ಬೆಂಗಳೂರು: ಕೊರೊನಾದಿಂದಾಗಿ ಎಸ್ಎಸ್ಎಲ್ಸಿ ಪರೀಕ್ಷೆಗೆ ತೊಡಕು ಉಂಟಾಗಿತ್ತು. ನಂತರ ಎಲ್ಲ ರೀತಿಯ ಮುನ್ನೆಚ್ಚರಿಕೆ ವಹಿಸಿ ರಾಜ್ಯದಲ್ಲಿ ಯಶಸ್ವಿಯಾಗಿ ಪರೀಕ್ಷೆಗಳನ್ನು ನಡೆಸಲಾಯಿತು. ಇದೀಗ, ಎಸ್ಎಸ್ಎಲ್ಸಿ ಪರೀಕ್ಷೆಯ ಮೌಲ್ಯಮಾಪನಕ್ಕೂ ಕೊರೊನಾ ಅಡ್ಡಗಾಲು ಹಾಕುತ್ತಿದೆ.
ಲಾಕ್ಡೌನ್ ಪ್ರದೇಶಗಳಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆ ಮೌಲ್ಯಮಾಪನ ಮುಂದೂಡಿಕೆ - ಎಸ್ಎಸ್ಎಲ್ಸಿ ಪರೀಕ್ಷೆ ಮೌಲ್ಯಮಾಪನ
ಬೆಂಗಳೂರಿನಲ್ಲಿ 15 ಮೌಲ್ಯಮಾಪನ ಕೇಂದ್ರಗಳನ್ನು ಗುರುತಿಸಲಾಗಿತ್ತು. ಆದರೆ ಮುಖ್ಯವಾಗಿ ಬೆಂಗಳೂರಿನಲ್ಲಿ ಲಾಕ್ಡೌನ್ ಘೋಷಣೆಯಾದ ಕಾರಣ, ಬೆಂಗಳೂರು ಮತ್ತು ಬೆಂಗಳೂರು ಗ್ರಾಮಾಂತರ ಭಾಗದಲ್ಲಿ ಮೌಲ್ಯಮಾಪನ ಪ್ರಕ್ರಿಯೆ ಮುಂದೂಡಲಾಗಿದೆ.
![ಲಾಕ್ಡೌನ್ ಪ್ರದೇಶಗಳಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆ ಮೌಲ್ಯಮಾಪನ ಮುಂದೂಡಿಕೆ ಎಸ್ಎಸ್ಎಲ್ಸಿ ಪರೀಕ್ಷೆ ಮೌಲ್ಯಮಾಪನ ಮುಂದೂಡಿಕೆ](https://etvbharatimages.akamaized.net/etvbharat/prod-images/768-512-7997636-711-7997636-1594554999279.jpg)
ಜೂನ್ 25 ರಿಂದ ಜುಲೈ 3 ರವರೆಗೆ 7.5 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ನಾಳೆಯಿಂದ ಉತ್ತರ ಪ್ರತಿಕೆಗಳ ಮೌಲ್ಯಮಾಪನ ಕಾರ್ಯ ಆರಂಭಗೊಳ್ಳಲಿದೆ. ಬೆಂಗಳೂರಿನಲ್ಲಿ 15 ಮೌಲ್ಯಮಾಪನ ಕೇಂದ್ರಗಳನ್ನು ಗುರುತಿಸಲಾಗಿತ್ತು. ಆದರೆ ಮುಖ್ಯವಾಗಿ ಬೆಂಗಳೂರಿನಲ್ಲಿ ಲಾಕ್ಡೌನ್ ಘೋಷಣೆಯಾದ ಕಾರಣ, ಬೆಂಗಳೂರು ಮತ್ತು ಬೆಂಗಳೂರು ಗ್ರಾಮಾಂತರ ಭಾಗದಲ್ಲಿ ಮೌಲ್ಯಮಾಪನ ಪ್ರಕ್ರಿಯೆ ಮುಂದೂಡಲಾಗಿದೆ.
ಪ್ರತಿ ಜಿಲ್ಲಾವಾರು ಆರು ಕೇಂದ್ರಗಳು ಇರಲಿದ್ದು, ಮೌಲ್ಯಮಾಪನ ನಡೆಯಲಿದೆ. ಯಾವುದೇ ಮೌಲ್ಯಮಾಪನ ಕೇಂದ್ರವು ಕಂಟೇನ್ಮೆಂಟ್ ವಲಯದಲ್ಲಿ ಇರುವುದಿಲ್ಲ. ಪ್ರತಿಯೊಬ್ಬ ಶಿಕ್ಷಕರು ಕುಡಿಯುವ ನೀರಿನ ಬಾಟಲ್, ಸ್ಯಾನಿಟೈಸರ್, ಆಹಾರದ ಸಾಮಗ್ರಿಗಳನ್ನು ತರಬೇಕು. ಶಿಕ್ಷಕರಿಗೆ ಸ್ಯಾನಿಟೈಸ್, ಸ್ಕ್ರೀನಿಂಗ್ ಕಡ್ಡಾಯವಾಗಿ ಇರಲಿದೆ.