ಕರ್ನಾಟಕ

karnataka

ETV Bharat / state

ಐಎಂಎ ‌ಹಗರಣ ಬಗ್ಗೆ ಸಾರ್ವಜನಿಕ ಅರ್ಜಿ ವಿಚಾರಣೆ: ವಿಶೇಷ ಪಬ್ಲಿಕ್​​ ಪ್ರಾಸಿಕ್ಯೂಟರ್​​ ನೇಮಕ‌ - undefined

ಐಎಂಎ ವಂಚನೆ ಹಗರಣ ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎಂದು ಕೋರಿ ಹಣ ಕಳೆದುಕೊಂಡವರ ಕಡೆಯಿಂದ ಹೈಕೋರ್ಟ್​ಗೆ ನಾಲ್ಕು ಅರ್ಜಿ ಸಲ್ಲಿಕೆಯಾಗಿವೆ. ಈ ಅರ್ಜಿಗಳ ವಿಚಾರಣೆಗೆ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್​ನ್ನು ನೇಮಕ ಮಾಡಲಾಗಿದೆ.

ಐಎಂಎ ‌

By

Published : Jul 15, 2019, 10:01 PM IST

ಬೆಂಗಳೂರು: ಐಎಂಎ ಬಹುಕೋಟಿ ವಂಚನೆ ಪ್ರಕರಣದ ‌ಸಿಬಿಐ ತನಿಖೆಗೆ ಕೋರಿ ಹೈಕೋರ್ಟ್‌ಗೆ ಸಲ್ಲಿಕೆಯಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆಗೆ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್​ನ್ನು ಗೃಹ ಇಲಾಖೆ ನೇಮಕ ಮಾಡಿದೆ.

ಐಎಂಎ ವಂಚನೆ ಹಗರಣ ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎಂದು ಕೋರಿ ಹಣ ಕಳೆದುಕೊಂಡವರ ಕಡೆಯಿಂದ ಹೈಕೋರ್ಟ್​ಗೆ ನಾಲ್ಕು ಅರ್ಜಿ ಸಲ್ಲಿಕೆಯಾಗಿವೆ. ಒಂದು ಕಡೆ ಎಸ್ಐಟಿ ಅಧಿಕಾರಿಗಳೂ ಕೂಡ ತನಿಖೆ ಚುರುಕುಗೊಳಿಸಿದ್ದಾರೆ. ಈ ನಡುವೆ ಸಿಬಿಐ ತನಿಖೆಗೆ ಕೋರಿ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆಗೆ ಸರ್ಕಾರದ ಪರವಾಗಿ ವಾದ ಮಂಡಿಸಲು ವಕೀಲ ಬಿ.ಎನ್.ಜಗದೀಶ್ ಅವರನ್ನು ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿ ನೇಮಕ ಮಾಡಿ ಗೃಹ ಇಲಾಖೆ ಆದೇಶ ಹೊರಡಿಸಿದೆ.

ಸರ್ಕಾರ ಈಗಾಗಲೇ ತನಿಖೆಯನ್ನು ವಿಶೇಷ ತನಿಖಾ ದಳಕ್ಕೆ ನೀಡಿ ಆದೇಶಿಸಿತ್ತು. ಅರ್ಜಿದಾರರು ಸಿಬಿಐಗೆ ಕೋರಿ ಅರ್ಜಿ ಸಲ್ಲಿಸಿದ್ದರಿಂದ ಸರ್ಕಾರದ ಪರವಾಗಿ ವಾದಿಸಲು ಜಗದೀಶ್ ಅವರನ್ನು ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿ ನೇಮಕ ಮಾಡಲಾಗಿದೆ.

For All Latest Updates

TAGGED:

ABOUT THE AUTHOR

...view details