ಬೆಂಗಳೂರು :ರಾಜ್ಯದಲ್ಲಿ ಮಾದಕ ವಸ್ತುಗಳ ಹಾವಳಿ ಹೆಚ್ಚಿದೆ. ಬೇರು ಸಮೇತ ಕಿತ್ತೊಗೆಯಲು ಮುಂದಾಗಿರುವ ಗೃಹ ಇಲಾಖೆ ಸದ್ಯ ಪೊಲೀಸರಿಗೆ ಫುಲ್ ಪವರ್ ಕೊಟ್ಟು ಎಲ್ಲೆಡೆ ಮಟ್ಟ ಹಾಕಲು ಸೂಚನೆ ಕೊಟ್ಡಿದೆ. ಹೀಗಾಗಿ, ಸದ್ಯ ಸ್ಯಾಂಡಲ್‌ವುಡ್ ಡ್ರಗ್ಸ್ ಮಾಫಿಯಾಕ್ಕೆ ಮೊದಲು ಪೊಲೀಸರು ತನಿಖೆಗಿಳಿದಿದ್ದು, ಪ್ರತಿಷ್ಟಿತ ನಟಿಯರು ಹಾಗೆ ದೊಡ್ಡ ದೊಡ್ಡ ಪೆಡ್ಲರ್ಗೆ ಬಲೆ ಬೀಸಿದ್ದಾರೆ. ಅಷ್ಟು ಮಾತ್ರವಲ್ಲದೇ ಪೇಜ್ ಥ್ರಿ ನಟ-ನಟಿಯರು, ಉದ್ಯಮಿಗಳು, ರಾಜಕಾರಣಿಗಳ ಮಕ್ಕಳ ಬಗ್ಗೆ ಸಾಕ್ಷ್ಯಾಧಾರ ಕಲೆ ಹಾಕಿದ್ದು, ಆರೋಪಿಗಳನ್ನ ಮಟ್ಟ ಹಾಕಲು ಮುಂದಾಗಿದ್ದಾರೆ.
ಇಷ್ಟು ಮಾತ್ರವಲ್ಲದೇ ಮಾದಕ ವಸ್ತುಗಳು ಹೇಗೆ ಎಲ್ಲಿಂದ ಯಾರಿಗೆ ಮಾರಾಟವಾಗ್ತಿದೆ ಅನ್ನೋದರ ಬಗ್ಗೆ ಕೂಡ ಕಣ್ಣಿಟ್ಟಿದ್ದಾರೆ. ಇದಕ್ಕಾಗಿ ಶ್ವಾನಗಳನ್ನ ಮುಂದೆ ಬಿಟ್ಟು ಕೆಎಸ್ಆರ್ಟಿಸಿ ಬಸ್, ಗೂಡ್ಸ್ ವಾಹನ, ರೈಲ್ವೆ ನಿಲ್ದಾಣ, ಏರ್ಪೋರ್ಟ್, ತರಕಾರಿ ವಾಹನಗಳ ಮೇಲೆ ನಿಗಾ ಇಟ್ಟು ತಪಾಸಣೆ ನಡೆಸಿ ಬಹುತೇಕ ಗಾಂಜಾ ಜಪ್ತಿ ಮಾಡಿದ್ದಾರೆ. ಹಾಗೆ ಡ್ರಗ್ಸ್ ಸೇವನೆ ಯಾರು ಮಾಡ್ತಿದ್ದಾರೆ, ಇವರಿಗೆ ಯಾರು ಪೆಡ್ಲಿಂಗ್ ಮಾಡ್ತಿದ್ದಾರೆ. ಅನ್ನೋದರ ಮಾಹಿತಿ ಕೂಡ ಕಲೆ ಹಾಕಿ ಆರೋಪಿಗಳನ್ನ ಬಂಧಿಸಿ ಎನ್ಡಿಪಿಎಸ್ ಕಾಯ್ದೆಯಡಿ ಜೈಲಿಗೆ ಹಾಕುತ್ತಿದ್ದಾರೆ.
