ಕರ್ನಾಟಕ

karnataka

ETV Bharat / state

ನಿಗದಿಯಂತೆ SSLC ಪೂರಕ ಪರೀಕ್ಷೆ ನಡೆಯಲಿದೆ : ನಿರ್ದೇಶಕಿ ಸುಮಂಗಲಾ ಸ್ಪಷ್ಟನೆ - Bharat band

ಎಸ್​​ಎಸ್​ಎಲ್​ಸಿ ಪೂರಕ ಪರೀಕ್ಷೆ ನಿಗದಿತ ವೇಳಾಪಟ್ಟಿಯಂತೆ ನಡೆಯಲಿದೆ ಎಂದು ಬೋರ್ಡ್​ ಸ್ಪಷ್ಟನೆ ನೀಡಿದೆ. ಸೆ.27ರಿಂದ ಪರೀಕ್ಷೆ ಆರಂಭವಾಗಲಿದ್ದು, ಅಂದೇ ರೈತ ಸಂಘಟನೆಗಳು ಭಾರತ್ ಬಂದ್​​ಗೆ ಕರೆ ನೀಡಿವೆ..

sslc-supplementary-exams-commence-from-as-per-the-schedule-of-board
ನಿಗದಿಯಂತೆ SSLC ಪೂರಕ ಪರೀಕ್ಷೆ ನಡೆಯಲಿದೆ: ನಿರ್ದೇಶಕಿ ಸುಮಂಗಲಾ ಸ್ಪಷ್ಟನೆ

By

Published : Sep 24, 2021, 7:46 PM IST

Updated : Sep 24, 2021, 9:16 PM IST

ಬೆಂಗಳೂರು :ನಿಗದಿಯಂತೆಯೇ ಎಸ್​ಎಸ್​​ಎಲ್​ಸಿ ಪೂರಕ ಪರೀಕ್ಷೆಗಳು ನಡೆಯಲಿವೆ ಎಂದು ಎಸ್‌ಎಸ್‌ಎಲ್‌ಸಿ ಪರೀಕ್ಷೆ ಮಂಡಳಿ ನಿರ್ದೇಶಕಿಸುಮಂಗಲಾ ಈಟಿವಿ ಭಾರತಕ್ಕೆ ತಿಳಿಸಿದ್ದಾರೆ. ಸೆ.27ರಂದು ಪರೀಕ್ಷೆ ಆರಂಭಿಸಲು ಬೋರ್ಡ್‌​ ವೇಳಾಪಟ್ಟಿ ಪ್ರಕಟಿಸಿತ್ತು. ಆದರೆ, ಸೆ.27ರಂದು ರೈತ ಸಂಘಟನೆಗಳು ಭಾರತ್​ ಬಂದ್​ಗೆ ಕರೆ ನೀಡಿವೆ. ಹಾಗಾಗಿ, ಪರೀಕ್ಷೆ ಕುರಿತು ಗೊಂದಲ ಏರ್ಪಟ್ಟಿತ್ತು.

ಈ ಬಗ್ಗೆ ಪ್ರತಿಕ್ರಿಯಿಸಿದ ಅವರು, ನಿಗದಿಯಂತೆ ಪರೀಕ್ಷೆ ನಡೆಯಲಿದೆ. ಪೂರಕ ಪರೀಕ್ಷೆ ವೇಳಾಪಟ್ಟಿಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಪರೀಕ್ಷೆ ಮುಂದೂಡುವ ಯಾವ ಪ್ರಮೇಯವೂ ಇಲ್ಲ. ಈಗಾಗಲೇ, ಪರೀಕ್ಷೆಗೆ ಸಿದ್ಧತೆ ನಡೆಸಲಾಗಿದೆ. ಕೋವಿಡ್ ಮಾರ್ಗಸೂಚಿಯನ್ನ ಯಥಾವತ್ತಾಗಿ ಪಾಲಿಸಲಾಗುವುದು ಎಂದಿದ್ದಾರೆ.

