ಕರ್ನಾಟಕ

karnataka

ETV Bharat / state

ರಾಜ್ಯ ಬಿಜೆಪಿ ಕೋರ್ ಕಮಿಟಿ ಸಭೆ ಆರಂಭ : ವರ್ಚುವಲ್ ಮೂಲಕ ನಾಯಕರು ಭಾಗಿ - ರಾಜ್ಯ ಬಿಜೆಪಿ ಕೋರ್ ಕಮಿಟಿ ಸಭೆ

ರಾಜ್ಯದಲ್ಲಿ ಕೊರೊನಾ ಸ್ಥಿತಿ ಕೈ ಮೀರುತ್ತಿರುವ ಹಿನ್ನೆಲೆ, ಸರ್ಕಾರದ ಕಾರ್ಯದಲ್ಲಿ ಪಕ್ಷ ಯಾವ ರೀತಿ ನೆರವು ನೀಡಬಹುದು. ಬೆಡ್ ಕೊರತೆ, ಆಕ್ಸಿಜನ್ ಬೆಡ್, ಐಸಿಯು, ವೆಂಟಿಲೇಟರ್ ಸಮಸ್ಯೆ ಹೆಚ್ಚಾಗುತ್ತಿದೆ. ಯಾವ ರೀತಿ ಜನರ ನೆರವಿಗೆ ಧಾವಿಸಬೇಕು ಎಂಬುದರ ಕುರಿತಂತೆ ಚರ್ಚೆ..

cm bs yadiyurappa
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ

By

Published : May 8, 2021, 6:45 PM IST

ಬೆಂಗಳೂರು : ರಾಜ್ಯ ಬಿಜೆಪಿಯ ಮಹತ್ವದ ಕೋರ್ ಕಮಿಟಿ ಸಭೆ ಆರಂಭಗೊಂಡಿದೆ. ಕೋವಿಡ್ ಕಾರಣದಿಂದಾಗಿ ಬಿಜೆಪಿ ಕಚೇರಿ ಬದಲು ವರ್ಚುವಲ್ ಮೂಲಕ ಸಭೆ ನಡೆಸಲಾಗುತ್ತಿದೆ.

ಅಧಿಕೃತ ನಿವಾಸ ಕಾವೇರಿಯಿಂದಲೇ ವರ್ಚುವಲ್ ಮೂಲಕ ಕೋರ್ ಕಮಿಟಿ ಸಭೆಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭಾಗಿಯಾಗಿದ್ದಾರೆ.

ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್, ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ, ರಾಜ್ಯ ಸಂಘಟನಾ ಕಾರ್ಯದರ್ಶಿ ಅರುಣ್ ಕುಮಾರ್, ಕೇಂದ್ರ ಸಚವ ಡಿ.ವಿ ಸದಾನಂದಗೌಡ, ಪ್ರಲ್ಹಾದ್ ಜೋಷಿ, ಡಿಸಿಎಂಗಳಾದ ಗೋವಿಂದ ಕಾರಜೋಳ, ಲಕ್ಷ್ಮಣ ಸವದಿ,ಅಶ್ವತ್ಥನಾರಾಯಣ್, ಸಚಿವರಾದ ಅಶೋಕ್, ಶ್ರೀರಾಮುಲು, ರಾಜ್ಯ ಉಪಾಧ್ಯಕ್ಷ ನಿರ್ಮಲ್ ಕುಮಾರ್ ಸುರಾನಾ ಅವರಿರುವ ಸ್ಥಳಗಳಿಂದಲೇ ವರ್ಚುವಲ್ ಮೂಲಕ ಸಭೆಯಲ್ಲಿ ಭಾಗಿಯಾಗಿದ್ದಾರೆ.

ಕೊರೊನಾ ನಿಯಂತ್ರಣದಲ್ಲಿ ಪಕ್ಷದ ಸಾತ್, ಕೊರೊನಾ ನಿಯಂತ್ರಣ ವಿಚಾರದಲ್ಲಿ ಪ್ರತಿ ಪಕ್ಷದ ಆರೋಪಕ್ಕೆ ತಿರುಗೇಟು ನೀಡುವುದು ಸೇರಿದಂತೆ ಉಪಚುನಾವಣಾ ಫಲಿತಾಂಶ ಕುರಿತು ಚರ್ಚೆ ನಡೆಯುವ ಸಾಧ್ಯತೆ ಇದೆ.

ಇದನ್ನೂ ಓದಿ:ಜೆಜೆ ನಗರ ಹೆರಿಗೆ ಆಸ್ಪತ್ರೆಯಲ್ಲಿ 30 ಆಕ್ಸಿಜನ್ ಸೌಲಭ್ಯದ ಹಾಸಿಗೆ ಲಭ್ಯ : ಗೌರವ್ ಗುಪ್ತಾ

ರಾಜ್ಯದಲ್ಲಿ ಕೊರೊನಾ ಸ್ಥಿತಿ ಕೈ ಮೀರುತ್ತಿರುವ ಹಿನ್ನೆಲೆ, ಸರ್ಕಾರದ ಕಾರ್ಯದಲ್ಲಿ ಪಕ್ಷ ಯಾವ ರೀತಿ ನೆರವು ನೀಡಬಹುದು. ಬೆಡ್ ಕೊರತೆ, ಆಕ್ಸಿಜನ್ ಬೆಡ್, ಐಸಿಯು, ವೆಂಟಿಲೇಟರ್ ಸಮಸ್ಯೆ ಹೆಚ್ಚಾಗುತ್ತಿದೆ. ಯಾವ ರೀತಿ ಜನರ ನೆರವಿಗೆ ಧಾವಿಸಬೇಕು.

ಇದಕ್ಕೆ ಪಕ್ಷವೇನು ಮಾಡಬಹುದು ಎನ್ನುವ ಕುರಿತು ಚರ್ಚೆ ನಡೆಯಲಿದೆ. ಈಗಾಗಲೇ ಬಿಜೆಪಿ ಸಹಾಯವಣಿಯನ್ನು ಆರಂಭಿಸಿದ್ದು, ಮತ್ತಿನ್ನೇನು ಕಾರ್ಯಕ್ರಮ ರೂಪಿಸಬಹುದು, ಹೈಕಮಾಂಡ್​ನ ಸಲಹೆ, ಸೂಚನೆಗಳೇನು ಎನ್ನುವ ಕುರಿತು ಚರ್ಚೆ ನಡೆಯಲಿದೆ ಎಂದು ತಿಳಿದು ಬಂದಿದೆ.

ABOUT THE AUTHOR

...view details