ಕರ್ನಾಟಕ

karnataka

ETV Bharat / state

ಸರ್ಕಾರದ ವಿರುದ್ಧ ವಿಶೇಷಚೇತನರ ಕಾಲ್ನಡಿಗೆ ಪ್ರತಿಭಟನೆ - ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ವಿಶೇಷಚೇತನ

ರಾಜ್ಯದ ಮೂಲೆ ಮೂಲೆಗಳಿಂದ ಬೆಂಗಳೂರಿಗೆ ಬಂದ ವಿಶೇಷಚೇತನರು ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದರು.

ವಿಶೇಷಚೇತನರ ಕಾಲ್ನಡಿಗೆ ಪ್ರತಿಭಟನೆ
ವಿಶೇಷಚೇತನರ ಕಾಲ್ನಡಿಗೆ ಪ್ರತಿಭಟನೆ

By

Published : Jan 16, 2020, 10:37 PM IST

Updated : Jan 17, 2020, 11:13 AM IST

ಬೆಂಗಳೂರು: ಕಾಲಿಲ್ಲದೇ ಇದ್ದರೂ ವೀಲ್ ಚೇರ್, ಸ್ಟಿಕ್ ಸಹಾಯದಿಂದ, ಇನ್ನೂ ಕೆಲವರು ರಸ್ತೆ ಮೇಲೆ ತೆವಲುತ್ತಾ ನಗರದ ಮೆಜೆಸ್ಟಿಕ್ ರೈಲ್ವೇ ನಿಲ್ದಾಣದಿಂದ ಫ್ರೀಡಂ ಪಾರ್ಕ್‌ವರೆಗೆ ವಿಶೇಷಚೇತನರು ಕಾಲ್ನಡಿಗೆಯಲ್ಲಿ ಬಂದು ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದರು‌.

ಕನಿಷ್ಠ ಗೌರವ ಧನವನ್ನು ಏರಿಕೆ ಮಾಡುವುದೂ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಅವರು ಪ್ರತಿಭಟನೆ ನಡೆಸಿದರು‌. ಆದ್ರೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಮತ್ತು ವಿಶೇಷಚೇತನರ ಸಬಲೀಕರಣ ಇಲಾಖೆಯ ಸಚಿವೆ ಶಶಿಕಲಾ ಜೊಲ್ಲೆ ಮಾತ್ರ ಸ್ಥಳಕ್ಕೆ ಬರಲೇ ಇಲ್ಲ. ಬದಲಾಗಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಾಕೇಶ್ ಸಿಂಗ್ ಮನವಿ ಸ್ವೀಕರಿಸಿದರು.

ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸರ್ಕಾರದ ವಿರುದ್ಧ ವಿಶೇಷಚೇತನರು ಪ್ರತಿಭಟನೆ ನಡೆಸಿದರು

ಕಳೆದ ಹನ್ನೆರಡು ವರ್ಷದಿಂದ ವಿಕಲಚೇತನರಿಗೆ ದಿನಕ್ಕೆ ಕೇವಲ 100 ರೂ, ವಿದ್ಯಾವಂತರಿಗೆ 200 ರೂಪಾಯಿ ಗೌರವ ಧನ ನೀಡಲಾಗುತ್ತಿದೆ. ಇದರಿಂದ ಕುಟುಂಬ ನಿರ್ವಹಣೆ ಕಷ್ಟವಾಗುತ್ತಿದೆ. ಸರ್ಕಾರ ಆದಷ್ಟು ಬೇಗ ಗೌರವ ಧನ ಹೆಚ್ಚಳ ಮಾಡಬೇಕು ಎಂದು ಕರ್ನಾಟಕ ರಾಜ್ಯ ವಿಶೇಷಚೇತನರ ಹಾಗೂ ವಿವಿಧೋದ್ದೇಶ ಮತ್ತು ಗ್ರಾಮೀಣ ಪುನರ್ವಸತಿ ಕಾರ್ಯಕರ್ತರ ಒಕ್ಕೂಟದ ರಾಜ್ಯ ಸಂಚಾಲಕ ದೇವರಾಜ್ ತಿಳಿಸಿದರು.

Last Updated : Jan 17, 2020, 11:13 AM IST

For All Latest Updates

TAGGED:

ABOUT THE AUTHOR

...view details