ಬೆಂಗಳೂರು:ಜೆಡಿಎಸ್ ಹಾಗೂ ಕಾಂಗ್ರೆಸ್ ಶಾಸಕರಿಗೆ ರಾಜೀನಾಮೆ ಕೊಡುವುದು ಬೇಡವೆಂದು ಸಲಹೆ ನೀಡಿರುವುದಾಗಿ ಯಶವಂತಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್.ಟಿ.ಸೋಮಶೇಖರ್ ಹೇಳಿದ್ದಾರೆ.
ಕನಕಪುರ ರಸ್ತೆಯಲ್ಲಿರುವ ಶ್ರೀ ರವಿಶಂಕರ್ ಗುರೂಜಿ ಆಶ್ರಮದಲ್ಲಿ ಮಾತನಾಡಿದ ಅವರು, ನಾವು ರಾಜೀನಾಮೆ ಕೊಟ್ಟು ಮೂರು ತಿಂಗಳು ಸಾಕಷ್ಟು ನೋವು ಅನುಭವಿಸಿದ್ದೇವೆ. ರಾಜೀನಾಮೆ ಕೊಟ್ಟರೆ ರಾಜಕೀಯವಾಗಿ ಹಾಗು ಕ್ಷೇತ್ರದಲ್ಲೂ ಸಾಕಷ್ಟು ಡ್ಯಾಮೇಜ್ ಮಾಡುತ್ತಾರೆ. ಇದಕ್ಕೆಲ್ಲಾ ನೀವು ಸಿದ್ಧರಿದ್ದರೆ ಅಂಥ ಕೆಲಸಕ್ಕೆ ಕೈ ಹಾಕಿ ಎಂದರು.
ಈ ಹಿಂದೆ ನನ್ನ ವಿರುದ್ಧ ಸೋಶಿಯಲ್ ಮೀಡಿಯಾದಲ್ಲಿ ಇಲ್ಲಸಲ್ಲದ ಸಾಕಷ್ಟು ವಿಚಾರಗಳನ್ನು ಹರಿಬಿಟ್ಟಿದ್ದಾರೆ. ಅಣ್ಣಾ ಹಜಾರೆಯವರು ಅನರ್ಹ ಶಾಸಕರನ್ನು ಸೋಲಿಸಲು ಕರೆ ನೀಡಿದ್ದಾರೆ ಎಂದು ಸುಳ್ಳು ಸುದ್ದಿಗಳನ್ನು ಹಬ್ಬಿಸಿದರು. ಇಷ್ಟಕ್ಕೂ ಅಣ್ಣಾ ಹಜಾರೆಯವರಿಗೂ ಕರ್ನಾಟಕಕ್ಕೂ ಏನು ಸಂಬಂಧ? ಎಂದರು.