ಕರ್ನಾಟಕ

karnataka

ETV Bharat / state

ಶ್ರೀ ಗುರು ರಾಘವೇಂದ್ರ ಕೋ-ಆಪರೇಟಿವ್ ವಂಚನೆ ಪ್ರಕರಣ ಎಸಿಬಿಯಿಂದ‌ ಸಿಐಡಿಗೆ ಹಸ್ತಾಂತರ - ಬೆಂಗಳೂರು ಸುದ್ದಿ

ಶ್ರೀ ಗುರು ರಾಘವೇಂದ್ರ ಬ್ಯಾಂಕಿನಲ್ಲಿ ಕೋಟ್ಯಂತರ ರೂಪಾಯಿ ಅವ್ಯಹಾರ ನಡೆದಿರುವ ಕಾರಣ ಇತ್ತೀಚೆಗೆ ಎಸಿಬಿ ಅಧಿಕಾರಿಗಳ ತಂಡ ದಾಳಿ ‌ನಡೆಸಿತ್ತು. ಹಾಗೆ ಪ್ರಕರಣದ ತನಿಖೆಯನ್ನ ಸಿಐಡಿ‌ ನಡೆಸೋದು ಒಳ್ಳೆಯದು ಎಂದು ಹೈಕೋರ್ಟ್ ಅಭಿಪ್ರಾಯ ವ್ಯಕ್ತಪಡಿಸಿತ್ತು. ಈ ಹಿನ್ನೆಲೆಯಲ್ಲಿ ಪ್ರಕರಣ ಎಸಿಬಿಯಿಂದ ಸಿಐಡಿಗೆ ಹಸ್ತಾಂತರವಾಗಿದೆ.

ಶ್ರೀ ಗುರು ರಾಘವೇಂದ್ರ ಕೋ-ಆಪರೇಟಿವ್ ವಂಚನೆ ಪ್ರಕರಣ
ಶ್ರೀ ಗುರು ರಾಘವೇಂದ್ರ ಕೋ-ಆಪರೇಟಿವ್ ವಂಚನೆ ಪ್ರಕರಣ

By

Published : Jul 1, 2020, 11:48 AM IST

ಬೆಂಗಳೂರು:ಬಸವನಗುಡಿಯ ಶ್ರೀ ಗುರು ರಾಘವೇ‌ದ್ರ ಕೋ ಆಪರೇಟಿವ್​ ಸಹಕಾರ ಬ್ಯಾಂಕಿನಲ್ಲಿ‌ ನಡೆದ ಭಾರೀ ಅವ್ಯಹಾರ ಪ್ರಕರಣದ ತನಿಖೆಯ ಹೊಣೆಯನ್ನ ಸದ್ಯ ಎಸಿಬಿಯಿಂದ ಸಿಐಡಿಗೆ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಪ್ರವೀಣ್ ಸೂದ್ ಅವರು ಹಸ್ತಾಂತರ ಮಾಡಿದ್ದಾರೆ‌.

ಬ್ಯಾಂಕಿನಲ್ಲಿ ಕೋಟ್ಯಂತರ ರೂಪಾಯಿ ಅವ್ಯಹಾರ ನಡೆದಿರುವ ಬಗ್ಗೆ ಇತ್ತೀಚೆಗೆ ಎಸಿಬಿ ಅಧಿಕಾರಿಗಳ ತಂಡ ದಾಳಿ ‌ನಡೆಸಿತ್ತು. ಹಾಗೆ ಪ್ರಕರಣದ ತನಿಖೆಯನ್ನ ಸಿಐಡಿ‌ ನಡೆಸೋದು ಒಳ್ಳೆಯದು ಎಂದು ಹೈಕೋರ್ಟ್ ಅಭಿಪ್ರಾಯ ವ್ಯಕ್ತಪಡಿಸಿತ್ತು. ಸದ್ಯ ಪ್ರಕರಣದ ಜವಾಬ್ದಾರಿಯನ್ನ ಸಿಐಡಿಗೆ ನೀಡಿದ್ದು, ಇನ್ಮುಂದೆ ಈ ಪ್ರಕರಣದ ತನಿಖೆಯನ್ನು ಸಿಐಡಿ ‌ನಡೆಸಲಿದೆ.

ಶ್ರೀ ಗುರು ರಾಘವೇಂದ್ರ ಕೋ-ಆಪರೇಟಿವ್ ವಂಚನೆ ಪ್ರಕರಣ ಸಿಐಡಿ ಹೆಗಲಿಗೆ

ಬ್ಯಾಂಕ್ ವಿರುದ್ಧ ಆರೋಪ ಕೇಳಿ ಬಂದಾಗ ಎಸಿಬಿ‌ ಪಿಎಂಎಲ್ ಅಡಿ ಪ್ರಕರಣ ದಾಖಲಿಸಿ ಬಸವನಗುಡಿ ಶಾಖೆಯ ಹಿಂದಿನ ಅಧ್ಯಕ್ಷ ರಾಮಕೃಷ್ಣ, ಸಿಇಒ ವಾಸುದೇವಯ್ಯ ಅವರ ಮನೆಗಳು ಸೇರಿದಂತೆ ಐದು ಕಡೆ ದಾಳಿ ನಡೆಸಲಾಗಿತ್ತು. ಬ್ಯಾಂಕಿನಲ್ಲಿ ಅಗತ್ಯ ಭದ್ರತೆ ಕೈಗೊಳ್ಳದೇ 27 ಮಂದಿಗೆ 921ಕೋಟಿ ಸಾಲ ನೀಡಿರುವ ಮಾಹಿತಿ ಆರ್ ಬಿ ಐ ಮತ್ತು ಎಸಿಬಿ ತನಿಖೆಯಿಂದ ಬಯಲಾಗಿತ್ತು.‌ ಹಾಗೆ ಬ್ಯಾಂಕ್​​ಗೆ ಸಂಬಂಧ ಪಟ್ಟ ಅಧಿಕಾರಿ‌ಗಳ‌ ಮನೆಯಲ್ಲಿ ಅಕ್ರಮ ಆಸ್ತಿ ಪತ್ತೆಯಾಗಿತ್ತು ಎನ್ನಲಾಗ್ತಿದೆ.

For All Latest Updates

ABOUT THE AUTHOR

...view details