ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವತಿಯಿಂದ ರಾಷ್ಟ್ರೀಯ ಸಫಾಯಿ ಕರ್ಮಚಾರಿ ನಾಯಕರು, ಪೌರಕಾರ್ಮಿಕರ ಪಿತಾಮಹರಾದ ದಿವಂಗತ ಐಪಿಡಿ ಸಾಲಪ್ಪ ಹೆಸರಿನಲ್ಲಿ ಸರ್ಕಾರದ ಆದೇಶದಂತೆ ಒಬ್ಬರಿಗೆ ರಾಜ್ಯ ಮಟ್ಟದ ಪ್ರಶಸ್ತಿ ನೀಡಲು ತೀರ್ಮಾನಿಸಲಾಗಿದೆ.
ಪೌರಕಾರ್ಮಿಕರ ಪಿತಾಮಹ ದಿವಂಗತ ಸಾಲಪ್ಪ ಹೆಸರಿನಲ್ಲಿ ಪಾಲಿಕೆಯಿಂದ ರಾಜ್ಯ ಪ್ರಶಸ್ತಿ - ಸಾಲಪ್ಪ ಹೆಸರಿನಲ್ಲಿ ಪಾಲಿಕೆಯಿಂದ ರಾಜ್ಯ ಪ್ರಶಸ್ತಿ
ಸಫಾಯಿ ಕರ್ಮಚಾರಿಗಳ ಹಾಗೂ ಪೌರಕಾರ್ಮಿಕರ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿರುವ ಸಾಧಕರಿಗೆ ಐಡಿಪಿ ಸಾಲಪ್ಪ ಹೆಸರಿನಲ್ಲಿ ನೀಡುವ ಪ್ರಶಸ್ತಿಗಾಗಿ ವಿವರವಾದ ಮಾಹಿತಿಯನ್ನು ಬಿಬಿಎಂಪಿಗೆ ನೀಡಬೇಕೆಂದು ಸೂಚಿಸಲಾಗಿದೆ.
ಪೌರಕಾರ್ಮಿಕರ ಪಿತಾಮಹ ದಿವಂಗತ ಸಾಲಪ್ಪ
ಈ ಪ್ರಶಸ್ತಿ ಪಡೆಯಲು ಸಫಾಯಿ ಕರ್ಮಚಾರಿಗಳ ಹಾಗೂ ಪೌರಕಾರ್ಮಿಕರ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿರುವ ಸಾಧಕರು ಪ್ರಸ್ತುತ ಸಾಲಿನ ಪ್ರಶಸ್ತಿಗಾಗಿ ವಿವರವಾದ ಮಾಹಿತಿಯನ್ನೊಳಗೊಂಡ ಅರ್ಜಿಯನ್ನು15 ದಿನಗಳೊಳಗಾಗಿ ಪ್ರಶಸ್ತಿಯ ಆಯ್ಕೆ ಸಮಿತಿಯ ಅಧ್ಯಕ್ಷರಾದ ಮುಖ್ಯ ಆಯುಕ್ತರ ಕಚೇರಿಗೆ ಸಲ್ಲಿಸಬೇಕು ಎಂದು ಬಿಬಿಎಂಪಿ ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ.