ಬೆಂಗಳೂರು: ಮಹಾ ಶಿವರಾತ್ರಿ ಅಂಗವಾಗಿ ಬೆಂಗಳೂರಿನ ಗಿರಿನಗರದ ವಾಸವಿ ದೇವಸ್ಥಾನದಲ್ಲಿ ಜಲಕಂಠೇಶ್ವರ ಸಹಿತ ಅಷ್ಟೋತ್ತರ ಲಿಂಗ ಪ್ರತಿಷ್ಠಾಪನೆ ಮಾಡುವ ಮೂಲಕ ವಿಭಿನ್ನವಾಗಿ ಶಿವರಾತ್ರಿ ಆಚರಿಸಲಾಯಿತು.
ಬೆಂಗಳೂರಿನ ವಾಸವಿ ದೇವಸ್ಥಾನದಲ್ಲಿ ಅಷ್ಟೋತ್ತರ ಲಿಂಗ ಪ್ರತಿಷ್ಠಾಪನೆ
ನಾಡಿನದಾದ್ಯಂತ ಶಿವರಾತ್ರಿ ಹಬ್ಬ ಕಳೆಗಟ್ಟಿದೆ. ಅದರಂತೆ ಬೆಂಗಳೂರಿನ ಗಿರಿನಗರದ ವಾಸವಿ ದೇವಸ್ಥಾನದಲ್ಲಿ ಮೇಣದಿಂದ ಶಿವಲಿಂಗ ಪ್ರತಿಷ್ಠಾಪಿಸಿ ಪೂಜಿಸಲಾಗುತ್ತಿದೆ.
ಬೆಂಗಳೂರು
ಗಿರಿನಗರದ ವಾಸವಿ ದೇವಸ್ಥಾನದಲ್ಲಿ ಪ್ರತಿ ವರ್ಷದಂತೆ ಈ ಬಾರಿಯೂ ಮಹಾ ಶಿವರಾತ್ರಿಯನ್ನು ವಿಭಿನ್ನವಾಗಿ ಆಚರಿಸಲಾಗುತ್ತಿದ್ದು,ಈ ಬಾರಿ ಜಲಕಂಠೇಶ್ವರ ಸಹಿತ ಅಷ್ಟೋತ್ತರ ಲಿಂಗ ದರ್ಶನ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿದೆ.
ಗಿರಿನಗರದ ನಿವಾಸಿಯಾಗಿರುವ ವೆಂಕಟೇಶ್ ಎಂಬುವರು ಕಳೆದ 12 ವರ್ಷಗಳಿಂದ ವಿಭಿನ್ನ ರೂಪಗಳಲ್ಲಿ ಶಿವನ ಪ್ರತಿರೂಪಗಳನ್ನು ಪ್ರತಿಷ್ಠಾಪಿಸುತ್ತ ಬಂದಿದ್ದಾರೆ. ಈ ಬಾರಿಯ ಶಿವನ ಮೂರ್ತಿ ನಿರ್ಮಿಸಲು ಸುಮಾರು 350 ಕೆಜಿ ಮೇಣವನ್ನು ಬಳಸಲಾಗಿದೆ. 108 ಲಿಂಗಗಳನ್ನು ತಲಾ 350 ಗ್ರಾಂ ಮೇಣ ಬಳಸಿ ತಯಾರಿಸಲಾಗಿದೆ ಎಂದು ತಿಳಿಸಿದರು.