ಬೆಂಗಳೂರು: ನಗರದ ರೇಸ್ಕೋರ್ಸ್ ರಸ್ತೆಯ ಕಾಂಗ್ರೆಸ್ ಭವನದಲ್ಲಿ ಇಂದು ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಆರೋಗ್ಯಕ್ಕೆ ವಿಶೇಷ ಒತ್ತು ಕೊಡಲಾಗಿತ್ತು.
ರಾಜ್ಯದಲ್ಲಿ ಕೊರೊನಾ ಆತಂಕ ಹೆಚ್ಚಾಗುತ್ತಿರುವ ಬೆನ್ನಲ್ಲೇ ವಿವಿಧ ಜಿಲ್ಲೆಗಳಿಂದ ಕಾಂಗ್ರೆಸ್ ಶಾಸಕರು ಆಗಮಿಸುತ್ತಿದ್ದು, ಈ ಸಂದರ್ಭ ಪಕ್ಷದ ಶಾಸಕಾಂಗ ಸಭೆ ಪಸರಿಸುವ ತಾಣ ಆಗದಿರಲಿ ಎಂಬ ಉದ್ದೇಶದಿಂದ ತಪಾಸಣೆಗೆ ವಿಶೇಷ ಒತ್ತು ಕೊಡಲಾಗಿತ್ತು.
ಕಾಂಗ್ರೆಸ್ ಭವನದ ಪ್ರವೇಶದ್ವಾರದಲ್ಲಿಯೇ ವಿಶೇಷ ಸಿಬ್ಬಂದಿ ನೇಮಿಸಿ ಶಾಸಕರ ಥರ್ಮಲ್ ಸ್ಕ್ರೀನಿಂಗ್, ಸ್ಯಾನಿಟೈಸರ್ ಬಳಕೆ ಹಾಗೂ ಮಾಸ್ಕ್ ಇಲ್ಲದೇ ಬಂದವರಿಗೆ ಮಾಸ್ಕ್ ವಿತರಿಸುವ ಕಾರ್ಯ ಕೂಡ ಮಾಡಲಾಯಿತು.
ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಆರೋಗ್ಯಕ್ಕೆ ವಿಶೇಷ ಒತ್ತು ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ಶಾಸಕಾಂಗ ಸಭೆ ಆರಂಭವಾಗಿದ್ದು, ಸಿದ್ದರಾಮಯ್ಯ ಸೇರಿದಂತೆ ಬಹುತೇಕ ಎಲ್ಲ ನಾಯಕರನ್ನು ತಪಾಸಣೆಗೊಳಪಡಿಸಿ ಬಿಡಲಾಯಿತು.
ಹಲವು ಮಹತ್ವದ ವಿಚಾರಗಳ ಚರ್ಚೆ ನಡೆಯುವ ಶಾಸಕಾಂಗ ಸಭೆಯಲ್ಲಿ ಯಾವ ರೀತಿಯ ಸಮಸ್ಯೆ ಉದ್ಭವಿಸಿದೆ ಎಂಬ ದೃಷ್ಟಿಯಿಂದ ತಪಾಸಣೆ ಹಮ್ಮಿಕೊಳ್ಳಲಾಗಿದ್ದು, ಶಾಸಕರು ಹಾಗೂ ಅವರ ಆಪ್ತ ಸಹಾಯಕರು ಸೇರಿದಂತೆ ಕಾಂಗ್ರೆಸ್ ಭವನದಲ್ಲಿ ಸದ್ಯ 200ಕ್ಕೂ ಹೆಚ್ಚು ಮಂದಿ ಪಾಲ್ಗೊಂಡಿದ್ದರು. ಇನ್ನು ಇಲ್ಲಿ ವಿಶೇಷ ಗಮನಹರಿಸಿ ಸುರಕ್ಷತೆಗೆ ಆದ್ಯತೆ ನೀಡಿದ್ದು ಗಮನ ಸೆಳೆಯಿತು.