ಕರ್ನಾಟಕ

karnataka

ETV Bharat / state

ರಂಗ ಪ್ರವೇಶ ಮಾಡಿದ ರಾಜ್ಯ ಬಿಜೆಪಿ ಚುನಾವಣಾ ಉಸ್ತುವಾರಿಗಳು: ಪ್ರಧಾನ್​ ನೇತೃತ್ವದಲ್ಲಿ ಮಹತ್ವದ ಸಭೆ

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ನಡೆಸಬೇಕಿದ್ದ ರಾಜ್ಯ ನಾಯಕರ ಜೊತೆಗಿನ ಮಹತ್ವದ ಸಭೆಯನ್ನು ಧಮೇಂದ್ರ ಪ್ರಧಾನ್​ ನಡೆಸಿದರು.

state-bjp-election-officials-entered-to-karnataka-election
ರಂಗ ಪ್ರವೇಶ ಮಾಡಿದ ರಾಜ್ಯ ಬಿಜೆಪಿ ಚುನಾವಣಾ ಉಸ್ತುವಾರಿಗಳು: ಪ್ರಧಾನ್​ ನೇತೃತ್ವದಲ್ಲಿ ಮಹತ್ವದ ಸಭೆ

By

Published : Feb 23, 2023, 8:27 PM IST

Updated : Feb 23, 2023, 11:03 PM IST

ಬೆಂಗಳೂರು:ರಾಜ್ಯ ವಿಧಾನಸಭಾ ಚುನಾವಣೆ ಸಿದ್ದತೆ ಹಿನ್ನಲೆಯಲ್ಲಿ ಬಿಜೆಪಿ ಚಾಣಾಕ್ಯ ಅಮಿತ್ ಶಾ ನಡೆಸಬೇಕಿದ್ದ ರಾಜ್ಯ ನಾಯಕರ ಜೊತೆ ಮಹತ್ವದ ಸಭೆಯನ್ನು ಧರ್ಮೇಂದ್ರ ಪ್ರಧಾನ್ ನಡೆಸಿದರು. ಬಿಡುವಿಲ್ಲದ ಪ್ರಚಾರ ಕಾರ್ಯದ ಬಳಲಿಕೆಯಿಂದಾಗಿ ಸಭೆ ಜವಾಬ್ದಾರಿ ಧರ್ಮೇಂದ್ರ ಪ್ರಧಾನ್​ಗೆ ವಹಿಸಿ ಅಮಿತ್ ಶಾ ವಿಶ್ರಾಂತಿಗೆ ತೆರಳಿದರು ಎನ್ನಲಾಗಿದೆ.

ರೇಸ್ ಕೋರ್ಸ್ ರಸ್ತೆಯಲ್ಲಿರುವ ತಾಜ್ ವೆಸ್ಟ್ ಎಂಡ್ ಹೋಟೆಲ್ ಕೇಂದ್ರ ಗೃಹ ಸಚಿವ ಅಮಿತ್ ಶಾ ನೇತೃತ್ವದಲ್ಲಿ ನಡೆಯಬೇಕಿದ್ದ ರಾಜ್ಯ ಬಿಜೆಪಿ ನಾಯಕರ ಮಹತ್ವದ ಸಭೆ ಧರ್ಮೇಂದ್ರ ಪ್ರಧಾನ್ ನೇತೃತ್ವದಲ್ಲಿ ನಡೆಯಿತು.

ಸಭೆಯಲ್ಲಿ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್, ರಾಜ್ಯ ಚುನಾವಣಾ ಸಹ ಉಸ್ತುವಾರಿಗಳಾದ ಮನ್ಸುಕ್ ಮಾಂಡವೀಯ, ಅಣ್ಣಾಮಲೈ, ಕೇಂದ್ರ ಸಂಸದೀಯ ಮಂಡಳಿ ಸದಸ್ಯ ಹಾಗು ರಾಜ್ಯ ಬಿಜೆಪಿ ಹಿರಿಯ ನಾಯಕ ಬಿ.ಎಸ್‌.ಯಡಿಯೂರಪ್ಪ, ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌, ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ, ಮಾಜಿ ಸಿಎಂ ಡಿ.ವಿ.ಸದಾನಂದ ಗೌಡ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ, ತೇಜಸ್ವಿ ಸೂರ್ಯ,ಬಿಜೆಪಿ ಮಹಿಳಾ ಮೋರ್ಛಾ ರಾಜ್ಯಾಧ್ಯಕ್ಷೆ ಗೀತಾ ವಿವೇಕಾನಂದ, ಬಿಬಿಎಂಪಿ ಮಾಜಿ ಮೇಯರ್​ಗಳು ಸೇರಿದಂತೆ 60 ಆಹ್ವಾನಿತರು ಭಾಗಿಯಾಗಿದ್ದರು.

