ಕರ್ನಾಟಕ

karnataka

ETV Bharat / state

ನಾಳೆ ಧ್ವಜಾರೋಹಣದ ಬಳಿಕ ಬಳ್ಳಾರಿ ಜಿಲ್ಲೆಯಲ್ಲಿ ಕೆಲಸ ಆರಂಭಿಸುತ್ತೇನೆ: ಸಚಿವ ಶ್ರೀರಾಮುಲು - ಮುಖ್ಯಮಂತ್ರಿ ಗೃಹ ಕಚೇರಿ ಕೃಷ್ಣಾದಲ್ಲಿ ನಡೆದ ಸಭೆಯಲ್ಲಿ ಸಾರಿಗೆ ಸಚಿವ ಬಿ. ಶ್ರೀರಾಮುಲು ಭಾಗಿ

ಇತ್ತೀಚೆಗೆ ನನಗೆ ಬಳ್ಳಾರಿಯಲ್ಲಿ ಸೇವೆ ಮಾಡುವ ಅವಕಾಶ ಸಿಕ್ಕಿರಲಿಲ್ಲ. ಹಿಂದೆ 2006-07 ರಲ್ಲಿ ಮಾತ್ರ ಅವಕಾಶ ಸಿಕ್ಕಿತ್ತು. ಆದರೆ, ಎರಡು ತಿಂಗಳಿಗಷ್ಟೇ ಅದು ಸೀಮಿತ ಆಗಿತ್ತು. ಇದೀಗ ಹಲವು ವರ್ಷಗಳ ನಂತರ ಬಳ್ಳಾರಿ ಉಸ್ತುವಾರಿ ಅವಕಾಶ ಸಿಕ್ಕಿದೆ. ನಾಳೆ ಧ್ವಜಾರೋಹಣ ಮಾಡಿದ ನಂತರ ಜಿಲ್ಲೆಯಲ್ಲಿ ಕೆಲಸ ಪ್ರಾರಂಭಿಸುತ್ತೇನೆ ಎಂದು ಶ್ರೀರಾಮುಲು ಹೇಳಿದರು.

ನಾಳೆ ಧ್ವಜಾರೋಹಣ ಮಾಡಿದ ನಂತರ ಬಳ್ಳಾರಿಯಲ್ಲಿ ಕೆಲಸ ಆರಂಭಿಸುತ್ತೇನೆ ಎಂದ ಶ್ರೀರಾಮುಲು
ನಾಳೆ ಧ್ವಜಾರೋಹಣ ಮಾಡಿದ ನಂತರ ಬಳ್ಳಾರಿಯಲ್ಲಿ ಕೆಲಸ ಆರಂಭಿಸುತ್ತೇನೆ ಎಂದ ಶ್ರೀರಾಮುಲು

By

Published : Jan 25, 2022, 4:46 PM IST

Updated : Jan 25, 2022, 5:19 PM IST

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಅಧ್ಯಕ್ಷತೆಯಲ್ಲಿ ಇಂದು ಸಾರಿಗೆ ಇಲಾಖೆ ಪ್ರಗತಿ ಪರಿಶೀಲನಾ ಸಭೆ ಜರುಗಿತು.ಮುಖ್ಯಮಂತ್ರಿ ಗೃಹ ಕಚೇರಿ ಕೃಷ್ಣಾದಲ್ಲಿ ನಡೆದ ಸಭೆಯಲ್ಲಿ ಸಾರಿಗೆ ಸಚಿವ ಬಿ. ಶ್ರೀರಾಮುಲು, ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್, ಆರ್ಥಿಕ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಐ.ಎಸ್.ಎನ್ ಪ್ರಸಾದ್, ಸಾರಿಗೆ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಟಾರಿಯಾ, ಕ.ರಾ.ರ.ಸಾ.ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಕಳಸದ್ ಉಪಸ್ಥಿತರಿದ್ದರು.

