ಬೆಂಗಳೂರು:ಶ್ರೀಕೃಷ್ಣ ಜನ್ಮಾಷ್ಟಮಿಯ ಅಂಗವಾಗಿ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ರಾಜ್ಯದ ಜನತೆಗೆ ಶುಭಾಶಯ ಕೋರಿದ್ದಾರೆ.
ಶ್ರೀಕೃಷ್ಣ ಜನ್ಮಾಷ್ಟಮಿ: ರಾಜ್ಯದ ಜನತೆಗೆ ಶುಭಾಶಯ ಕೋರಿದ ಮಾಜಿ ಪ್ರಧಾನಿ ದೇವೇಗೌಡ - ಹೆಚ್.ಡಿ. ದೇವೇಗೌಡ
ಶ್ರೀಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ರಾಜ್ಯದ ಜನತೆಗೆ ಶುಭಾಶಯ ಕೋರಿದ್ದಾರೆ.

Devegowda
ಶ್ರೀಕೃಷ್ಣ ವಿಷ್ಣುವಿನ ಎಂಟನೇ ಅವತಾರ. ಮಥುರಾವನ್ನು ಕಂಸನಿಂದ ರಕ್ಷಿಸುವ ಸಲುವಾಗಿಯೇ ದೇವಕೀಸುತನ ಜನನವಾಯಿತು. ಪಾಂಡವ-ಕೌರವರ ನಡುವಣ ಕುರುಕ್ಷೇತ್ರ ಯುದ್ಧದ ಸಂದರ್ಭದಲ್ಲೂ ಪಾಂಡವರ ಜಯದಲ್ಲಿ ಶ್ರೀಕೃಷ್ಣನ ಪಾತ್ರ ಹಿರಿದು. ಹೀಗೆ ಶ್ರೀಕೃಷ್ಣನ ಚರಿತಾರ್ಮೃತವೇ ಅದ್ಭುತ ಎಂದು ಬಣ್ಣಿಸಿದ್ದಾರೆ.
ಇಂದು ಜಗತ್ತನ್ನು ಕಾಡುತ್ತಿರುವ ಮಹಾಕಂಟಕ ಕೊರೊನಾ ಮತ್ತು ರಾಷ್ಟ್ರದ ಅನೇಕ ಭಾಗಗಳಲ್ಲಿ ಹಾಗೂ ನಮ್ಮ ರಾಜ್ಯದಲ್ಲಿ ಅನುಭವಿಸುತ್ತಿರುವ ನೆರೆ ಹಾವಳಿಯಿಂದ ಸಮಸ್ತ ಜನತೆಯ ಸಂಕಷ್ಟವನ್ನು ಶ್ರೀಕೃಷ್ಣ ಪರಮಾತ್ಮ ದೂರ ಮಾಡಲಿ ಎಂದು ತಮ್ಮ ಹೇಳಿಕೆಯಲ್ಲಿ ಪ್ರಾರ್ಥಿಸಿದ್ದಾರೆ.
Last Updated : Aug 11, 2020, 4:41 PM IST