ಹೆಚ್.ವಿಶ್ವನಾಥ್ ಯಾವಾಗ ಏನ್ ಮಾತಾಡ್ತಾರೆ ಅನ್ನೋದೇ ಗೊತ್ತಿಲ್ಲ: ಎಸ್.ಆರ್. ವಿಶ್ವನಾಥ್ - ಹೆಚ್.ವಿಶ್ವನಾಥ್ ವಿರುದ್ಧ ಎಸ್.ಆರ್.ವಿಶ್ವನಾಥ್ ವಾಗ್ದಾಳಿ
ವಿಧಾನ ಪರಿಷತ್ ಹೆಚ್. ವಿಶ್ವನಾಥ್ ಯಾವಾಗ ಏನು ಮಾತಾಡ್ತಾರೆ ಗೊತ್ತಿಲ್ಲ. ಅವರೇನು ಮಾತಾಡ್ತಾರೆ ಅಂತಾ ಅವರಿಗೂ ಅರ್ಥ ಆಗಲ್ಲ, ನಮಗೂ ಅರ್ಥ ಆಗಲ್ಲ ಅಂತಾ ಎಸ್.ಆರ್. ವಿಶ್ವನಾಥ್ ಕಿಡಿಕಾರಿದ್ದಾರೆ.
ಎಸ್.ಆರ್.ವಿಶ್ವನಾಥ್
ಬೆಂಗಳೂರು : ಹೆಚ್. ವಿಶ್ವನಾಥ್ ಯಾವಾಗ ಏನು ಮಾತಾಡ್ತಾರೆ ಗೊತ್ತಿಲ್ಲ. ಅವರೇನು ಮಾತಾಡ್ತಾರೆ ಅಂತಾ ಅವರಿಗೂ ಅರ್ಥ ಆಗಲ್ಲ, ನಮಗೂ ಅರ್ಥ ಆಗಲ್ಲ ಎಂದು ಬಿಡಿಎ ಅಧ್ಯಕ್ಷ ಎಸ್.ಆರ್. ವಿಶ್ವನಾಥ್ ಕಿಡಿಕಾರಿದರು.
ಹೆಚ್.ವಿಶ್ವನಾಥ್ ತಲೆನೋವು ಅಂತಾ ಅಲ್ಲ. ಅವರಿಗೆ ಅನ್ನಿಸಿದ್ದನ್ನು ನೇರವಾಗಿ ಮಾತನಾಡುತ್ತಾರೆ. ಯಾವ ಪಕ್ಷದಲ್ಲಿ ಇದ್ದರೂ ಅದೇ ಮಾಡಿದ್ದಾರೆ. ನಾವು ಸಾಕಷ್ಟು ಬಾರಿ ತಿಳಿ ಹೇಳಿದ್ದೇವೆ. ಪಕ್ಷದ ವೇದಿಕೆಯಲ್ಲಿ ಮಾತನಾಡಲು ಸೂಚನೆಯನ್ನೂ ನೀಡಿದ್ದೇವೆ. ಆದರೂ ಅರಿತುಕೊಂಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.