ಆನೇಕಲ್: ತುಮಕೂರು ಸಿದ್ದಲಿಂಗ ಮಠದ ಪೀಠಾಧ್ಯಕ್ಷ ಶ್ರೀಸಿದ್ದಲಿಂಗ ಮಹಾಸ್ವಾಮೀಜಿ ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ಭೇಟಿ ನೀಡಿ ಸಫಾರಿ ಮತ್ತು ಮೃಗಾಲಯವನ್ನು ವೀಕ್ಷಣೆ ಮಾಡಿದರು.
ಬನ್ನೇರುಘಟ್ಟದ ಉದ್ಯಾನಕ್ಕೆ ಸಿದ್ಧಲಿಂಗ ಸ್ವಾಮೀಜಿ ಭೇಟಿ: ಆನೆ ಮರಿಗೆ ನಾಮಕರಣ - ಬನ್ನೇರುಘಟ್ಟದ ಉದ್ಯಾನ ಸುದ್ದಿ
ತುಮಕೂರು ಸಿದ್ದಲಿಂಗ ಮಠದ ಶ್ರೀಸಿದ್ದಲಿಂಗ ಮಹಾಸ್ವಾಮಿರವರು ಶನಿವಾರ ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ಭೇಟಿ ನೀಡಿ ಮೃಗಾಲಯದ ರೂಪ ಆನೆಯ ಆರು ತಿಂಗಳ ಆನೆ ಮರಿಗೆ "ಬಸವ" ಎಂದು ನಾಮಕರಣ ಮಾಡಿದ್ದಾರೆ.
ಬನ್ನೇರುಘಟ್ಟದ ಉದ್ಯಾನಕ್ಕೆ ಸಿದ್ಧಲಿಂಗ ಸ್ವಾಮೀಜಿ ಭೇಟಿ
ಬಳಿಕ ಆನೆ ಕಾವಡಿ ಮಾವುತರ ಮಕ್ಕಳೊಂದಿಗೆ ಸಂವಹನ ನಡೆಸಿ ಮಕ್ಕಳಿಗೆ ಹಣ್ಣು ಹಂಪಲುಗಳನ್ನು ವಿತರಿಸಿ ಆಶೀರ್ವಾದ ಮಾಡಿದರು.
ಇದೇ ಸಂದರ್ಭದಲ್ಲಿ ಮೃಗಾಲಯದ ರೂಪ ಎಂಬ ಆನೆಯ ಆರು ತಿಂಗಳ ಮರಿಗೆ "ಬಸವ" ಎಂದು ನಾಮಕರಣ ಮಾಡಿದ್ದಾರೆಂದು ಬನ್ನೇರುಘಟ್ಟ ಜೈವಿಕ ಉದ್ಯಾನದ ಇಡಿ ವನಶ್ರೀ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.