ಬೆಂಗಳೂರು:ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿ ನಡೆಸುವ 10ನೇ ತರಗತಿ ಪರೀಕ್ಷೆಯ ತಾತ್ಕಾಲಿಕ ವೇಳಾಪಟ್ಟಿ ಪ್ರಕಟಗೊಂಡಿದೆ. ಬರುವ ವರ್ಷ ಮಾರ್ಚ್ 20ರಿಂದ ಏಪ್ರಿಲ್ 3ರವರೆಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಡೆಯಲಿದೆ.
ಮಾ.20 ರಿಂದ ಏ.3ರವರೆಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ.. ಇದು ತಾತ್ಕಾಲಿಕ ವೇಳಾಪಟ್ಟಿ ಅಷ್ಟೇ..
ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿ ನಡೆಸುವ ಹತ್ತನೇ ತರಗತಿ ಪರೀಕ್ಷೆಯ ತಾತ್ಕಾಲಿಕ ವೇಳಾಪಟ್ಟಿ ಪ್ರಕಟಗೊಂಡಿದೆ. ಬರುವ ವರ್ಷ ಮಾರ್ಚ್ 20ರಿಂದ ಏಪ್ರಿಲ್ 3ರವರೆಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳು ನಡೆಯಲಿವೆ.
ಮಾರ್ಚ್ 20ರಂದು ಕನ್ನಡ, ಮಾ.23ರಂದು ಸಮಾಜ ವಿಜ್ಞಾನ, ಮಾ.26ರಂದು ವಿಜ್ಞಾನ, ಮಾ.30 ರಂದು ಗಣಿತ, ಏಪ್ರಿಲ್ 1ರಂದು ಇಂಗ್ಲೀಷ್, ಏ. 3 ರಂದು ಹಿಂದಿ ಪರೀಕ್ಷೆ ನಡೆಯಲಿದೆ. ಮಾ.22, 24, 25, 27, 28, 29, 31 ಹಾಗೂ ಏಪ್ರಿಲ್ 2ರಂದು ಪರೀಕ್ಷೆಗಳು ಇರುವುದಿಲ್ಲವೆಂದು ತಾತ್ಕಾಲಿಕ ವೇಳಾಪಟ್ಟಿಯಲ್ಲಿ ಪ್ರೌಢ ಶಿಕ್ಷಣ ಮಂಡಳಿ ತಿಳಿಸಿದೆ.
ತಾತ್ಕಾಲಿಕ ವೇಳಾಪಟ್ಟಿ ಬಗ್ಗೆ ವಿದ್ಯಾರ್ಥಿಗಳು ಹಾಗೂ ಪೋಷಕರು ಆಕ್ಷೇಪಣೆ ಸಲ್ಲಿಸಲು ಬಯಸಿದ್ದಲ್ಲಿ ಅಕ್ಟೋಬರ್ 21ರಿಂದ ನವೆಂಬರ್ 19ರ ಅವಧಿಯಲ್ಲಿ ಪ್ರೌಢ ಶಿಕ್ಷಣ ಮಂಡಳಿ ನಿರ್ದೇಶಕರಿಗೆ ಸಲ್ಲಿಸಲು ತಿಳಿಸಲಾಗಿದೆ. ಪ್ರೌಢ ಶಿಕ್ಷಣ ಮಂಡಳಿಯ ವೆಬ್‌ಸೈಟ್‌ನಲ್ಲಿಯೂ ಸಹ ವಿದ್ಯಾರ್ಥಿಗಳು ತಾತ್ಕಾಲಿಕ ವೇಳಾಪಟ್ಟಿ ನೋಡಬಹುದಾಗಿದೆ.