ಕರ್ನಾಟಕ

karnataka

ETV Bharat / state

ಎಂಟಿಬಿ ನಾಗರಾಜ್ ‌ಗೆ ಸಚಿವ ಸ್ಥಾನ ನೀಡುವಂತೆ ಸಿದ್ದರಾಮಾನಂದ ಸ್ವಾಮೀಜಿ ಒತ್ತಾಯ - Hoskote urges to appoint MTB Nagaraj as minister News

ಸಿಎಂ ಯಡಿಯೂರಪ್ಪ ಅವರು ಸರ್ಕಾರ ರಚನೆಗೂ ಮುನ್ನ ಕೊಟ್ಟ ಮಾತಿನಂತೆ ನಡೆದುಕೊಳ್ಳಬೇಕು. ಸರ್ಕಾರ ಅಧಿಕಾರಕ್ಕೆ ಬಂದ ನಂತರ ತ್ಯಾಗ ಮಾಡಿದ ನಾಯಕರನ್ನು ಕಡೆಗಣಿಸುವುದು ಸರಿಯಲ್ಲ.

Sree Siddaramananda Swamiji urges to appoint MTB Nagaraj as minister
Sree Siddaramananda Swamiji urges to appoint MTB Nagaraj as minister

By

Published : Jun 3, 2020, 9:48 AM IST

ಹೊಸಕೋಟೆ: ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲು ಪ್ರಮುಖ ಕಾರಣಿಕರ್ತರಾದ ಎಂಟಿಬಿ ನಾಗರಾಜ್‌ಗೆ ಸಚಿವ ಸ್ಥಾನ ನೀಡಬೇಕು ಎಂದು ಕಾಗಿನೆಲೆ ಮಹಾ ಸಂಸ್ಥಾನದ ಕನಕ ಗುರುಪೀಠ ತಿಂತಿಣಿ ಶಾಖಾ ಮಠದ ಶ್ರೀಸಿದ್ದರಾಮಾನಂದ ಸ್ವಾಮೀಜಿ ಸರ್ಕಾರಕ್ಕೆ ಆಗ್ರಹ ಮಾಡಿದ್ದಾರೆ.

ಕನಕ ಗುರುಪೀಠ ತಿಂತಿಣಿ ಶಾಖಾ ಮಠದ ಶ್ರೀಸಿದ್ದರಾಮಾನಂದ ಸ್ವಾಮೀಜಿ

ನಂದಗುಡಿಯ ಕನಕ ಗುರುಪೀಠದ ಶಾಖಾ ಮಠದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕಾಗಿನೆಲೆ ಶ್ರೀ ಗಳು, ರಾಜ್ಯದಲ್ಲಿ ಬಿ.ಎಸ್ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರ ಅಧಿಕಾರಕ್ಕೆ ಬರಲು ಜವಾಬ್ದಾರಿಯುತ ಸ್ಥಾನವನ್ನು ತೊರೆದು ಬಂದ ಕುರುಬ ಸಮುದಾಯದ ಎಂಟಿಬಿ ನಾಗರಾಜ್, ಎಚ್ ವಿಶ್ವನಾಥ್, ಆರ್. ಶಂಕರ್ ಅವರಿಗೆ ಸಚಿವ ಸ್ಥಾನ ಸಿಗಬೇಕಿದೆ ಎಂದರು.

ಇತ್ತೀಚೆಗೆ ನಡೆದ ಉಪ ಚುನಾವಣೆಯಲ್ಲಿ ಹೊಸಕೋಟೆ ಕ್ಷೇತ್ರದಲ್ಲಿ ಉಂಟಾಗಿದ್ದ ಸ್ಥಳೀಯ ಮೂಲ ಬಿಜೆಪಿಗರ ಭಿನ್ನಮತ ಶಮನಗೊಳಿಸುವಲ್ಲಿ ಬಿಜೆಪಿ ನಾಯಕರು ಯಶಸ್ವಿಯಾಗದ ಕಾರಣ ಹಾಗೂ ರಾಜಕೀಯ ಒಳ ಒಪ್ಪಂದಕ್ಕೆ ಬಲಿಯಾಗಿ ಎಂಟಿಬಿ ನಾಗರಾಜ್ ಉಪ ಚುನಾವಣೆಯಲ್ಲಿ ಸೋಲು ಅನುಭವಿಸಬೇಕಾಯಿತು ಎಂದರು.

ಸಿಎಂ ಯಡಿಯೂರಪ್ಪ ಅವರು ಸರ್ಕಾರ ರಚನೆಗೂ ಮುನ್ನ ಕೊಟ್ಟ ಮಾತಿನಂತೆ ನಡೆದುಕೊಳ್ಳಬೇಕು. ಸರ್ಕಾರ ಅಧಿಕಾರಕ್ಕೆ ಬಂದ ನಂತರ ತ್ಯಾಗ ಮಾಡಿದ ನಾಯಕರನ್ನು ಕಡೆಗಣಿಸುವುದು ಸರಿಯಲ್ಲ .ವಲಸಿಗರಿಗೆ ಮಂತ್ರಿ ಸ್ಥಾನ ನೀಡುತ್ತಿರುವುದಕ್ಕೆ ಬಿಜೆಪಿಯ ಕೆಲವು ನಾಯಕರು ವಿರೋಧ ಮಾಡುತ್ತಿರುವುದು ಸರಿಯಲ್ಲ, ಸರ್ಕಾರ ಅಧಿಕಾರಕ್ಕೆ ಬಂದಿರುವುದು ಇವರ ತ್ಯಾಗದಿಂದ ಎಂದು ವಿರೋಧ ಮಾಡುವವರು ಮರೆಯಬಾರದು ಎಂದರು.

ABOUT THE AUTHOR

...view details