ಬೆಂಗಳೂರು:ಲಾಕ್ಡೌನ್ ಸದ್ಯಕ್ಕೆ ಬಡವರ ಜೀವನವನ್ನು ಸಂಕಷ್ಟಕ್ಕೆ ನೂಕಿದೆ. ನಿರ್ಗತಿಕರು ಒಂದೊತ್ತು ಊಟಕ್ಕೆ ದಾನಿಗಳನ್ನು ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಇಂತವರ ಕಷ್ಟಕ್ಕೆ ಮಿಡಿದ ಇಬ್ಬರು ಎಸ್ಎಸ್ಎಲ್ಸಿ ವಿದ್ಯಾರ್ಥಿನಿಯರು ಸಮಾಜಮುಖಿ ಕೆಲಸ ಮಾಡಿ ಸದ್ಯ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಸಿಲಿಕಾನ್ ಸಿಟಿ ನಿವಾಸಿಗಳಾದ ಟಿಯಾ ಪೂವಯ್ಯ ಹಾಗೂ ನಿಖಿತಾ ಖನ್ವಾ ಎಂಬ ಇಬ್ಬರು ಸ್ನೇಹಿತೆಯರು ಸದ್ಯ ಎಸ್ಎಸ್ಎಲ್ಸಿ ಪರೀಕ್ಷೆಗೆ ತಯಾರಾಗಬೇಕಿತ್ತು. ಈ ವೇಳೆ ಓದಿಗಾಗಿ, ಪರೀಕ್ಷಾ ತಯಾರಿಗೆ ಸಮಯ ಮೀಸಲಿಡಬೇಕಿದ್ದ ಅವರು ಸಮಾಜಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಅದರಲ್ಲೂ ಮಹಿಳೆಯರ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಇಬ್ಬರು ದಿಟ್ಟ ನಿರ್ಧಾರ ತೆಗೆದುಕೊಂಡು ಮಹಿಳೆಯರಿಗೆ ಬೇಕಾದ ಸ್ಯಾನಿಟರಿ ಪ್ಯಾಡ್, ಮಾಸ್ಕ್ ಇರುವ ಸಾವಿರ ಕಿಟ್ಗಳನ್ನು ಮಹಿಳೆಯರಿಗೆ ಹಂಚುತ್ತಿದ್ದಾರೆ.