ಬೆಂಗಳೂರು:ಸಂಕ್ರಾಂತಿ ಹಬ್ಬದ ಹಿನ್ನೆಲೆಯಲ್ಲಿ ವಿಕಲಚೇತನರು ಇಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ಸಂಕ್ರಾಂತಿ ಹಬ್ಬದ ಶುಭಾಶಯ ಕೋರಿದ್ದಾರೆ.
ಹೆಚ್ಡಿಕೆ ನಿವಾಸಕ್ಕೆ ಭೇಟಿ ನೀಡಿ ಎಳ್ಳು-ಬೆಲ್ಲ ಹಂಚಿದ ವಿಕಲ ಚೇತನರು ಜೆಪಿ ನಗರದಲ್ಲಿರುವ ಅವರ ನಿವಾಸಕ್ಕೆ ಭೇಟಿ ನೀಡಿದ ವಿಕಲ ಚೇತನರು, ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ಎಳ್ಳು ಬೆಲ್ಲವನ್ನು ಹಂಚಿದರು.
ಓದಿ...ಬಿಎಸ್ವೈ ಮಾತು ತಪ್ಪಲ್ಲ, ಹಣೆಯಲ್ಲಿ ಬರೆದಿದ್ರೆ ಸಚಿವನಾಗುತ್ತೇನೆ; ಶಾಸಕ ಮುನಿರತ್ನ ಪ್ರತಿಕ್ರಿಯೆ..!
ಇಂಧನ ಇಲಾಖೆಯಲ್ಲಿ 600ಕ್ಕೂ ಹೆಚ್ಚು ವಿಶೇಷ ಚೇತನರಿಗೆ ಖಾಯಂ ಉದ್ಯೋಗ ಕೊಡಿಸಿ 2 ವರ್ಷವಾದ ಹಿನ್ನೆಲೆಯಲ್ಲಿ ವಿಶೇಷ ಚೇತನರು ಕೃತಜ್ಞತೆ ತಿಳಿಸಿದರು. ಈ ಸಂದರ್ಭದಲ್ಲಿ ಶಾಸಕಿ ಅನಿತಾ ಕುಮಾರಸ್ವಾಮಿ ಅವರು ಉಪಸ್ಥಿತರಿದ್ದರು.