ಕರ್ನಾಟಕ

karnataka

ETV Bharat / state

ಬಿಬಿಎಂಪಿಯಿಂದ ಆಸ್ತಿ ತೆರಿಗೆ ಅಭಿಯಾನ: ಈವರೆಗೆ 2497 ಕೋಟಿ ಸಂಗ್ರಹ - Bruhat Bengaluru Mahanagara Palike

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಆಸ್ತಿ ತೆರಿಗೆ ಸಂಗ್ರಹ ತೀವ್ರಗೊಳಿಸುವ ದೃಷ್ಟಿಯಿಂದ ತೀವ್ರ ಆಸ್ತಿ ತೆರಿಗೆ ಸಂಗ್ರಹ ಅಭಿಯಾನ ಹಮ್ಮಿಕೊಳ್ಳಲಾಗಿದ್ದು, ಎಲ್ಲಾ ಹಂತದ ಅಧಿಕಾರಿಗಳು ಪಾಲ್ಗೊಂಡು ತೆರಿಗೆ ಸಂಗ್ರಹಿಸುತ್ತಿದ್ದಾರೆ.

bbmp
ಬಿಬಿಎಂಪಿ

By

Published : Oct 16, 2022, 11:30 AM IST

ಬೆಂಗಳೂರು: ಬಿಬಿಎಂಪಿ ಆಸ್ತಿ ತೆರಿಗೆ ಸಂಗ್ರಹ ತೀವ್ರಗೊಳಿಸುವ ಮತ್ತು ಗುರಿ ಸಾಧಿಸುವ ಉದ್ದೇಶದಿಂದ ಶನಿವಾರದಿಂದ 'ತೀವ್ರ ಆಸ್ತಿ ತೆರಿಗೆ ಸಂಗ್ರಹ ಅಭಿಯಾನ' ಹಮ್ಮಿಕೊಳ್ಳಲಾಗಿದ್ದು, ಎಲ್ಲಾ ಹಂತದ ಅಧಿಕಾರಿಗಳು ಪಾಲ್ಗೊಂಡು ತೆರಿಗೆ ಸಂಗ್ರಹಿಸುತ್ತಿದ್ದಾರೆ ಅಂತಾ ಬಿಬಿಎಂಪಿ ಕಂದಾಯ ವಿಭಾಗದ ವಿಶೇಷ ಆಯುಕ್ತ ಡಾ.ಎಲ್.ಆರ್. ದೀಪಕ್ ತಿಳಿಸಿದ್ದಾರೆ.

ಅಧಿಕಾರಿಗಳು ದೀರ್ಘಕಾಲದ ಸುಸ್ತಿದಾರರಿಂದ ಆಸ್ತಿ ತೆರಿಗೆ ವಸೂಲಿಗೆ ಆದ್ಯತೆ ನೀಡುತ್ತಿದ್ದು, ತಪ್ಪಾಗಿ ಆಸ್ತಿ ಘೋಷಣೆ ಮಾಡಿಕೊಂಡವರಿಂದ ಪರಿಷ್ಕೃತ ಆಸ್ತಿ ಆಧಾರದಲ್ಲಿ ತೆರಿಗೆ ಸಂಗ್ರಹಿಸುತ್ತಿದ್ದಾರೆ. ಬೆಸ್ಕಾಂನಿಂದ ದತ್ತಾಂಶದ ಆಧಾರದಲ್ಲಿ ಪರಿಶೀಲಿಸಿ ತೆರಿಗೆ ವಸೂಲಿ ಮಾಡಲಾಗುತ್ತಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ಕಚೇರಿಗಳಿಂದ ತೆರಿಗೆ ಸಂಗ್ರಹಿಸಲಾಗುತ್ತಿದೆ. ಕೋರ್ಟ್ ನಿರ್ದೇಶನದಂತೆ ಶಿಕ್ಷಣ ಸಂಸ್ಥೆಗಳಿಂದ ಶೇ.100 ರಷ್ಟು ತೆರಿಗೆ ಸಂಗ್ರಹಿಸಲಾಗುತ್ತಿದೆ. ಹೊಸ ಆಸ್ತಿಗಳನ್ನು ತೆರಿಗೆ ವ್ಯಾಪ್ತಿಗೆ ಒಳಪಡಿಸಲಾಗುತ್ತಿದೆ. ದೊಡ್ಡ ಪ್ರಮಾಣದ ಆಸ್ತಿಗಳನ್ನು ಟೋಟಲ್ ಸ್ಟೇಷನ್ ಸರ್ವೇಗೆ ಒಳಪಡಿಸಲಾಗುತ್ತಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ:ಕಂದಾಯ ಇಲಾಖೆ ಸರ್ವೇ ಬಳಿಕ ರಾಜಕಾಲುವೆ ತೆರವು ಮುಂದುವರಿಕೆ : ಬಿಬಿಎಂಪಿ ಆಯುಕ್ತರು

