ಬೆಂಗಳೂರು :ಪಂಚಪೀಠಗಳಲ್ಲಿ ಒಂದಾದ ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ದರಾಮ ಪಂಡಿತರಾದ್ಯ ಶಿವಾಚಾರ್ಯರು ಇಂದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಮೊಮ್ಮಗಳ ನಿಧನಕ್ಕೆ ಸಾಂತ್ವನ ಹೇಳಿದರು.
ಯಡಿಯೂರಪ್ಪ ಅವರ ಅಧಿಕೃತ ನಿವಾಸ ಕಾವೇರಿಗೆ ಆಗಮಿಸಿದ ಶ್ರೀಗಳು ಬಿಎಸ್ವೈ ಕುಟುಂಬಕ್ಕೆ ಆಶೀರ್ವದಿಸಿದರು. ಯಡಿಯೂರಪ್ಪ ಮೊಮ್ಮಗಳು ಬಿಟ್ಟು ಹೋಗಿರುವ ಪುಟ್ಟ ಕಂದಮ್ಮನನ್ನು ಕೂರಿಸಿಕೊಂಡು ಆಶೀರ್ವದಿಸಿ ಬಿಎಸ್ವೈಗೆ ಸಾಂತ್ವನ ಹೇಳಿದರು.