ಬೆಂಗಳೂರು: ತಮ್ಮ ಅವಧಿ ಮುಗಿದಿಲ್ಲ ಡಿಸೆಂಬರ್ ನಾಲ್ಕರವರೆಗೂ ಅಧಿಕಾರವಿದೆ ಎಂದು ಹೇಳಿ ಹೈಕೋರ್ಟ್ ಮೆಟ್ಟಿಲೇರಿ, ಕಾನೂನು ಹೋರಾಟ ಮಾಡುವ ಮಹಾನಗರ ಪಾಲಿಕೆ ಸ್ಥಾಯಿ ಸಮಿತಿ ಅಧ್ಯಕ್ಷರು ಕಚೇರಿಗೆ ಚಕ್ಕರ್ ಹೊಡೆಯುತ್ತಿರುವ ಪ್ರಸಂಗ ಬೆಳಕಿಗೆ ಬಂದಿದೆ.
ಬಿಬಿಎಂಪಿಯ ಸ್ಥಾಯಿ ಸಮಿತಿ ಅಧ್ಯಕ್ಷರು ರಾಜಧಾನಿಗೆ ಮೂಲಸೌಕರ್ಯಗಳನ್ನು ಪಾಲಿಕೆಯ ಸ್ಥಾಯಿ ಸಮಿತಿ ಅಧ್ಯಕ್ಷರು ಪಾಲಿಕೆಯಲ್ಲಿ ಮೇಯರ್ ಉಪಮೇಯರ್ ಬದಲಾದಾಗ, ತಮ್ಮ ಅವಧಿ ಇನ್ನೂ ಮುಗಿದಿಲ್ಲ , ಇದನ್ನು ಮೊಟಕುಗೊಳಿಸಬಾರದು ಎಂದು ಪಟ್ಟು ಹಿಡಿದಿದ್ರು. ಆದ್ರೆ ಬಿಬಿಎಂಪಿಯಲ್ಲಿ ಸಾರ್ವಜನಿಕರು ಏನಾದ್ರು ಸಹಕಾರ ಆಗ್ಬೇಕು ಅಂತ ಪಾಲಿಕೆಯ ಸ್ಥಾಯಿ ಸಮಿತಿ ಕಚೇರಿಯ ಬಾಗಿಲು ತೆಗೆದ್ರೆ ಖಾಲಿ ಖಾಲಿ ಕುರ್ಚಿಗಳ ದರ್ಶನವಾಗುತ್ತೆ.
ಒಟ್ಟು ಹನ್ನೆರಡು ಸ್ಥಾಯಿ ಸಮಿತಿಗಳಿಗೆ ತಲಾ ಒಬ್ಬ ಅಧ್ಯಕ್ಷ ಹಾಗೂ ಹನ್ನೊಂದು ಸದಸ್ಯರಿರುತ್ತಾರೆ. ಇವರ್ಯಾರೂ ವಾರದಲ್ಲಿ ಒಂದು ಬಾರಿಯೂ ಕಚೇರಿಗೆ ಬರೋದಿಲ್ಲ ಎಂಬ ಆರೋಪ ಕೇಳಿ ಬಂದಿದೆ. ಕೇವಲ ಅಧಿಕಾರ ಸ್ವೀಕರಿಸಿದ ಮರುದಿನ ಕಚೇರಿ ಪೂಜೆಗಷ್ಟೇ ಸೀಮಿತವಾಗಿರುವ ಇವರು ಕಚೇರಿ ಕಡೆಗೆ ಮುಖ ಮಾಡಿಲ್ಲ ಎನ್ನಲಾಗುತ್ತಿದೆ. ಶಿಕ್ಷಣ ಸ್ಥಾಯಿ ಸಮಿತಿಯ ಇಮ್ರಾನ್ ಪಾಷಾ ಬಿಟ್ಟರೆ, ಬೇರೆ ಯಾರೂ ಕಚೇರಿಗಳಿವೆ ಬರುತ್ತಿಲ್ಲ. ಸಾಕಷ್ಟು ಯೋಜನೆ ಕಾಮಗಾರಿಗಳ ಪ್ರಗತಿ ಪರಿಶೀಲನೆ ಕುರಿತು ವಾರಕ್ಕೊಂದು ಬಾರಿ ಕಡ್ಡಾಯ ಸಭೆ ನಡೆಸುವ ಅಗತ್ಯವಿದ್ರೂ ಸಭೆಗಳು ನಡೆಯೋದಿಲ್ಲ.
ಈ ಬಗ್ಗೆ ಮಾತನಾಡಿದ ಆರ್ ಟಿ ಐ ಕಾರ್ಯಕರ್ತ ಅಮರೇಶ್, ವಿವಿಧ ಕೆಲಸ ಕಾರ್ಯಗಳಿಗಾಗಿ ಸಾರ್ವಜನಿಕರು ಬಿಬಿಎಂಪಿಗೆ ಬರುತ್ತಿರುತ್ತಾರೆ. ವಾರಕ್ಕೊಂದು ಬಾರಿಯಾದರು ಸ್ಥಾಯಿ ಸಮಿತಿಯ ಅಧ್ಯಕ್ಷರು, ಸದಸ್ಯರು ಸಭೆ ನಡೆಸಬೇಕು. ಆದ್ರೆ ಒಂದು ಸಭೆಯೂ ನಡೆಯೋದಿಲ್ಲ. ಅವರಿಗೆ ಕೊಡುವ ಐಶಾರಾಮಿ ಕಾರು, ಕಚೇರಿಗಳು ಎಲ್ಲಾ ವ್ಯರ್ಥ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.