ಕರ್ನಾಟಕ

karnataka

ETV Bharat / state

ಎಸ್​ಎಸ್​ಎಲ್​ಸಿ ಫಲಿತಾಂಶ: ಅನಾರೋಗ್ಯಕರ ಪೈಪೋಟಿ ತಪ್ಪಿಸಲು ಗ್ರೇಡಿಂಗ್ ಸಿಸ್ಟಂ - SSLC grading system

ಇದೇ ಸೆಪ್ಟೆಂಬರ್​ನಲ್ಲಿ ಪೂರಕ ಪರೀಕ್ಷೆ ನಡೆಯಲಿದ್ದು, ಪರೀಕ್ಷೆ ತೆಗೆದುಕೊಳ್ಳುವ ಅಭ್ಯರ್ಥಿಗಳು ಅಧಿಸೂಚನೆಯಲ್ಲಿ ವಿವರಿಸಿರುವಂತೆ ಅರ್ಜಿಗಳನ್ನು ಜಾಲತಾಣದಲ್ಲಿ ಅಪ್ಲೋಡ್ ಮಾಡಬೇಕಿದೆ.

ಎಸ್​ಎಸ್​ಎಲ್​ಸಿ ಫಲಿತಾಂಶ
ಎಸ್​ಎಸ್​ಎಲ್​ಸಿ ಫಲಿತಾಂಶ

By

Published : Aug 10, 2020, 11:15 PM IST

ಬೆಂಗಳೂರು: ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ರ‍್ಯಾಂಕಿಂಗ್ ಸಿಸ್ಟಂನಿಂದ ಗ್ರೇಡಿಂಗ್ ಸಿಸ್ಟಂ ನೀಡಲು ಶಿಕ್ಷಣ ಇಲಾಖೆ ನಿರ್ಧರಿಸಿದೆ. ಎಸ್ಎಸ್ಎಲ್​ಸಿ ಪರೀಕ್ಷೆಗಳ ಫಲಿತಾಂಶದಲ್ಲಿ ಜಿಲ್ಲಾವಾರು ಅನಾರೋಗ್ಯಕರ ಪೈಪೋಟಿ ತಪ್ಪಿಸುವ ಸಲುವಾಗಿ ಈ ಬಾರಿಯಿಂದ ಜಿಲ್ಲೆಗಳಿಗೆ ಗ್ರೇಡಿಂಗ್ ಸಿಸ್ಟಂ ನೀಡಲಾಗುತ್ತಿದೆ.

ಈ ಬಾರಿ 8 ಜಿಲ್ಲೆಗಳು ಎ ಗ್ರೇಡ್, 20 ಜಿಲ್ಲೆಗಳು ಬಿ ಗ್ರೇಡ್ ಮತ್ತು 4 ಜಿಲ್ಲೆಗಳು ಸಿ ಗ್ರೇಡ್ ಪಡೆದಿವೆ. ಇಡೀ ಜಿಲ್ಲೆಯ ಒಟ್ಟು ಉತ್ತೀರ್ಣರಾದ ಮಕ್ಕಳ ಸಂಖ್ಯೆ (ಶೇ. 40) ಪರೀಕ್ಷೆಗೆ ಹಾಜರಾದ ಎಲ್ಲ ಮಕ್ಕಳು ತೆಗೆದುಕೊಂಡು ಒಟ್ಟಾರೆ ಅಂಕಗಳು (ಶೇ.40) ಮತ್ತು ಪ್ರಥಮ ಸ್ಥಾನ ಮತ್ತು ಅದರ ಮೇಲಿನ ಸ್ಥಾನಗಳನ್ನು ಪಡೆದ ವಿದ್ಯಾರ್ಥಿಗಳ ಸಂಖ್ಯೆ (ಶೇ.20) ಆಧರಿಸಿ ಗ್ರೇಡ್ ನೀಡಲಾಗಿದೆ. ಇದರಿಂದಾಗಿ ಹಲವು ಜಿಲ್ಲೆಗಳು ಒಳ್ಳೆಯ ಅಂಕಗಳಿಸಲು ಪ್ರಯತ್ನಿಸಿದರೂ, ರ‍್ಯಾಂಕಿಂಗ್​ನಿಂದಾಗಿ ಗರಿಷ್ಠ-ಕನಿಷ್ಟ ಲೆಕ್ಕಾಚಾರಗಳು ಬರುತ್ತವೆ. ‌ಉತ್ಸಾಹ ಕಡಿಮೆ‌ ಮಾಡುವ ಈ ವ್ಯವಸ್ಥೆಗೆ ಬ್ರೇಕ್ ಹಾಕಲಾಗಿದೆ ಎಂದು ತಿಳಿದುಬಂದಿದೆ.

ಸೆಪ್ಟೆಂಬರ್‌ ನಲ್ಲಿ ಪೂರಕ ಪರೀಕ್ಷೆ : ಇದೇ ಸೆಪ್ಟೆಂಬರ್​ನಲ್ಲಿ ಪೂರಕ ಪರೀಕ್ಷೆ ನಡೆಯಲಿದ್ದು, ಪರೀಕ್ಷೆ ತೆಗೆದುಕೊಳ್ಳುವ ಅಭ್ಯರ್ಥಿಗಳು ಅಧಿಸೂಚನೆಯಲ್ಲಿ ವಿವರಿಸಿರುವಂತೆ ಅರ್ಜಿಗಳನ್ನು ಜಾಲತಾಣದಲ್ಲಿ ಅಪ್ಲೋಡ್ ಮಾಡಬೇಕಿದೆ.

ಉತ್ತರ ಪತ್ರಿಕೆಯ ಸ್ಕ್ಯಾನಿಂಗ್ ಪ್ರತಿ:ಮೌಲ್ಯಮಾಪನಗೊಂಡ ಉತ್ತರ ಪತ್ರಿಕೆಗಳ ಸ್ಕ್ಯಾನಿಂಗ್ ಪ್ರತಿ ಹಾಗೂ ಮರುಮೌಲ್ಯಮಾಪನ ಶುಲ್ಕವನ್ನು ಪಾವತಿಸಲು ಆನ್​ಲೈನ್ ಪೇಮೆಂಟ್​ನಲ್ಲಿ ಸೌಲಭ್ಯ ಕಲ್ಪಿಸಲಾಗಿದೆ.

ABOUT THE AUTHOR

...view details