ಕರ್ನಾಟಕ

karnataka

ETV Bharat / state

ಕರ್ತವ್ಯಲೋಪ ಎಸಗಿದ 6 ಮಂದಿ ಸಿಬ್ಬಂದಿ ಅಮಾನತು ಮಾಡಿದ ಚುನಾವಣಾ ಆಯೋಗ

15 ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆ ಸಂದರ್ಭ ಕರ್ತವ್ಯಲೋಪ ಎಸಗಿದ 6 ಜನ ಸಿಬ್ಬಂದಿಯನ್ನು ಚುನಾವಣಾ ಆಯೋಗ ಅಮಾನತು ಮಾಡಿದೆ.

KN_BNG_08_ELECTION_COMMISSION_PN_SCRIPT_9020923
ಉಪ ಚುನಾವಣೆ ಕರ್ತವ್ಯ ಲೋಪ ಎಸಗಿದ ಸಿಬ್ಬಂದಿಗಳು: ಅಮಾನತು ಮಾಡಿದ ಚುನಾವಣಾ ಆಯೋಗ

By

Published : Nov 26, 2019, 11:46 PM IST

ಬೆಂಗಳೂರು:15 ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆ ಸಂದರ್ಭ ಕರ್ತವ್ಯಲೋಪ ಎಸಗಿದ 6 ಜನ ಸಿಬ್ಬಂದಿಯನ್ನು ಚುನಾವಣಾ ಆಯೋಗ ಅಮಾನತು ಮಾಡಿದೆ.

ಬೆಂಗಳೂರು ನಗರದ ಚೆಕ್ ಪೋಸ್ಟ್​ಗಳಲ್ಲಿ ಚುನಾವಣಾ ಕರ್ತವ್ಯನಿರತ 6 ಮಂದಿ ಸಿಬ್ಬಂದಿ ಕರ್ತವ್ಯಲೋಪ ಎಸಗಿದ ಹಿನ್ನೆಲೆ ಅಮಾನತು ಮಾಡಲಾಗಿದೆ. ಕೆ.ಆರ್.ಪುರಂ ವಿಧಾನಸಭಾ ಕ್ಷೇತ್ರದ ಟಿ.ಸಿ.ಪಾಳ್ಯ ಚೆಕ್ ಪೋಸ್ಟ್, ದೊಡ್ಡ ಗೊಲ್ಲರಹಟ್ಟಿ ಚೆಕ್​​ ಪೋಸ್ಟ್, ತಾವರಕೆರೆ ಚೆಕ್ ಪೋಸ್ಟ್​ಗಳಲ್ಲಿ ತಲಾ ಒಬ್ಬರು ಮತ್ತು ಶಿವಾಜಿನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಹಲಸೂರು ಚೆಕ್ ಪೋಸ್ಟ್​​ನಲ್ಲಿ ಇಬ್ಬರು ಸೇರಿ ಒಟ್ಟು 6 ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದೆ ಎಂದು ಮುಖ್ಯ ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.

ಈ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿರುವ ಚುನಾವಣಾ ಆಯೋಗ, ತಕ್ಷಣ ಹಿರಿಯ ಐಎಎಸ್ ಅಧಿಕಾರಿ ಮೊನಿಷ್‌ ಮುದುಗಲ್‌ ಅವರನ್ನು ಚುನಾವಣೆ ನಡೆಯುತ್ತಿರುವ 15 ವಿಧಾನಸಭಾ ಕ್ಷೇತ್ರಗಳ ಪರಿವೀಕ್ಷಕರಾಗಿ ನೇಮಿಸಿ ಆದೇಶ ಹೊರಡಿಸಿದೆ.

ABOUT THE AUTHOR

...view details