ಬೆಂಗಳೂರು: ಕರ್ನಾಟಕ ರಾಜ್ಯದಲ್ಲಿ ಆಕ್ಸಿಜನ್ ಅಭಾವ ಹೆಚ್ಚಾಗಿದ್ದು, ಅನೇಕ ದೇಶಗಳು ಸಹಾಯಕ್ಕಾಗಿ ಮುಂದೆ ಬಂದಿವೆ. ಸದ್ಯ ಇದೇ ಮೊದಲ ಬಾರಿಗೆ ವಿಶೇಷ ರೈಲಿನ ಮೂಲಕ ಆಕ್ಸಿಜನ್ ಬಂದಿದೆ. ಜೆಮ್ಶೆಡ್ಪುರದಿಂದ ಬೆಂಗಳೂರಿಗೆ ಎಕ್ಸ್‌ಪ್ರೆಸ್ ರೈಲಿನಲ್ಲಿ 6 ಆಕ್ಸಿಜನ್ ಕಂಟೇನರ್‌ಗಳು ಬಂದು ತಲುಪಿವೆ. ತಲಾ 20 ಟನ್ ಇರುವ ಆಕ್ಸಿಜನ್ ಕಂಟೇನರ್‌ಗಳು ಈಗ ವೈಟ್‌ಫೀಲ್ಡ್‌ನಲ್ಲಿರುವ ಕಾರ್ಪೊರೇಷನ್ ಆಫ್ ಇಂಡಿಯಾ ಡಿಪೋಗೆ ಬಂದು ತಲುಪಿವೆ.
ಆರು ಕ್ರಯೋಜೆನಿಕ್ ಟ್ಯಾಂಕ್ಗಳಲ್ಲಿ 120 ಟನ್ ದ್ರವ ವೈದ್ಯಕೀಯ ಆಮ್ಲಜನಕವನ್ನು (ಎಲ್‌ಎಂಒ) ಹೊತ್ತ ಕರ್ನಾಟಕದ ಮೊದಲ ಆಕ್ಸಿಜನ್ ಎಕ್ಸ್‌ಪ್ರೆಸ್ ಇಂದು ಬೆಳಗ್ಗೆ 9.30ಕ್ಕೆ ಸೌತ್ ವೆಸ್ಟ್ ವೈಟ್ ಫೀಲ್ಡ್‌ನಲ್ಲಿರುವ ಒಳನಾಡಿನ ಕಂಟೇನರ್ ಡಿಪೋ ಟರ್ಮಿನಲ್ ತಲುಪಿತು. ರೈಲು ಸೋಮವಾರ ಮುಂಜಾನೆ 3.30ಕ್ಕೆ ಜೆಮ್ಶೆಡ್ಪುರದ ತತಾನಗರ ನಿಲ್ದಾಣದಿಂದ ಹೊರಟಿತ್ತು. ಸುಮಾರು 29 ಗಂಟೆಗಳ ಕಾಲ ಪ್ರಾಯಾಣ ಮಾಡಿ ಬೆಂಗಳೂರು ತಲುಪಿದೆ. ಆಕ್ಸಿಜನ್ ಎಕ್ಸ್‌ಪ್ರೆಸ್ ರೈಲಿಗೆ ಗ್ರೀನ್ ಕಾರಿಡಾರ್ ವ್ಯವಸ್ಥೆ ಮಾಡಲಾಗಿತ್ತು.