ಬೆಂಗಳೂರು:ಮಹದೇವಪುರ ಕ್ಷೇತ್ರದ ತೂಬರಹಳ್ಳಿಯ ತಿರುಮಲ ದೇವಸ್ಥಾನದ ಹತ್ತಿರ ಪ್ರಬೋಧ ಸೇವಾ ಸಮಿತಿ, ಹಿಂದೂ ಜ್ಞಾನ ವೇದಿಕೆ ಹಾಗೂ ಬೆಂಗಳೂರು ಶಾಖೆ ಸಮಕ್ಷಮದಲ್ಲಿ ಹಮ್ಮಿಕೊಳ್ಳಲಾಗಿದ್ದ ಶ್ರೀಕೃಷ್ಣ ಜನ್ಮಾಷ್ಟಮಿ ಮಹೋತ್ಸವ ಆಚರಣೆ ಮಾಡಲಾಯಿತು.
ತೂಬರಹಳ್ಳಿಯಲ್ಲಿ ಅದ್ಧೂರಿಯಾಗಿ ನಡೆದ ಶ್ರೀಕೃಷ್ಣ ಜನ್ಮಾಷ್ಟಮಿ ಮಹೋತ್ಸವ
ಮಹದೇವಪುರ ಕ್ಷೇತ್ರದ ತೂಬರಹಳ್ಳಿಯ ತಿರುಮಲ ದೇವಸ್ಥಾನದ ಹತ್ತಿರ ಪ್ರಬೋಧ ಸೇವಾ ಸಮಿತಿ, ಹಿಂದೂ ಜ್ಞಾನ ವೇದಿಕೆ ಹಾಗೂ ಬೆಂಗಳೂರು ಶಾಖೆ ಸಮಕ್ಷಮದಲ್ಲಿ ಹಮ್ಮಿಕೊಳ್ಳಲಾಗಿದ್ದ ಶ್ರೀಕೃಷ್ಣ ಜನ್ಮಾಷ್ಟಮಿ ಮಹೋತ್ಸವ ಆಚರಣೆ ಮಾಡಲಾಯಿತು.
ಶ್ರೀಕೃಷ್ಣ ಜನ್ಮಾಷ್ಟಮಿ ಮಹೋತ್ಸವ
ಗ್ರಾಮದ ಎಲ್ಲಾ ಮನೆಯ ಜನರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಕ್ಕಳಿಗೆ ಕೃಷ್ಣನ ವೇಷಭೂಷಣ ಹಾಕಿ ಸಂಭ್ರಮಿಸಿದರು.ಮಹಿಳೆಯರು ರಸ್ತೆಯಲ್ಲಿ ನೃತ್ಯ ಮಾಡಿದ್ದು ವಿಶೇಷವಾಗಿತ್ತು.
ಹಿಂದೂ ಜ್ಞಾನ ವೇದಿಕೆ ಪದಾಧಿಕಾರಿಗಳಾದ ಪ್ರಕಾಶ್ ರೆಡ್ಡಿ ಮಾತನಾಡಿ, ಭಗವದ್ಗೀತೆ ಹುಟ್ಟಿದ ನಂತರ ಶ್ರೀಕೃಷ್ಣ ಸಮಾನ್ಯ ಮನುಷ್ಯ ಅಲ್ಲವೆಂದು ಜ್ಞಾನಿಗಳು ಗ್ರಹಿಸಿದ್ದರು. ಅಂದಿನಿಂದ ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ಆಚರಿಸಲು ಆರಂಭಿಸಲಾಗಿದೆ. ಶ್ರೀ ಕೃಷ್ಣನು ಕ್ರಿಸ್ತ ಪೂರ್ವ 3228 ನೇಯ ವರ್ಷ ಜುಲೈ ತಿಂಗಳು 19 ನೇ ತಾರೀಖು ಅಷ್ಟಮಿ ದಿನ ವೃಷಭ ಲಗ್ನದಲ್ಲಿ ಜನಿಸಿದ್ದಾನೆ ಎಂದರು.