ಬೆಂಗಳೂರು: ಪೌರತ್ವ (ತಿದ್ದುಪಡಿ) ಕಾಯ್ದೆ ವಿರುದ್ಧದ ಕಿಚ್ಚು ದೇಶಾದ್ಯಂತ ದಿನೇ ದಿನೇ ಹೆಚ್ಚಾಗ್ತಿದೆ. ಮೊನ್ನೆ ತಾನೆ ಚರ್ಚ್ ಸ್ಟ್ರೀಟ್ ಬಳಿ ಇರುವ ಗೋಡೆಗಳ ಮೇಲೆ 'ಫ್ರೀ ಕಾಶ್ಮೀರ, ನೋ ಸಿಎಎ, ನೋ ಎನ್‌ಆರ್‌ಸಿ' ಎಂದು ಬರೆಯಲಾಗಿತ್ತು. ಈ ಹಿನ್ನೆಲೆ ಆರೋಪಿಗಳಿಗೆ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.
'ಫ್ರೀ ಕಾಶ್ಮೀರ' ಗೋಡೆ ಬರಹ ಪ್ರಕರಣ: ಆರೋಪಿಗಳ ಹುಡುಕಾಟಕ್ಕೆ ವಿಶೇಷ ಪೊಲೀಸ್ ತಂಡ - ಪೌರತ್ವ ಕಾಯ್ದೆ ವಿರುದ್ಧ ಹೋರಾಟ
ಈ ಗೋಡೆ ಬರಹ ಬರೆದವರ ವಿರುದ್ಧ ಕೇಂದ್ರ ವಿಭಾಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ಆರೋಪಿಗಳಿಗೆ ಹುಡುಕಾಟ ಆರಂಭಿಸಿದ್ದಾರೆ.

'ಫ್ರೀ ಕಾಶ್ಮೀರ' ಗೋಡೆ ಬರಹ ಪ್ರಕರಣ
'ಫ್ರೀ ಕಾಶ್ಮೀರ' ಗೋಡೆ ಬರಹ ಪ್ರಕರಣ
ಆರೋಪಿಗಳ ಕೃತ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಈ ಕೃತ್ಯವನ್ನು ಹೊರ ರಾಜ್ಯದವರು ನಡೆಸಿರಬಹುದು ಎಂಬ ಅನುಮಾನ ಪೊಲೀಸರದ್ದು. ಹೀಗಾಗಿ ಆರೋಪಿಗಳನ್ನು ಪತ್ತೆಹಚ್ಚಲು ವಿಶೇಷ ಪೊಲೀಸ್ ತಂಡ ರಚಿಸಲಾಗಿದೆ.