ಬೆಂಗಳೂರು: ಕೊರೊನಾ ಸೋಂಕಿತ ಕುಟುಂಬಸ್ಥರಿಂದ ಲಕ್ಷಾಂತರ ರೂಪಾಯಿ ವಸೂಲಿ ಮಾಡಿದ್ದ ಖಾಸಗಿ ಆಸ್ಪತ್ರೆಗಳ ಮೇಲೆ ಐಎಎಸ್ ಹಾಗೂ ಐಪಿಎಸ್ ಅಧಿಕಾರಿಗಳ ವಿಶೇಷ ತಂಡ ದಾಳಿ ನಡೆಸಿದೆ.
ನಿಗದಿ ದರಕ್ಕಿಂತ ಹೆಚ್ಚು ವಸೂಲಿ: ರೋಗಿಗಳಿಗೆ ಮರುಪಾವತಿ ಮಾಡುವಂತೆ ಆಸ್ಪತ್ರೆಗೆ ಸೂಚನೆ - private hospital
ಸರ್ಜಾಪುರ ರಸ್ತೆಯಲ್ಲಿರುವ ಕೊಲಂಬಿಯಾ ಏಷ್ಯಾ ಆಸ್ಪತ್ರೆಗೆ ಇಂದು ವಿಶೇಷ ತಂಡ ದಾಳಿ ಮಾಡಿ ಪರಿಶೀಲನೆ ನಡೆಸಿತು. ಅಲ್ಲದೇ 14 ರೋಗಿಗಳಿಂದ ನಿಗದಿಗಿಂತ ಹೆಚ್ಚು ಹಣವನ್ನು ಪಡೆದಿದ್ದನ್ನು ಅವರಿಗೆ ಪುನಃ ನೀಡುವಂತೆ ತಾಕೀತು ಮಾಡಿದ್ರು.
ವಿಶೇಷ ತಂಡ
ಸರ್ಜಾಪುರ ರಸ್ತೆಯಲ್ಲಿರುವ ಕೊಲಂಬಿಯಾ ಏಷ್ಯಾ ಆಸ್ಪತ್ರೆಗೆ ಇಂದು ವಿಶೇಷ ತಂಡ ದಾಳಿ ಮಾಡಿ ಪರಿಶೀಲನೆ ನಡೆಸಿತು. ಆಸ್ಪತ್ರೆಯಲ್ಲಿನ ಒಟ್ಟು ಬೆಡ್ ಗಳ ಸಂಖ್ಯೆ, ಕೊರೊನಾ ಸೋಂಕಿತರಿಗೆ ನೀಡಿರುವ ಬೆಡ್ ವಿವರ, ರೋಗಿಗಳಿಂದ ಸಂಗ್ರಹಿಸಿದ ಮೊತ್ತವನ್ನು ವಿಸ್ತೃತವಾಗಿ ಪರಿಶೀಲಿಸಿದರು.
ಈ ವೇಳೆ ರೋಗಿಗಳಿಂದ ಆಸ್ಪತ್ರೆಯು ಲಕ್ಷಾಂತರ ರೂಪಾಯಿ ವಸೂಲಿ ಮಾಡಿರುವುದು ಬೆಳಕಿಗೆ ಬಂದಿದೆ. 14 ರೋಗಿಗಳಿಂದ ನಿಗದಿಗಿಂತ 5,02,245 ಲಕ್ಷ ರೂಪಾಯಿ ಶುಲ್ಕವನ್ನು ಆಸ್ಪತ್ರೆ ಪಡೆದಿದ್ದು, ಅದನ್ನು ರೋಗಿಗಳ ಕುಟುಂಬಸ್ಥರಿಗೆ ಮರಳಿಸುವಂತೆ ತಾಕೀತು ಮಾಡಿದ್ರು.
Last Updated : Jul 29, 2020, 11:59 PM IST