ಸಭೆಯ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಬಿ ಶ್ರೀರಾಮುಲು, ನನ್ನ ಒಳ್ಳೆ ಕೆಲಸದ ಹೆಜ್ಜೆ ಗುರುತುಗಳಿಂದಲೇ ಬಳ್ಳಾರಿ ಉಸ್ತುವಾರಿಯ ಅವಕಾಶ ಸಿಕ್ಕಿದೆ. ಬಳ್ಳಾರಿ ನನಗೆ ಮುಂಚೆಯಿಂದಲೂ ಜನ್ಮ ಕೊಟ್ಟ ಸ್ಥಳ. ನಾನು ಅನೇಕ ಜಿಲ್ಲೆಗಳಲ್ಲೂ ಒಳ್ಳೆ ಕೆಲಸ ಮಾಡಿದ್ದೇನೆ. ನಾನು ಎಲ್ಲ ಜಿಲ್ಲೆಗಳಲ್ಲೂ ನನ್ನ ಕೆಲಸದ ಹೆಜ್ಜೆ ಗುರುತುಗಳನ್ನು ಹಾಕಿಕೊಂಡು ಬಂದಿದ್ದೇನೆ. ಅದಕ್ಕಾಗಿ ನನಗೆ ಇವಾಗ ಬಳ್ಳಾರಿ ಉಸ್ತುವಾರಿ ನೀಡಿದ್ದಾರೆ ಎಂದರು.

ಇತ್ತೀಚೆಗೆ ನನಗೆ ಬಳ್ಳಾರಿಯಲ್ಲಿ ಸೇವೆ ಮಾಡುವ ಅವಕಾಶ ಸಿಕ್ಕಿರಲಿಲ್ಲ. ಹಿಂದೆ 2006-07 ರಲ್ಲಿ ಮಾತ್ರ ಅವಕಾಶ ಸಿಕ್ಕಿತ್ತು. ಆದರೆ, ಎರಡು ತಿಂಗಳಿಗಷ್ಟೇ ಅದು ಸೀಮಿತ ಆಗಿತ್ತು. ಇದೀಗ ಹಲವು ವರ್ಷಗಳ ನಂತರ ಬಳ್ಳಾರಿ ಉಸ್ತುವಾರಿ ಅವಕಾಶ ಸಿಕ್ಕಿದೆ. ನಾಳೆ ಧ್ವಜಾರೋಹಣದ ನಂತರ ಜಿಲ್ಲೆಯಲ್ಲಿ ಕೆಲಸ ಪ್ರಾರಂಭ ಮಾಡುತ್ತೇನೆ ಎಂದು ಹೇಳಿದರು.

ನಾಳೆ ಧ್ವಜಾರೋಹಣದ ಬಳಿಕ ಬಳ್ಳಾರಿ ಜಿಲ್ಲೆಯಲ್ಲಿ ಕೆಲಸ ಆರಂಭಿಸುತ್ತೇನೆ: ಸಚಿವ ಶ್ರೀರಾಮುಲು

ಸಚಿವ ಆನಂದ್ ಸಿಂಗ್ ಅಸಮಾಧಾನ ವಿಚಾರ ಕುರಿತು ಮಾತನಾಡಿ, ಆನಂದ್ ಸಿಂಗ್ ನನ್ನ ಸ್ನೇಹಿತರು. ನಮ್ಮ ಜಿಲ್ಲಾ ಸಚಿವರಾಗಿ ಕೆಲಸ ಮಾಡಿದ್ದಾರೆ. ನನ್ನ ಜೊತೆ ಅವರು ಆತ್ಮೀಯವಾಗಿ ಇರುವಂತವರು. ಅವರ ಸಹಮತದಂತೆ ಸಿಎಂ ಅವರನ್ನು ಬದಲಾವಣೆ ಮಾಡಿದ್ದಾರೆ. ಆನಂದ್ ಸಿಂಗ್ ಅವರಿಗೆ ಯಾವುದೇ ಅಸಮಾಧಾನ ಇಲ್ಲ ಎಂದರು.

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

Last Updated : Jan 25, 2022, 5:19 PM IST

For All Latest Updates

TAGGED:

ABOUT THE AUTHOR

...view details