ಯಾತ್ರೆಗಳಿಗೆ ಟಕ್ಕರ್​ ಕೊಡಲು ರಥಯಾತ್ರೆ ಆರಂಭ: ಚುನಾವಣಾ ಪ್ರಚಾರದ ಭಾಗವಾಗಿ ಕಾಂಗ್ರೆಸ್ ಬಸ್ ಯಾತ್ರೆ, ಜೆಡಿಎಸ್​ನ ಪಂಚರತ್ನ ಯಾತ್ರೆಗೆ ಟಕ್ಕರ್ ಕೊಡಲು ನಾಲ್ಕು ದಿಕ್ಕಿನಿಂದ ಏಕಕಾಲಕ್ಕೆ ರಥಯಾತ್ರೆ ಆರಂಭಕ್ಕೆ ಮಾಡಿಕೊಂಡಿರುವ ಸಿದ್ದತೆಗಳ ಕುರಿತು ಪ್ರಧಾನ್ ಮಾಹಿತಿ ಪಡೆದುಕೊಂಡರು. ನಂತರ ವಿವಿಧ ಜಿಲ್ಲೆಗಳಲ್ಲಿ ಆಯೋಜನೆ ಮಾಡುತ್ತಿರುವ ಮೋರ್ಚಾಗಳ ಸಮಾವೇಶಗಳ ಸಿದ್ದತೆ ಕುರಿತು ವಿವರ ಪಡೆದುಕೊಂಡರು.

ಫಲಾನುಭವಿಗಳ ಸಮಾವೇಶಗಳ ಆಯೋಜನೆ, ಎಲ್ಇಡಿ ವ್ಯಾನ್ ಸಮಿತಿ ರಚನೆ, ಪ್ರಣಾಳಿಕೆ ತಯಾರಿ ಅಭಿಯಾನದ ಕುರಿತು ಸಮಗ್ರ ವಿವರ ಪಡೆದುಕೊಂಡರು, ಮೋರ್ಚಾಗಳ ಸಂಘಟನೆ, ಕ್ಷೇತ್ರಗಳಲ್ಲಿನ ಸ್ಥಿತಿಗತಿ, ಹಳೆ ಮೈಸೂರು ಭಾಗದ ಸಂಘಟನೆ, ಗೆಲ್ಲುವ ಸಾಧ್ಯತೆ ಇರುವ ಕ್ಷೇತ್ರಗಳ ಪಟ್ಟಿ ಸೇರಿದಂತೆ ಹಿಂದಿನ ಸಭೆಯಲ್ಲಿ ನೀಡಲಾಗಿದ್ದ ಕೆಲವೊಂದು ಟಾಸ್ಕ್​ಗಳ ಪರಾಮರ್ಶೆ ಮಾಡಿದ್ದು, ಅಮಿತ್ ಶಾ ಸೂಚನೆಯಂತೆ ಮತ್ತೆ ಸಭೆ ನಡೆಸೋಣ ಎನ್ನುವ ನಿರ್ಧಾರದೊಂದಿಗೆ ಸಭೆ ಮುಗಿಸಲಾಯಿತು ಎಂದು ತಿಳಿದುಬಂದಿದೆ.

ಬಿಎಸ್​ವೈ ನಿವಾಸದಲ್ಲಿ ಸಭೆ: ಈ ಸಭೆ ಆರಂಭಕ್ಕೂ ಮುನ್ನ ಯಡಿಯೂರಪ್ಪ ನಿವಾಸಕ್ಕೆ ಕೇಂದ್ರ ಸಚಿವರಾದ ಧರ್ಮೇಂದ್ರ ಪ್ರಧಾನ್ ಹಾಗೂ ಮಾನ್ಸುಕ್ ಮಾಂಡವೀಯ ಭೇಟಿ ನೀಡಿದರು. ಯಡಿಯೂರಪ್ಪರನ್ನು ಭೇಟಿ ಮಾಡಿ ಸೌಹಾರ್ದಯುತ ಚರ್ಚೆ ನಡೆಸಿದರು. ರಾಜ್ಯ ಚುನಾವಣಾ ಉಸ್ತುವಾರಿಗಳಾದ ಹಿನ್ನೆಲೆಯಲ್ಲಿ ಹಿರಿಯ ನಾಯಕ ಯಡಿಯೂರಪ್ಪ ಅವರಿಂದ ಕೆಲವು ಸಲಹೆ ಪಡೆದುಕೊಂಡರು.

ಇದನ್ನೂ ಓದಿ:ನಾಳೆಯಿಂದಲೇ ಬೇಸಿಗೆ ಶುರು, ದಿಢೀರ್ ತಾಪಮಾನ ಏರಿಕೆ ಸಾಧ್ಯತೆ: ಹವಾಮಾನ ಇಲಾಖೆ

Last Updated : Feb 23, 2023, 11:03 PM IST

ABOUT THE AUTHOR

...view details