ಸೆ.27 ಹಾಗೂ 29ರಂದು ಬೋರ್ಡ್​ ಪರೀಕ್ಷೆ ನಡೆಸುವುದಾಗಿ ಈ ಮೊದಲೇ ಘೋಷಿಸಿತ್ತು. ಆದರೆ, ಕೇಂದ್ರ ಕೃಷಿ ಕಾಯಿದೆಗಳನ್ನ ವಿರೋಧಿಸಿ ರೈತ ಸಂಘಟನೆಳು ಸೆ.27ರಂದು ಭಾರತ್ ಬಂದ್​ಗೆ ಕರೆ ನೀಡಿವೆ. ಎಸ್​ಎಸ್​​ಎಲ್​ಸಿ ಪರೀಕ್ಷೆಗಳು ಮುಂದೂಡಲಿದ್ಯಾ ಎಂಬ ಗೊಂದಲ ಏರ್ಪಟ್ಟಿತ್ತು.

ಪರೀಕ್ಷಾ ವೇಳಾಪಟ್ಟಿ ಹೀಗಿದೆ..

27-9-2021
ಬೆಳಗ್ಗೆ 10-30ರಿಂದ ಆರಂಭವಾಗುವ ಪರೀಕ್ಷೆ ಮಧ್ಯಾಹ್ನ 1:30ಕ್ಕೆ ಕೊನೆಯಾಗಲಿದೆ.

ಕೋರ್ ಸಬ್ಜೆಕ್ಟ್
ಗಣಿತ, ವಿಜ್ಞಾನ, ಸಮಾಜ ವಿಜ್ಞಾನ, ಸಮಾಜಶಾಸ್ತ್ರ, ಅರ್ಥಶಾಸ್ತ್ರ, ರಾಜ್ಯಶಾಸ್ತ್ರ, ಹಿಂದೂಸ್ಥಾನಿ ಸಂಗೀತ/ ಕರ್ನಾಟಿಕ್ ಸಂಗೀತ

ಮಧ್ಯಾಹ್ನ 2:30 ರಿಂದ ಸಂಜೆ 5:00

ಎಲಿಮೆಂಟ್ಸ್ ಆಫ್ ಮೆಕಾನಿಕಲ್ ಎಲೆಕ್ಟ್ರಿಕಲ್ ಇಂಜಿನಿಯರಿಂಗ್​​, ಇಂಜಿನಿಯರಿಂಗ್ ಗ್ರಾಫಿಕ್ಸ್ -2, ಎಲಿಮೆಂಟ್ಸ್ ಆಫ್ ಎಲೆಕ್ಟ್ರಿಕ್ ಇಂಜಿನಿಯರಿಂಗ್, ಎಲಿಮೆಂಟ್ಸ್ ಆಫ್ ಕಂಪ್ಯೂಟರ್ ಸೈನ್ಸ್

29-9-2021
ಭಾಷಾ ವಿಷಯ
• ಪ್ರಥಮ ಭಾಷೆ
ಕನ್ನಡ, ತೆಲುಗು, ಹಿಂದಿ, ಮರಾಠಿ, ತಮಿಳು, ಉರ್ದು, ಇಂಗ್ಲಿಷ್ ,ಸಂಸ್ಕೃತ
• ದ್ವಿತೀಯ ಭಾಷೆ
ಇಂಗ್ಲಿಷ್, ಕನ್ನಡ
• ತೃತೀಯ ಭಾಷೆ
ಹಿಂದಿ, ಕನ್ನಡ, ಇಂಗ್ಲಿಷ್, ಅರೇಬಿಕ್, ಪರ್ಷಿಯನ್, ಉರ್ದು, ಸಂಸ್ಕೃತ, ಕೊಂಕಣಿ, ತುಳು

ಪರೀಕ್ಷಾ ಕೇಂದ್ರಕ್ಕೆ ತೆರಳಲು ಉಚಿತ ಬಸ್​

ವಿದ್ಯಾರ್ಥಿಗಳು ತಮ್ಮ ಹಾಲ್ ಟಿಕೆಟ್ ತೋರಿಸಿ ಕೆಎಸ್ಆರ್​​ಟಿಸಿ, ಬಿಎಂಟಿಸಿ ಬಸ್​​​​ನಲ್ಲಿ ಉಚಿತವಾಗಿ ಪ್ರಯಾಣಿಸಬಹುದಾಗಿದೆ. ನಿಗಮದ ನಗರ, ಹೊರವಲಯ, ಸಾಮಾನ್ಯ ಹಾಗೂ ವೇಗದೂತ ಬಸ್​​​ನಲ್ಲಿ ಪ್ರಯಾಣಿಸಲು ಅವಕಾಶ ನೀಡಲಾಗಿದೆ.

Last Updated : Sep 24, 2021, 9:16 PM IST

ABOUT THE AUTHOR

...view details