ಎಲ್ಲಿಂದ ಬರುತ್ತೆ ಮಾದಕ ವಸ್ತು?:ಮಾದಕ ಲೋಕಕ್ಕೆ ಒಮ್ಮೆ ಅಂಟಿಕೊಂಡ್ರೆ ಅದರಿಂದ ಹೊರಗಡೆ ಬರುವುದು ಬಹಳ ಕಷ್ಟ. ಸದ್ಯ ಪೊಲೀಸರ ಮಾಹಿತಿ ಪ್ರಕಾರ ಮೂರು ಹಂತದಲ್ಲಿ ಈ ದಂಧೆ ನಡೆಯುತ್ತದೆ. ಚಿಕ್ಕವಯಸ್ಸಿನಲ್ಲೇ ಪೋಷಕರ ಆಸರೆ ಇಲ್ಲದೆ ಕೊಳಗೇರಿಗಳಲ್ಲಿ ಬೆಳೆಯುವ ಮಕ್ಕಳು ವೈಟ್ನರ್, ಪೆಟ್ರೋಲ್ ವಾಸನೆಯಿಂದ ನಶೆ ಏರಿಸುವುದು. ಸ್ವಲ್ಪ ಮಧ್ಯಮ ವರ್ಗದವರು ಗಾಂಜಾ ನಶೆಗೆ ಅಂಟಿ ಅಮಲು ಏರಿಸ್ತಾರೆ. ಮೂರನೆಯದ್ದಾಗಿ ಹೈಟೆಕ್ ಡ್ರಗ್ಸ್ ಕೋಕೆನ್, ಎಂಡಿಎಂಎಂ, ಚರಸ್, ಹಾಶೀಶ್ ಆಯಿಲ್ ಬಳಕೆ ಮಾಡ್ತಾರೆ. ಇವುಗಳನ್ನ ವಿದೇಶ, ಹೊರ ರಾಜ್ಯಗಳಿಂದ ವಿಮಾನ ಪ್ರಯಾಣ, ಸಮುದ್ರಯಾನದ ಮೂಲಕ ಗಾಂಜಾ ತರ್ತಾರೆ.
ವರ್ಷಗಳಲ್ಲಿ ಬೆಂಗಳೂರು ಪೊಲೀಸರು ದಾಖಲಿಸಿದ ಪ್ರಕರಣ ನೋಡುವುದಾದ್ರೆ 2018ರಲ್ಲಿ 286 ಪ್ರಕರಣ, 2019-730 ಪ್ರಕರಣ, 2020: 1540 ಪ್ರಕರಣ. ವಿದೇಶಿಯರು ಕೂಡ ಡ್ರಗ್ಸ್ ಪ್ರಕರಣದಲ್ಲಿ ಭಾಗಿಯಾಗಿದ್ದು, ಇವರುಗಳನ್ನ ಬಂಧಿಸಿದ್ದು 2018:60 ಮಂದಿ, 2019:49 ಮಂದಿ, 2020: 48 ಮಂದಿಯನ್ನು ಬಂಧಿಸಲಾಗಿದೆ.
ಇತ್ತೀಚೆಗೆ ಎನ್ಸಿಬಿ ಅಧಿಕಾರಿಗಳು ಸ್ಯಾಂಡಲ್‌ವುಡ್ ಡ್ರಗ್ಸ್ ಮಾಫಿಯಾದ ಪ್ರಕರಣದಲ್ಲಿ ನಟಿಯರಿಬ್ಬರನ್ನ ಬಂಧಿಸಿದ್ದಾರೆ. ಹಾಗೆ ಸದ್ಯ ಪೇಜ್ ಥ್ರಿ ನಟರಿಗೆ ನೋಟಿಸ್ ಕೊಟ್ಟು ವಿಚಾರಣೆಗೆ ಕರೆಯುತ್ತಿದ್ದಾರೆ. ಸ್ಯಾಂಡಲ್‌ವುಡ್ ಡ್ರಗ್ಸ್ ಮಾಫಿಯಾ ಬೆಳಕಿಗೆ ಬರ್ತಿದ್ದಂತೆ ಬೆಂಗಳೂರು ಪೊಲೀಸರು ಎಲ್ಲೆಡೆ ದಾಳಿ ನಡೆಸಿದ್ರು. ಹೀಗಾಗಿ, ಸ್ಯಾಂಡಲ್‌ವುಡ್ ಡ್ರಗ್ಸ್ ಮಾಫಿಯಾ ಬೆಳಕಿಗೆ ಬಂದ ನಂತರದ ಮಾಹಿತಿ ಇಲ್ಲಿದೆ.
ಪಶ್ಚಿಮ ವಿಭಾಗ : 41.75 ಕೆಜಿ ಗಾಂಜಾ, 600. ಗ್ರಾಂ ಅಫೀಮ್, 90ಗ್ರಾಂ ಬ್ರೌನ್ ಶುಗರ್ ಒಟ್ಟು 54 ಪೆಡ್ಲರ್‌ಗಳನ್ನ ಬಂಧಿಸಲಾಗಿದೆ.