ಕರ್ನಾಟಕ

karnataka

ETV Bharat / state

ಯಶವಂತಪುರ ಗೆಲ್ಲೋದಕ್ಕೆ ಎಸ್‌ಟಿ ಸೋಮಶೇಖರ್‌ 'ಗೌಡ' ಅಸ್ತ್ರ ಪ್ರಯೋಗ.. - ಇಷ್ಟು ದಿನ ಇಲ್ಲದ ಗೌಡ ಪದನಾಮ

ಯಶವಂತಪುರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಮತ ಸೆಳೆಯಲು ಜಾತಿ ಅಸ್ತ್ರ ಬಳಕೆಗೆ ಬಿಜೆಪಿ ಅಭ್ಯರ್ಥಿ ಎಸ್ ಟಿ ಸೋಮಶೇಖರ್ ಮುಂದಾಗಿದ್ದಾರೆ.

ಎಸ್.ಟಿ‌ ಸೋಮಶೇಖರ್​​​​

By

Published : Nov 17, 2019, 5:57 PM IST

ಬೆಂಗಳೂರು:ಚುನಾವಣೆ ವೇಳೆ ಮತದಾರರನ್ನು ಸೆಳೆಯಲು ಹೆಸರನ್ನು ಬದಲಿಸಿಕೊಳ್ಳುವ ಹೊಸ ಟ್ರೆಂಡ್ ಈಗ ಶುರುವಾಗಿದೆ. ಅದಕ್ಕೆ ಹೊಸ ಸೇರ್ಪಡೆ ಅನರ್ಹ ಶಾಸಕ ಎಸ್‌ ಟಿ ಸೋಮಶೇಖರ್. ಇಷ್ಟು ದಿನ ಇಲ್ಲದ ಗೌಡ ಪದನಾಮವನ್ನು ಮೊದಲ ಬಾರಿ ಬಳಸಿ ಒಕ್ಕಲಿಗ ಮತಬುಟ್ಟಿಗೆ ಕೈ ಹಾಕಿದ್ದಾರೆ.

ಯಶವಂತಪುರ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಮತ ಸೆಳೆಯಲು ಜಾತಿ ಅಸ್ತ್ರ ಬಳಕೆಗೆ ಬಿಜೆಪಿ ಅಭ್ಯರ್ಥಿ ಎಸ್ ಟಿ ಸೋಮಶೇಖರ್ ಮುಂದಾಗಿದ್ದಾರೆ. ಜಾತಿ ಹೆಸರಿನ‌ ಮೂಲಕ ಒಕ್ಕಲಿಗ ಮತಬ್ಯಾಂಕ್ ಕ್ರೋಢೀಕರಣಕ್ಕೆ ಯತ್ನಿಸುತ್ತಿದ್ದು, ಮತಯಾಚನೆಗಾಗಿ ಎಸ್ ಟಿ ಸೋಮಶೇಖರ್ ಹೆಸರಿನ ಮುಂದೆ ಗೌಡ ಎಂದು ಉಲ್ಲೇಖಿಸಿಕೊಂಡಿದ್ದಾರೆ.

ಇಷ್ಟು ದಿನ ಇಲ್ಲದ ಗೌಡ ಪದನಾಮ ಮೊದಲ ಬಾರಿಗೆ ಬಳಿಕೆ

ಈ ಹಿಂದೆ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ವೇಳೆ ಒಕ್ಕಲಿಗ ಮತಗಳ ಜೊತೆ ಅಹಿಂದ ಮತಗಳು ಸೋಮಶೇಖರ್ ಕೈ ಹಿಡಿಯುತ್ತಿದ್ದವು. ಆದರೆ, ಈ ಬಾರಿ ಬಿಜೆಪಿ ಅಭ್ಯರ್ಥಿಯಾಗಿರುವ ಕಾರಣ ಅಹಿಂದ ಮತಗಳು ತಮ್ಮ ಜೊತೆ ನಿಲ್ಲುವುದು ಅನುಮಾನ ಎನ್ನುವ ಕಾರಣಕ್ಕೆ ಒಕ್ಕಲಿಗ ಸಮುದಾಯದ ಮತಗಳನ್ನು ಗರಿಷ್ಠ ಪ್ರಮಾಣದಲ್ಲಿ ಸೆಳೆಯಲು ಸೋಮಶೇಖರ್​​ ಈಗ ಸೋಮಶೇಖರ್ ಗೌಡ ಆಗಿದ್ದಾರೆ ಎನ್ನುವ ಮಾತುಗಳು ಕೇಳಿಬಂದಿವೆ.

ಉಪಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಜವರಾಯಿ ಗೌಡ ನೇರ ಎದುರಾಳಿಯಾಗಿರುವುದರಿಂದ ಒಕ್ಕಲಿಗ ಮತಗಳನ್ನು ಹಿಡಿದಿಟ್ಟುಕೊಳ್ಳುವುದೇ ಸೋಮಶೇಖರ್‌ಗೆ ದೊಡ್ಡ ಸವಾಲಾಗಿದೆ. ಹೀಗಾಗಿ ಎಸ್. ಟಿ.‌ ಸೋಮಶೇಖರ್ ಗೌಡ ಎಂದು ಉಲ್ಲೇಖ ಮಾಡಿಕೊಂಡಿದ್ದಾರೆ. ತಮ್ಮ ಚುನಾವಣಾ ಪ್ರಚಾರ ಪರಿಕರಗಳಲ್ಲೆಲ್ಲಾ ಸೋಮಶೇಖರ ಗೌಡ ಎಂದೇ ಬರೆದುಕೊಂಡಿದ್ದಾರೆ.

ABOUT THE AUTHOR

...view details