ಕರ್ನಾಟಕ

karnataka

ETV Bharat / state

ಮಾಸ್ ಕಾಪಿ ತಡೆಗಟ್ಟಲು SSLC ಪ್ರಶ್ನೆ ಪತ್ರಿಕೆ ಸ್ವರೂಪ ಬದಲಾವಣೆ: 40ರ ಬದಲು 38 ಪ್ರಶ್ನೆ

ಸಾಮೂಹಿಕ ನಕಲನ್ನು ತಡೆಗಟ್ಟಿ, ತಾರ್ಕಿತ ಚಿಂತನೆಯನ್ನು ಮೂಡಿಸುವ ಉದ್ದೇಶದಿಂದ ಎಸ್ ಎಸ್.ಎಲ್.ಸಿ ಪರೀಕ್ಷಾ ಪ್ರಶ್ನೆ ಪತ್ರಿಕೆಯ ಸ್ವರೂಪ ಬದಲಾಗಿದೆ. ಎರಡು ಅಂಕದ ಪ್ರಶ್ನೆಗಳ ಸಂಖ್ಯೆಯನ್ನು 16 ರಿಂದ‌ 8ಕ್ಕೆ ಕಡಿಮೆ ಮಾಡಲಾಗಿದೆ. ಮೂರು ಅಂಕದ ಪ್ರಶ್ನೆಗಳನ್ನು 6 ರಿಂದ 9ಕ್ಕೆ ಹೆಚ್ಚು ಮಾಡಲಾಗಿದೆ. ಹೊಸದಾಗಿ 5 ಅಂಕದ ಪ್ರಶ್ನೆ ಒಂದನ್ನು ಸೇರಿಸಲಾಗಿದೆ.

bng

By

Published : Aug 30, 2019, 8:21 PM IST

ಬೆಂಗಳೂರು: ಎಸ್.ಎಸ್.ಎಲ್.ಸಿ ಪರೀಕ್ಷಾ ಪ್ರಶ್ನೆ ಪತ್ರಿಕೆಯ ಸ್ವರೂಪ ಬದಲಾಗಿದೆ. ರಾಜ್ಯದಲ್ಲಿ ಪ್ರತಿ ವರ್ಷವೂ ಸುಮಾರು ಎಂಟು ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಎಸ್.ಎಸ್.ಎಲ್.ಸಿ ಪರೀಕ್ಷೆ ಬರೆಯುತ್ತಿದ್ದು, ಈ ಪರೀಕ್ಷೆ ವಿದ್ಯಾರ್ಥಿಗಳ ಜೀವನದ ಮೈಲಿಗಲ್ಲಾಗಿದೆ.

ಉನ್ನತ ಶಿಕ್ಷಣ ಗಳಿಸಲು, ವೃತ್ತಿ ಶಿಕ್ಷಣ ಪಡೆಯಲು, ಸ್ವಯಂ ಉದ್ಯೋಗ ಪ್ರಾರಂಭಿಸಲು ಅಲ್ಲದೇ ಜೀವನ ನಿರ್ವಹಣೆಗೂ ಎಸ್.ಎಸ್.ಎಲ್.ಸಿ ದಿಕ್ಸೂಚಿಯಾಗಿದೆ. ಆದ್ದರಿಂದ ಜನಸಮುದಾಯದಲ್ಲಿ, ಶಿಕ್ಷಕರಲ್ಲಿ ವಿದ್ಯಾರ್ಥಿಗಳಲ್ಲಿ ಹಾಗೂ ಶಿಕ್ಷಣ ಇಲಾಖೆಯಲ್ಲಿ ಈ ಪರೀಕ್ಷೆ ಪ್ರಮುಖ ಪಾತ್ರವನ್ನು ವಹಿಸುತ್ತಿದೆ.

ಪ್ರಶ್ನೆ ಪತ್ರಿಕೆ ಮಾದರಿಯನ್ನ ಶೈಕ್ಷಣಿಕ ವರ್ಷದ ಆರಂಭದಲ್ಲೇ ನೀಡಿರುವುದರಿಂದ ಶಿಕ್ಷಕರು ಮಕ್ಕಳು ಗೊಂದಲಕ್ಕೆ ಒಳಗಾಗುವ ಅಗತ್ಯವಿಲ್ಲ. ಮಾನಸಿಕವಾಗಿ ಸಿದ್ದರಾಗಬೇಕು ಎಂದು ಎಸ್ ಎಸ್.ಎಲ್.ಸಿ ಬೋರ್ಡ್​ನ ನಿರ್ದೇಶಕಿ ವಿ ಸುಮಂಗಲ ಹೇಳಿದರು.

