ಕರ್ನಾಟಕ

karnataka

ETV Bharat / state

ಬಿಬಿಎಂಪಿ ಮೈತ್ರಿ ಆಡಳಿತದ ಸ್ಥಾಯಿ ಸಮಿತಿ ಅಧಿಕಾರಾವಧಿ ಮೊಟಕು: 27 ರಂದೇ ಚುನಾವಣೆ ಸಾಧ್ಯತೆ - ಪದ್ಮನಾಭ ರೆಡ್ಡಿ

ಮೈತ್ರಿ ಆಡಳಿತದ 12 ಸ್ಥಾಯಿ ಸಮಿತಿಗಳ ಚುನಾವಣೆಯೂ ಮೇಯರ್ ಚುನಾವಣೆ ಜೊತೆಗೆ ನಡೆಯುವುದು ಬಹುತೇಕ ಖಚಿತವಾಗಿದ್ದು, 27 ರಂದೇ ಸ್ಥಾಯಿ ಸಮಿತಿಗಳ ಚುನಾವಣೆ ನಡೆಯಲಿದೆಯೆಂದು ವಿರೋಧ ಪಕ್ಷದ ನಾಯಕ ಪದ್ಮನಾಭ ರೆಡ್ಡಿ ತಿಳಿಸಿದ್ದಾರೆ.

ಪದ್ಮನಾಭ ರೆಡ್ಡಿ

By

Published : Sep 20, 2019, 6:52 PM IST

ಬೆಂಗಳೂರು :ಬಿಬಿಎಂಪಿಯಲ್ಲಿ ಸದ್ಯ ಅಧಿಕಾರದಲ್ಲಿರುವ ಮೈತ್ರಿ ಆಡಳಿತದ 12 ಸ್ಥಾಯಿ ಸಮಿತಿಗಳ ಚುನಾವಣೆಯೂ ಮೇಯರ್ ಚುನಾವಣೆ ಜೊತೆಗೆ ನಡೆಯುವುದು ಬಹುತೇಕ ಖಚಿತವಾಗಿದ್ದು, ಸೆಪ್ಟೆಂಬರ್‌ 27 ರಂದೇ ಸ್ಥಾಯಿ ಸಮಿತಿಗಳ ಚುನಾವಣೆ ನಡೆಯಲಿದೆಯೆಂದು ವಿರೋಧ ಪಕ್ಷದ ನಾಯಕ ಪದ್ಮನಾಭ ರೆಡ್ಡಿ ಹೇಳಿದ್ದಾರೆ.

ಮೈತ್ರಿ ಆಡಳಿತದ ಸ್ಥಾಯಿ ಸಮಿತಿ ಅಧಿಕಾರಾವಧಿ ಮೊಟಕು : 28 ರಂದೇ ಚುನಾವಣೆ ಸಾಧ್ಯತೆ

ಕೆಎಂಸಿ ಕಾಯ್ದೆ ಪ್ರಕಾರ, ಸ್ಥಾಯಿ ಸಮಿತಿಗಳಿಗೆ ಒಂದು ವರ್ಷ ಅಧಿಕಾರಾವಧಿಯಿದ್ದು, ಈ ಪ್ರಕಾರ ಡಿಸೆಂಬರ್ ತಿಂಗಳಿನವರೆಗೆ ಅಧಿಕಾರಾವಧಿ ಇರಲಿದೆ. ಆದರೆ ಮುಂದಿನ ಬಾರಿ ಬಿಜೆಪಿ ಮೇಯರ್ ಸ್ಥಾನ ಅಲಂಕರಿಸುವುದು ಬಹುತೇಕ ಖಚಿತವಾಗಿರುವುದುದರಿಂದ, ಮೇಯರ್ ಚುನಾವಣೆಯ ಜೊತೆಯೇ ಸ್ಥಾಯಿ ಸಮಿತಿಗಳಿಗೂ ಚುನಾವಣೆ ನಡೆಸುವಂತೆ ಒತ್ತಾಯಿಸಿ ಬಿಜೆಪಿ, ರಾಜ್ಯ ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದರು.

ಬಿಬಿಎಂಪಿಯ ಮೇಯರ್, ಉಪಮೇಯರ್ ಚುನಾವಣೆಯ ಜೊತೆಗೆ 12 ಸ್ಥಾಯಿ ಸಮಿತಿ ಚುನಾವಣೆಗೂ ಸದ್ಯ ಅಡ್ವೊಕೇಟ್ ಜನರಲ್ ಒಪ್ಪಿಗೆ ಸೂಚಿಸಿದ್ದು, ಸದ್ಯದಲ್ಲೇ ಪ್ರಾದೇಶಿಕ ಚುನಾವಣಾ ಕಚೇರಿಯಿಂದ ಆದೇಶ ಬರಲಿದೆ. ಎಜಿ ಅವರ ಕಾನೂನು ಸಲಹೆಯ ಪ್ರಕಾರ,1998, 2011 ರಲ್ಲಿ ಸ್ಥಾಯಿ ಸಮಿತಿಗಳ ಚುನಾವಣೆ ಮೇಯರ್ ಚುನಾವಣೆ ಜೊತೆಗೆ ನಡೆಸಬೇಕೆಂದು ಹೇಳಿದ ತೀರ್ಪುಗಳಿವೆ. ಹೀಗಾಗಿ ಅಡ್ವೋಕೇಟ್ ಜನರಲ್​, ಮೇಯರ್ ಚುನಾವಣೆ ಜೊತೆಗೆ ಸ್ಥಾಯಿ ಸಮಿತಿ ಚುನಾವಣೆ ನಡೆಸುವಂತೆ ಸೂಚಿಸಿದೆ. ಕಳೆದ ಮೂರು ವರ್ಷಗಳಲ್ಲೂ ತಡವಾಗಿ ಚುನಾವಣೆ ನಡೆಸಿದ್ದು ಕಾಂಗ್ರೆಸ್-ಜೆಡಿಎಸ್ ದುರಾಡಳಿತಕ್ಕೆ ಇತಿಶ್ರೀ ಹಾಡಲಾಗಿದೆಯೆಂದು ವಿಪಕ್ಷದ ನಾಯಕ ಪದ್ಮನಾಭ ರೆಡ್ಡಿ ತಿಳಿಸಿದರು.

ಆದ್ರೆ ಪ್ರಸ್ತುತ ಇರುವ ಸ್ಥಾಯಿ ಸಮಿತಿಗಳ ಅಧ್ಯಕ್ಷರು, ಅಧಿಕಾರಕ್ಕಾಗಿ ಕೋರ್ಟ್ ಮೆಟ್ಟಿಲೇರುವ ಸಾಧ್ಯತೆ ಕೂಡಾ ಇದೆ.

ABOUT THE AUTHOR

...view details