ಬೆಂಗಳೂರು: ದೆಹಲಿಯಲ್ಲಿ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಎಸ್ ಆರ್. ಪಾಟೀಲ್ ಭೇಟಿ ಮಾಡಿ ಸಮಾಲೋಚನೆ ನಡೆಸಿದರು.
ವಿಧಾನ ಪರಿಷತ್ನ ಪ್ರತಿ ಪಕ್ಷದ ನಾಯಕರಾಗಿ ಆಯ್ಕೆಯಾದ ನಂತರ ಭೇಟಿ ಮಾಡಿ ಕೃತಜ್ಞತೆ ತಿಳಿಸಿದ ಪಾಟೀಲ್, ಅರ್ಧ ಗಂಟೆಗೂ ಹೆಚ್ಚು ಕಾಲ ಅವರೊಂದಿಗೆ ಚರ್ಚಿಸಿದ್ದಾರೆ.

ನಿನ್ನೆ ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ಧರಾಮಯ್ಯ, ಸೋನಿಯಾ ಗಾಂಧಿಯವರನ್ನು ಭೇಟಿ ಮಾಡಿ ಚರ್ಚಿಸಿದ್ದರು. ಇಂದು ಎಸ್.ಆರ್ ಪಾಟೀಲ್ ಭೇಟಿ ಮಾಡಿ ಚರ್ಚಿಸಿ ವಾಪಸಾಗಿದ್ದಾರೆ. ಎಸ್ಆರ್ಪಿ ಭೇಟಿ ವೇಳೆ ರಾಜ್ಯ ರಾಜಕಾರಣದ ವಿವಿಧ ವಿಚಾರಗಳ ಕುರಿತು ಸೋನಿಯಾ ಚರ್ಚೆ ನಡೆಸಿದ್ದು, ಕಾಂಗ್ರೆಸ್ ಪಕ್ಷವನ್ನು ರಾಜ್ಯದಲ್ಲಿ ತಳಮಟ್ಟದಿಂದ ಸಂಘಟಿಸುವ ವಿಚಾರ ಕೂಡ ಈ ಸಂದರ್ಭ ಚರ್ಚೆ ಆಗಿದೆ.
ರಾಜ್ಯದ 17 ಕ್ಷೇತ್ರದ ಉಪಚುನಾವಣೆ ಗೆಲುವು ಹಾಗೂ ಮುಂದಿನ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಬಲವರ್ಧನೆಗೆ ಕುರಿತು ಸುದೀರ್ಘ ಚರ್ಚೆ ನಡೆಸಿದ್ದಾರೆ. ಹೊಸ ಜವಾಬ್ದಾರಿ ವಹಿಸುವ ಜತೆಗೆ ಸಾಕಷ್ಟು ಗುರಿಯನ್ನು ಕೂಡ ಪಕ್ಷ ನೀಡಿದ್ದಾಗಿ ತಿಳಿದು ಬಂದಿದೆ.