ಈವರೆಗೆ ಭಾಗಶಃ ತೆರಿಗೆ ಪಾವತಿಸಿದವರಿಂದ ಪೂರ್ಣ ಪ್ರಮಾಣದಲ್ಲಿ ತೆರಿಗೆ ಕಟ್ಟಿಸಿಕೊಳ್ಳಲಾಗುತ್ತಿದೆ. ಪಾಲಿಕೆಗೆ ಪ್ರಮುಖ ಆದಾಯದ ಮೂಲ ಆಸ್ತಿಗಳ ತೆರಿಗೆ ಸಂಗ್ರಹವಾಗಿದೆ. ಸರ್ಕಾರದ ಅನುಮೋದಿತ ಬಜೆಟ್ ಅನ್ನು ಎಲ್ಲ ವಲಯಗಳಲ್ಲಿ ಅನುಷ್ಠಾನಕ್ಕಾಗಿ ತರುವ ಉದ್ದೇಶದಿಂದ ತೆರಿಗೆ ವಸೂಲಿಯೂ ಮುಖ್ಯವಾಗಿದೆ. ಪ್ರಸ್ತುತ ಹಣಕಾಸು ವರ್ಷದಲ್ಲಿ 2,497.58 ಕೋಟಿ ರೂಪಾಯಿ ಸಂಗ್ರಹ ಮಾಡಲಾಗಿದೆ. ಒಟ್ಟಾರೆ ಗುರಿಯಲ್ಲಿ ಶೇ.59.61 ಸಾಧನೆಯಾಗಿದೆ. ಉಳಿದ ತೆರಿಗೆ ಸಂಗ್ರಹಿಸುವ ದೃಷ್ಟಿಯಿಂದ ಈ ಅಭಿಯಾನ ಕೈಗೊಳ್ಳಲಾಗಿದೆ. ಆಸ್ತಿ ತೆರಿಗೆ ಸಂಗ್ರಹಣೆಯನ್ನು ಕ್ರೋಢೀಕರಿಸಿ ಮುಖ್ಯ ಆಯುಕ್ತರಿಗೆ ವರದಿ ಸಲ್ಲಿಸಲಾಗುತ್ತದೆ ಎಂದು ದೀಪಕ್ ತಿಳಿಸಿದ್ದಾರೆ.

ಇದನ್ನೂ ಓದಿ:ಹೈಕೋರ್ಟ್ ಆದೇಶದಂತೆ ಬಿಬಿಎಂಪಿ ಚುನಾವಣೆ ನಡೆಸಲು ನಾವು ಸಿದ್ಧ: ಮುಖ್ಯ ಆಯುಕ್ತ ತುಷಾರ್ ಗಿರಿನಾಥ್

ಅಧಿಕಾರಿಗಳ ತೆರಿಗೆ ವಸೂಲಿ ಮೊತ್ತ:

  • ಟ್ಯಾಕ್ಸ್ ಇನ್ಸ್‌ಪೆಕ್ಟರ್ - 10 ಲಕ್ಷ ರೂಪಾಯಿ
  • ಸಹಾಯಕ ಕಂದಾಯ ಅಧಿಕಾರಿ - 10 ಲಕ್ಷ ರೂಪಾಯಿಯಿಂದ 25 ಲಕ್ಷ ರೂಪಾಯಿ
  • ಕಂದಾಯ ಅಧಿಕಾರಿ - 25 ಲಕ್ಷ ರೂಪಾಯಿಗಳಿಂದ 50 ಲಕ್ಷ ರೂಪಾಯಿ
  • ವಲಯ ಉಪ ಆಯುಕ್ತ - 50 ಲಕ್ಷ ರೂಪಾಯಿಯಿಂದ 1 ಕೋಟಿ ರೂಪಾಯಿ
  • ವಲಯ ಜಂಟಿ ಆಯುಕ್ತರು - 1 ಕೋಟಿ ರೂಪಾಯಿಗಳಿಂದ 5 ಕೋಟಿ ರೂಪಾಯಿ
  • ವಲಯ ಆಯುಕ್ತರು - 5 ಕೋಟಿ ರೂಪಾಯಿಯಿಂದ ಮೇಲ್ಪಟ್ಟ ಬಾಕಿ ಪ್ರಕರಣ

ABOUT THE AUTHOR

...view details