ಬೆಂಗಳೂರು:ಕೊಡಗು ಜಿಲ್ಲೆಯಲ್ಲಿ ಕೊರೊನಾ ಪಾಸಿಟಿವ್ ವರದಿ ಬಂದ ವ್ಯಕ್ತಿ ಮಾರ್ಚ್ 15ರ ರಾತ್ರಿ 11.35ಕ್ಕೆ ಕೆಎ19 ಎಫ್ 3170 ನೋಂದಣಿ ಸಂಖ್ಯೆಯ ರಾಜಹಂಸ ಬಸ್ನಲ್ಲಿ ಬೆಂಗಳೂರು ಸ್ಯಾಟಲೈಟ್ ನಿಲ್ದಾಣದಿಂದ ಮಡಿಕೇರಿಗೆ ಪ್ರಯಾಣಿಸಿದ್ದಾನೆ. ಆ ಬಸ್ನಲ್ಲಿ ಯಾರಾದರೂ ಪ್ರಯಾಣ ಮಾಡಿದ್ದರೆ ನೀಡಿರುವ ಸಹಾಯವಾಣಿಯನ್ನು ಸಂಪರ್ಕಿಸುವಂತೆ ಆರೋಗ್ಯ ಸಚಿವ ಬಿ.ಶ್ರೀರಾಮುಲು ಮನವಿ ಮಾಡಿದ್ದಾರೆ.
ನೀವ್ಯಾರಾದರೂ ಈ ಬಸ್ಸಿನಲ್ಲಿ ಸಂಚರಿಸಿದ್ದರೆ ಸಹಾಯವಾಣಿ ಸಂಪರ್ಕಿಸಿ: ರಾಮುಲು ಮನವಿ
ದುಬೈನಿಂದ ಬೆಂಗಳೂರಿಗೆ ಬಂದ ವ್ಯಕ್ತಿ ಕೆಎಸ್ಆರ್‌ಟಿಸಿಯ ರಾಜಹಂಸ ಬಸ್ನಲ್ಲಿ ಮಡಿಕೇರಿಗೆ ತೆರಳಿದ್ದು, ಆ ಬಸ್ಸಿನಲ್ಲಿ 33 ಪ್ರಯಾಣಿಕರು ಪ್ರಯಾಣಿಸಿದ್ದಾರೆ ಆದರೆ ಅವರು ಯಾರು ಮುಂಗಡ ಟಿಕೆಟ್ ಕಾಯ್ದಿರಿಸದ ಕಾರಣ ಪ್ರಯಾಣಿಕರ ಮಾಹಿತಿ ಇಲ್ಲ. ಹಾಗಾಗಿ ಆ ಬಸ್ಸಿನಲ್ಲಿ ಯಾರಾದರೂ ಪ್ರಯಾಣ ಮಾಡಿದ್ದರೆ 104 ಅಥವಾ 080-46848600 ಸಹಾಯವಾಣಿಯನ್ನು ಸಂಪರ್ಕಿಸಿ ಎಂದು ಸಚಿವ ಬಿ.ಶ್ರೀರಾಮುಲು ಮನವಿ ಮಾಡಿದ್ದಾರೆ.
ಸಚಿವ ಬಿ.ಶ್ರೀರಾಮುಲು
ದುಬೈನಿಂದ ಬೆಂಗಳೂರಿಗೆ ಬಂದ ವ್ಯಕ್ತಿ ಕೆಎಸ್ಆರ್‌ಟಿಸಿಯ ರಾಜಹಂಸ ಬಸ್ನಲ್ಲಿ ಮಡಿಕೇರಿಗೆ ತೆರಳಿದ್ದು, ಆ ಬಸ್ಸಿನಲ್ಲಿ 33 ಪ್ರಯಾಣಿಕರು ಪ್ರಯಾಣಿಸಿದ್ದಾರೆ. ಆದರೆ ಅವರು ಯಾರು ಮುಂಗಡ ಟಿಕೆಟ್ ಕಾಯ್ದಿರಿಸದ ಕಾರಣ ಪ್ರಯಾಣಿಕರ ಮಾಹಿತಿ ಇಲ್ಲ. ಹಾಗಾಗಿ ಆ ಬಸ್ಸಿನಲ್ಲಿ ಯಾರಾದರೂ ಪ್ರಯಾಣ ಮಾಡಿದ್ದರೆ 104 ಅಥವಾ 080-46848600 ಸಹಾಯವಾಣಿಯನ್ನು ಸಂಪರ್ಕಿಸಿ. ಯಾವುದೇ ಭೀತಿಗೆ ಒಳಗಾಗದಿರಿ. ಇದು ನಮ್ಮೆಲ್ಲರ ಒಳಿತಿಗಾಗಿ ಒಂದು ಮುಂಜಾಗ್ರತಾ ಕ್ರಮ ಎಂದು ಮನವಿ ಮಾಡಿದ್ದಾರೆ.