ಎಸ್ ಎಸ್.ಎಲ್.ಸಿ ಪ್ರಶ್ನೆ ಪತ್ರಿಕೆ ಸ್ವರೂಪ ಬದಲಾವಣೆ

ಇದಕ್ಕಾಗಿಯೇ ವಿಶೇಷವಾಗಿ ತರಬೇತಿ ಸಾಹಿತ್ಯವನ್ನ‌ ಸಿದ್ದಪಡಿಸಿದ್ದು, ವಿದ್ಯಾರ್ಥಿಗಳು ಇದರ ಲಾಭವನ್ನು ಪಡೆಯಬಹುದಾಗಿದೆ. ‌ ಸೆಪ್ಟೆಂಬರ್ ಮೊದಲ ವಾರದಲ್ಲಿ ನಾಲ್ಕು ವಿಭಾಗಗಳಲ್ಲಿ ಕನಿಷ್ಠ 200 ಮುಖ್ಯ ಶಿಕ್ಷಕರಿಗೆ ತರಬೇತಿ ನೀಡಲು ಬೋರ್ಡ್ ನಿರ್ಧರಿಸಿದೆ.

ಎಸ್ ಎಸ್ ಎಲ್‌ಸಿ ಪರೀಕ್ಷಾ ಪ್ರಶ್ನೆ ಪತ್ರಿಕೆ ಮಾದರಿ ಬದಲಾವಣೆಗೆ ಕಾರಣವೇನು?

ಹತ್ತನೇ ತರಗತಿಯ ಪ್ರಶ್ನೆ‌ ಪತ್ರಿಕೆಯಲ್ಲಿ 1 ಮತ್ತು 2 ಅಂಕಗಳ ಪ್ರಶ್ನೆಗಳ ಸಂಖ್ಯೆಯಲ್ಲಿ ಸಿಂಹಪಾಲಿತ್ತು. ಇದರಿಂದಾಗಿ ವಿದ್ಯಾರ್ಥಿಗಳು ಸುಲಭವಾಗಿ ಮಾಸ್ ಕಾಪಿ ಮಾಡಬಹುದಿತ್ತು.

ಇದನ್ನ ನಿಯಂತ್ರಿಸುವುದರ ಜೊತೆ ಜೊತೆಗೆ ಮಕ್ಕಳಲ್ಲಿ ಬರವಣಿಗೆ ಸಾಮರ್ಥ್ಯ ಹೆಚ್ಚಿಸುವುದು ಇದರ ಉದ್ದೇಶವಾಗಿದೆ ಎಂದು ಸುಮಂಗಲ ತಿಳಿಸಿದರು.

ಹೊಸ ಮಾದರಿ ಪ್ರಶ್ನೆ ಪತ್ರಿಕೆ ಹೇಗೆ ಇರಲಿದೆ?

ಬಹು ಆಯ್ಕೆಯ ಪ್ರಶ್ನೆಗಳು ಹಾಗೂ ಒಂದು ಅಂಕದ ಪ್ರಶ್ನೆಗಳ ಸಂಖ್ಯೆಯಲ್ಲಿ ಯಾವುದೇ ವ್ಯತ್ಯಾಸವಿರುವುದಿಲ್ಲ. ಎರಡು ಅಂಕದ ಪ್ರಶ್ನೆಗಳ ಸಂಖ್ಯೆಯನ್ನು 16 ರಿಂದ‌ 8ಕ್ಕೆ ಕಡಿಮೆ ಮಾಡಲಾಗಿದೆ. ಮೂರು ಅಂಕದ ಪ್ರಶ್ನೆಗಳನ್ನು 6 ರಿಂದ 9ಕ್ಕೆ ಹೆಚ್ಚು ಮಾಡಲಾಗಿದೆ. ಹೊಸದಾಗಿ 5 ಅಂಕದ ಪ್ರಶ್ನೆ ಒಂದನ್ನು ಸೇರಿಸಲಾಗಿದೆ. ಒಟ್ಟಾರೆ ಪ್ರಶ್ನೆ ಪತ್ರಿಕೆಯಲ್ಲಿನ 40 ಪ್ರಶ್ನೆಗಳ ಬದಲಾಗಿ 38 ಪ್ರಶ್ನೆಗಳಿರುತ್ತದೆಯೇ ಹೊರತು‌ ಹೆಚ್ಚಿನ ಬದಲಾವಣೆ ಏನು ಇರುವುದಿಲ್ಲ ಎಂದು ತಿಳಿಸಿದ್ದಾರೆ.

ಮಕ್ಕಳಲ್ಲಿ ತಾರ್ಕಿತ ಚಿಂತನೆಯನ್ನು ಮೂಡಿಸುವ, ದೀರ್ಘ ಉತ್ತರದ ಪ್ರಶ್ನೆಗಳಿಂದ ಮಕ್ಕಳಲ್ಲಿ ಬರವಣಿಗೆಯ ಕೌಶಲ್ಯ ಮೂಡಿಸಬಹುದು. ಪರೀಕ್ಷಾ ಪದ್ಧತಿಯಲ್ಲಿ ಕೇಳಿ ಬರುತ್ತಿದ್ದ, ಸಾಮೂಹಿಕ ನಕಲನ್ನು ತಡೆಗಟ್ಟುವ ವಿಶ್ವಾಸವನ್ನು ಬೋರ್ಡ್ ಹೊಂದಿದೆ. ಇದು ಎಷ್ಟರ ಮಟ್ಟಿಗೆ ಯಶಸ್ಸು ತಂದುಕೊಡಲಿದೆ ಎಂಬುದನ್ನ ಕಾದು ನೋಡಬೇಕು.

ABOUT THE AUTHOR

...view details