ಬೆಂಗಳೂರು: ನಗರದ ಹಲವೆಡೆ ವೈನ್ ಶಾಪ್, ಬಾರ್ ಆ್ಯಂಡ್ ರೆಸ್ಟೋರೆಂಟ್, ಲಾಡ್ಜ್ಗಳ ಬಳಿ ಅಪರಾಧ ಚಟುವಟಿಕೆಗಳು ಹೆಚ್ಚುತ್ತಿರುವುದರ ವಿರುದ್ಧ ಬೆಂಗಳೂರು ಪೊಲೀಸರು ವಿಶೇಷ ಕಾರ್ಯಾಚರಣೆ ಕೈಗೊಂಡು ವಿವಿಧ ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ. ಡಿಸೆಂಬರ್ 3 ರಂದು ರಾತ್ರಿ ಬೆಂಗಳೂರಿನ ವಿವಿಧೆಡೆ ಏಕಕಾಲದಲ್ಲಿ ವಿಶೇಷ ಕಾರ್ಯಾಚರಣೆ ನಡೆಸಲಾಗಿದ್ದು, ವಿವಿಧ ಐಪಿಸಿ ಕಾಯ್ದೆಗಳಡಿ 5, ಕರ್ನಾಟಕ ಪೊಲೀಸ್ ಕಾಯ್ದೆಯಡಿ 1007, ಹಾಗೂ ಸಿಗರೇಟು ಮತ್ತಿತರ ತಂಬಾಕು ಉತ್ಪನ್ನಗಳ ಕಾಯ್ದೆಯಡಿ 2,425 ಪ್ರಕರಣಗಳನ್ನು ದಾಖಲಿಸಿಕೊಂಡಿರುವ ಬಗ್ಗೆ ನಗರ ಪೊಲೀಸ್ ಆಯುಕ್ತರು ಮಾಹಿತಿ ನೀಡಿದ್ದಾರೆ.
ಬೆಂಗಳೂರಿನ ಹಲವೆಡೆ ಪೊಲೀಸರ ವಿಶೇಷ ಕಾರ್ಯಾಚರಣೆ: ಐದು ಸಾವಿರಕ್ಕೂ ಅಧಿಕ ಜನರ ತಪಾಸಣೆ - ಬೆಂಗಳೂರಿನ ಹಲವೆಡೆ ಪೊಲೀಸರ ವಿಶೇಷ ಕಾರ್ಯಾಚರಣೆ
ಬೆಂಗಳೂರಿನ ಹಲವೆಡೆ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿ, ಐದು ಸಾವಿರಕ್ಕೂ ಅಧಿಕ ಜನರನ್ನು ತಪಾಸಣೆ ಮಾಡಿದ್ದಾರೆ.
![ಬೆಂಗಳೂರಿನ ಹಲವೆಡೆ ಪೊಲೀಸರ ವಿಶೇಷ ಕಾರ್ಯಾಚರಣೆ: ಐದು ಸಾವಿರಕ್ಕೂ ಅಧಿಕ ಜನರ ತಪಾಸಣೆ ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್](https://etvbharatimages.akamaized.net/etvbharat/prod-images/05-12-2023/1200-675-20190000-thumbnail-16x9-bgk.jpg)
Published : Dec 5, 2023, 2:52 PM IST
ಇತ್ತೀಚಿನ ದಿನಗಳಲ್ಲಿ ನಗರದ ವೈನ್ ಶಾಪ್, ಬಾರ್ ಆ್ಯಂಡ್ ರೆಸ್ಟೊರೆಂಟ್, ಡಾಬಾ, ಲಾಡ್ಜ್, ಪಬ್, ಬೇಕರಿ / ಟೀ ಶಾಪ್ಗಳ ಬಳಿ ಅಪರಾಧ ಹಿನ್ನೆಲೆಯುಳ್ಳವರ ಚಟುವಟಿಕೆಗಳು, ಗಲಾಟೆ, ಸುಲಿಗೆ ಮುಂತಾದವು ಹೆಚ್ಚುತ್ತಿರುವುದನ್ನು ನಿಯಂತ್ರಿಸುವ ಉದ್ದೇಶದಿಂದ ಈ ಕಾರ್ಯಾಚರಣೆ ಕೈಗೊಳ್ಳಲಾಗಿತ್ತು. ಕಾರ್ಯಾಚರಣೆ ಸಂದರ್ಭದಲ್ಲಿ 577 ವೈನ್ ಶಾಪ್ಸ್, 969 ಬಾರ್ ಆ್ಯಂಡ್ ರೆಸ್ಟೋರೆಂಟ್, 704 ಲಾಡ್ಜ್ಗಳು, 1,682 ಬೇಕರಿ, ಪಾನ್ ಶಾಪ್ಗಳ, 715 ಇತರೆ ಜನನಿಬಿಡ ಸ್ಥಳಗಳ ಬಳಿ ಸುಮಾರು 5 ಸಾವಿರಕ್ಕೂ ಅಧಿಕ ಜನರನ್ನು ಹಾಗೂ 4 ಸಾವಿರಕ್ಕೂ ಅಧಿಕ ವಾಹನಗಳನ್ನು ತಪಾಸಣೆ ನಡೆಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಬಿ. ದಯಾನಂದ್ ಮಾಧ್ಯಮದವರಿಗೆ ತಿಳಿಸಿದ್ದಾರೆ.
ಇದನ್ನೂ ಓದಿ:ಎಂಎಲ್ಸಿ ಸಿ.ಪಿ ಯೋಗೇಶ್ವರ್ ಭಾವ ನಾಪತ್ತೆ ಪ್ರಕರಣ: ಪೊಲೀಸರಿಂದ ಮುಂದುವರಿದ ಶೋಧ ಕಾರ್ಯಾಚರಣೆ