ಬೆಂಗಳೂರು: ಈ ಬಾರಿಯ ಎಸ್ಎಸ್ಎಲ್ಸಿ ಪರೀಕ್ಷಾ ಫಲಿತಾಂಶ ನೂತನ ಶಿಕ್ಷಣ ಸಚಿವ ಬಿ ಸಿ ನಾಗೇಶ್ ಅಧ್ಯಕ್ಷತೆಯಲ್ಲಿ ಆಗಸ್ಟ್9 ರಂದು ಪ್ರಕಟಣೆಯಾಗಲಿದೆ.
ನೂತನ ಶಿಕ್ಷಣ ಸಚಿವರ ಅಧ್ಯಕ್ಷತೆಯಲ್ಲಿ ಆಗಸ್ಟ್ 9ರಂದು ಪ್ರಕಟವಾಗಲಿದೆ SSLC ಫಲಿತಾಂಶ - ಎಸ್ಎಸ್ಎಲ್ಸಿ ಫಲಿತಾಂಶ ದಿನಾಂಕ
ಎಸ್ಎಸ್ಎಲ್ಸಿ ಪರೀಕ್ಷಾ ಫಲಿತಾಂಶ ಆಗಸ್ಟ್9 ರಂದು ಪ್ರಕಟಣೆಯಾಗಲಿದ್ದು, ಫಲಿತಾಂಶವನ್ನ ವಿದ್ಯಾರ್ಥಿಗಳ ನೋಂದಣಿ ಸಂಖ್ಯೆ ಎಸ್ಎಂಎಸ್ ಮುಖಾಂತರ ಕಳುಹಿಸಲಾಗುತ್ತೆ.
![ನೂತನ ಶಿಕ್ಷಣ ಸಚಿವರ ಅಧ್ಯಕ್ಷತೆಯಲ್ಲಿ ಆಗಸ್ಟ್ 9ರಂದು ಪ್ರಕಟವಾಗಲಿದೆ SSLC ಫಲಿತಾಂಶ sslc result to be announced on august 9th](https://etvbharatimages.akamaized.net/etvbharat/prod-images/768-512-12704950-thumbnail-3x2-sslc.jpg)
ಸೋಮವಾರ ಮಧ್ಯಾಹ್ನ 3.30ಕ್ಕೆ ಮಲ್ಲೇಶ್ವರಂನ ಪರೀಕ್ಷಾ ಮಂಡಳಿಯಲ್ಲಿ ಶಿಕ್ಷಣ ಸಚಿವ ಬಿ ಸಿ ನಾಗೇಶ್ ರಿಸಲ್ಟ್ ಪ್ರಕಟಿಸಲಿದ್ದಾರೆ. ಫಲಿತಾಂಶವನ್ನ ವಿದ್ಯಾರ್ಥಿಗಳ ನೋಂದಣಿ ಸಂಖ್ಯೆ ಎಸ್ಎಂಎಸ್ ಮುಖಾಂತರ ಕಳುಹಿಸಲಾಗುತ್ತೆ. ಕೊರೊನಾ ಆತಂಕದ ನಡುವೆಯು ಶೇ. 99.65ರಷ್ಟು ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಇದೀಗ ಅವರ ಭವಿಷ್ಯ ಸೋಮವಾರ ಲಭ್ಯವಾಗಲಿದೆ.
ಸಾಂಕ್ರಾಮಿಕ ಕೊರೊನಾ ಕಾರಣಕ್ಕೆ ಇದೇ ಮೊದಲ ಬಾರಿಗೆ ಎಸ್ಎಸ್ಎಲ್ಸಿ ಪರೀಕ್ಷೆ ಮಾದರಿ ಬದಲಾಯಿಸಲಾಗಿತ್ತು. ಆರು ದಿನಗಳ ಕಾಲ ನಡೆಯುತ್ತಿದ್ದ ಪರೀಕ್ಷೆಯನ್ನ ಎರಡು ದಿನಗಳಲ್ಲಿ ನಡೆಸಲಾಯ್ತು. ವಿದ್ಯಾರ್ಥಿಗಳ ಕಲಿಕಾ ಗುಣಮಟ್ಟ ಅಳೆಯಲು ಪರೀಕ್ಷೆ ಅನಿವಾರ್ಯ ಎಂದು ಕೊರೊನಾ ಮಧ್ಯೆಯೂ ಯಶಸ್ವಿಯಾಗಿ ರಾಜ್ಯಾದ್ಯಂತ ಪರೀಕ್ಷೆ ನಡೆಸಲಾಯ್ತು. ಜುಲೈ 19-22ರಂದು ನಡೆದಿದ್ದ ಪರೀಕ್ಷೆಯ ಫಲಿತಾಂಶ ಆಗಸ್ಟ್ 9 ಕ್ಕೆ ಹೊರ ಬೀಳುತ್ತಿದೆ.