಟುಕೊಂಡಿದ್ದು ಪ್ರವಾಸ ನಡೆಯಲಿದೆ. ಮುಂಬರುವ ದಿನಗಳಲ್ಲಿ ಇಡೀ ರಾಜ್ಯದಲ್ಲಿ ಬಿಜೆಪಿ ಬರಲಿದೆ ಎಂದು ಹೇಳಿದರು.

ಅಕ್ಟೋಬರ್ 2ರಂದು ರಾಜ್ಯದ ಎಲ್ಲ ತಾಲೂಕುಗಳಲ್ಲಿ ಖಾದಿ ಕೇಂದ್ರ ತೆರೆಯುತ್ತೇವೆ. ಪ್ರತಿಯೊಬ್ಬರು ಖಾದಿ ಉಡುಪು ಖರೀದಿ ಮಾಡುವ ಪ್ರತಿಜ್ಞೆ ಮಾಡಿದ್ದೇವೆ ಎಂದು ವಿಧಾನಪರಿಷತ್ ಸದಸ್ಯ ರವಿಕುಮಾರ್ ಹೇಳಿದರು.

ಇದನ್ನೂ ಓದಿ :ಪಿಎಸ್ಐ ಅಕ್ರಮದಲ್ಲಿ ರಾಜಕಾರಣಿಗಳಿದ್ದರೂ ತನಿಖೆ ಆಗಲಿ, ಹಾದಿ ತಪ್ಪಬಾರದು: ಎಚ್​ಡಿಕೆ ಆಗ್ರಹ

ABOUT THE AUTHOR

...view details