ಪೊಲೀಸ್, ಅಗ್ನಿಶಾಮಕ ಇಲಾಖೆಗಳಿಗೆ ಸಾವಿರಾರು ಕೋಟಿ ರೂ. ಯೋಜನೆ - ಕರ್ನಾಟಕ ಇತ್ತೀಚಿನ ಸುದ್ದಿ
ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಮಂಡನೆ ಮಾಡಿರುವ ಬಜೆಟ್ನಲ್ಲಿ ಗೃಹ ಕ್ಷೇತ್ರಕ್ಕೆ ಆದ್ಯತೆ ನೀಡಲಾಗಿದ್ದು, ಒಟ್ಟು 2,740 ಕೋಟಿ ರೂ ಅನುದಾನ ನೀಡಿದ್ದಾರೆ.
![ಪೊಲೀಸ್, ಅಗ್ನಿಶಾಮಕ ಇಲಾಖೆಗಳಿಗೆ ಸಾವಿರಾರು ಕೋಟಿ ರೂ. ಯೋಜನೆ Karnataka Budget](https://etvbharatimages.akamaized.net/etvbharat/prod-images/768-512-10918596-thumbnail-3x2-mng.jpg)
ಗೃಹ ಕ್ಷೇತ್ರಕ್ಕೆ ಆದ್ಯತೆ
ಬೆಂಗಳೂರು: ರಾಜ್ಯ ಪೊಲೀಸ್, ಅಗ್ನಿಶಾಮಕ ಹಾಗೂ ಕಾರಾಗೃಹ ಇಲಾಖೆಗಳ ಸಿಬ್ಬಂದಿಗೆ 10,032 ವಸತಿ ಗೃಹಗಳನ್ನು ನಿರ್ಮಿಸಲು 2,740 ಕೋಟಿ ರೂ.ವೆಚ್ಚದ ಯೋಜನೆ ಅನುಷ್ಠಾನಗೊಳಿಸಲು ಬಜೆಟ್ನಲ್ಲಿ ಘೋಷಿಸಲಾಗಿದೆ.
- ಕಟ್ಟಡವಿಲ್ಲದ 100 ಪೊಲೀಸ್ ಠಾಣೆಗಳಿಗೆ ಮುಂದಿನ 5 ವರ್ಷಗಳಲ್ಲಿ 200 ಕೋಟಿ ರೂ. ವೆಚ್ಚದಲ್ಲಿ ಹೊಸ ಕಟ್ಟಡಗಳ ನಿರ್ಮಾಣ, ಪ್ರಸ್ತಕ ಸಾಲಿನಲ್ಲಿ 25 ಕೋಟಿ ರೂ. ಮೀಸಲು
- ಪೊಲೀಸ್, ಅಗ್ನಿಶಾಮಕ ಮತ್ತು ಕಾರಾಗೃಹ ಇಲಾಖೆಗಳ ಸಿಬ್ಬಂದಿಗೆ 10,032 ವಸತಿ ಗೃಹಗಳನ್ನು ನಿರ್ಮಿಸಲು 2,740 ಕೋಟಿ ರೂ.ವೆಚ್ಚದ ಯೋಜನೆ
- ಹಾವೇರಿಯ ಶಿಗ್ಗಾಂವ್ನಲ್ಲಿರುವ ಕೆಎಸ್ಆರ್ಪಿ ಪಡೆಯ 10 ಬೆಟಾಲಿಯನ್ ಸಶಕ್ತಗೊಳಿಸಲು ಮೂಲ ಸೌಕರ್ಯಗಳಿಗೆ 10 ಕೋಟಿ ರೂ. ನಿಗದಿ
- ಕೊಡಗು ಮತ್ತು ಹಾವೇರಿ ಜಿಲ್ಲೆಯಲ್ಲಿ ನೂತನ ಜಿಲ್ಲಾ ಪೊಲೀಸ್ ಸಂಕೀರ್ಣ ನಿರ್ಮಾಣಕ್ಕೆ ತಲಾ 8 ಕೋಟಿ ರೂ.
- ಅಗ್ನಿಶಾಮಕ ಮತ್ತು ತುರ್ತುಸೇವೆ ಇಲಾಖೆಯಲ್ಲಿ ಸಿಬ್ಬಂದಿ ಸುರಕ್ಷತೆಗೆ ಕೆ-ಸೇಫ್- 2 ಯೋಜನೆ ಪರಿಷ್ಕೃತಗೊಳಿಸುವುದು.
- ಕರಾವಳಿ ಕಾವಲು ಪಡೆಯನ್ನು ಅತ್ಯಾಧುನಿಕ ತಂತ್ರಜ್ಞನದೊಂದಿಗೆ ಬಲಪಡಿಸಲು 2 ಕೋಟಿ ರೂ. ಅನುದಾನ ಘೋಷಣೆ
- ರಾಜ್ಯದ ಎಂಟು ಕಾರಾಗೃಹಗಳ ಸಾಮರ್ಥ್ಯ ಹೆಚ್ಚಿಸಲು 40 ಕೋಟಿ ರೂ.ಅನುದಾನ, ಪ್ರಸ್ತಕ ಸಾಲಿನಲ್ಲಿ 10 ಕೋಟಿ ರೂ.ಒದಗಿಸುವುದು ಎಂದು ಸಿಎಂ ತಿಳಿಸಿದ್ದಾರೆ.
- ಕೈದಿಗಳನ್ನು ಕಾರಾಗೃಹದಿಂದಲೇ ಆನ್ ಲೈನ್ ಮೂಲಕ ನ್ಯಾಯಾಲಯ ಕಲಾಪಕ್ಕೆ ಹಾಜರಪಡಿಸಲು 15 ಕೋಟಿ ರೂ. ವೆಚ್ಚದ ವಿಡಿಯೊ ಕಾನ್ಪೆರೆನ್ಸಿಂಗ್ ಸೌಲಭ್ಯ ಅನುಷ್ಠಾನ
- ಮಾದಕ ವಸ್ತು ನಿಯಂತ್ರಣಕ್ಕೆ ಹಾಗೂ ಮಾದಕವಸ್ತುಗಳ ವಿರುದ್ಧ ಅರಿವು ಮೂಡಿಸಲು ವಿಶೇಷ ಕಾರ್ಯಕ್ರಮ ಜಾರಿ
- ಹುಬ್ಬಳ್ಳಿ ಹಾಗೂ ಬಳ್ಳಾರಿಯಲ್ಲಿ ಎಫ್ ಎಸ್ ಎಲ್ ಪ್ರಾದೇಶಿಕ ಕೇಂದ್ರಗಳ ಸ್ಥಾಪನೆ ಮಾಡುವುದಾಗಿ ಹಣಕಾಸು ಸಚಿವರೂ ಆದ ಸಿಎಂ ತಮ್ಮ ಬಜೆಟ್ ಭಾಷಣದಲ್ಲಿ ಘೋಷಣೆ ಮಾಡಿದ್ದಾರೆ.
Last Updated : Mar 8, 2021, 6:22 PM IST