ಕರ್ನಾಟಕ

karnataka

ETV Bharat / state

ಹಿಂದುಳಿದ ತಾಲೂಕುಗಳ ಕಲ್ಯಾಣಕ್ಕಾಗಿ ವಿಶೇಷ ಅಭಿವೃದ್ಧಿ ಯೋಜನೆ: ಬೊಮ್ಮಾಯಿ‌ ಸರ್ಕಾರದ ಪ್ರಗತಿ ಕಳಪೆ

ಹಿಂದುಳಿದ ತಾಲೂಕುಗಳಿಗೆ ವಿಶೇಷ ಅಭಿವೃದ್ಧಿ ಯೋಜನೆಯಡಿ ಅನುದಾನ ನೀಡಲಾಗುತ್ತದೆ. ಆದ್ರೆ ಈ ಅನುದಾನದ ಬಳಕೆ ಮತ್ತು ಅಭಿವೃದ್ಧಿ ಮಾತ್ರ ಶೂನ್ಯವಾಗಿದೆ. ಅದರಲ್ಲೂ ಬೊಮ್ಮಾಯಿ ಸರ್ಕಾರದ ಪ್ರಗತಿಯಂತೂ ತುಂಬಾ ಕಳಪೆಯಾಗಿದೆ.

Bommayi
ಬೊಮ್ಮಾಯಿ‌

By

Published : Aug 18, 2022, 3:33 PM IST

ಬೆಂಗಳೂರು:ಅತ್ಯಂತ ಹಿಂದುಳಿದ ತಾಲೂಕುಗಳ ಸಮಗ್ರ ಅಭಿವೃದ್ಧಿಗಾಗಿ ವಿಶೇಷ ಅಭಿವೃದ್ಧಿ ಯೋಜನೆಯಡಿ‌ ಅನುದಾನ ನೀಡಲಾಗುತ್ತದೆ. ಆದರೆ ಅವುಗಳ ಬಳಕೆ, ಅಭಿವೃದ್ಧಿ ‌ಮಾತ್ರ ಮರೀಚಿಕೆಯಾಗೆ ಉಳಿದಿದೆ. 2022-23ನೇ ಸಾಲಿನ ಮೊದಲ ನಾಲ್ಕು ತಿಂಗಳಲ್ಲಿ ವಿಶೇಷ ಅಭಿವೃದ್ಧಿ ಯೋಜನೆಯ ಅನುಷ್ಠಾನ ಪ್ರಗತಿಯ ಕಳಪೆ ಸಾಧನೆ ವಾಸ್ತವತೆಗೆ ಹಿಡಿದ ಕೈಗನ್ನಡಿಯಾಗಿದೆ.

ಡಾ. ನಂಜುಂಡಪ್ಪ ವರದಿಯಂತೆ ಹಿಂದುಳಿದ ತಾಲೂಕುಗಳಿಗೆ ವಿಶೇಷ ಅಭಿವೃದ್ಧಿ ಯೋಜನೆಯಡಿ ಅನುದಾನ ನೀಡಲಾಗುತ್ತದೆ. 12 ವರ್ಷಗಳಿಂದ ಅನುದಾನ ನೀಡಲಾಗುತ್ತಿದೆ. ಆದರೆ, ರಾಜ್ಯ ಸರ್ಕಾರ ವಿಶೇಷ ಅಭಿವೃದ್ಧಿ ಯೋಜನೆಯಡಿ ಅನುದಾನ ಕೊಟ್ಟರೂ ಅದರ ಬಳಕೆ, ವೆಚ್ಚ ಇಲ್ಲದೇ ಅಭಿವೃದ್ಧಿ ಮಾತ್ರ ಶೂನ್ಯವಾಗಿದೆ.

SDPಯಡಿ ಇಲಾಖಾವಾರು ಪ್ರಗತಿ

ಅಭಿವೃದ್ಧಿ ಕುಂಠಿತ: ರಾಯಚೂರು ಜನರು ತೆಲಂಗಾಣ ರಾಜ್ಯಕ್ಕೆ ವಿಲೀನವಾಗಲು ಒತ್ತಾಯಿಸುತ್ತಿದ್ದಾರೆ ಎಂಬ ತೆಲಂಗಾಣ ಸಿಎಂ ಚಂದ್ರಶೇಖರ್ ರಾವ್ ಹೇಳಿಕೆ ಇದೀಗ ರಾಜ್ಯದ ನಾಯಕರ ಕೆಂಗಣ್ಣಿಗೆ ಗುರಿಯಾಗಿದೆ. ಆದರೆ, ಡಾ.ನಂಜುಂಡಪ್ಪ ವರದಿಯಂತೆ ರಾಯಚೂರು ಸೇರಿ ಹಿಂದುಳಿದ ತಾಲೂಕುಗಳ ಅಭಿವೃದ್ಧಿಗೆ ವಿಶೇಷ ಅಭಿವೃದ್ಧಿ ಯೋಜನೆಯಡಿ ಅನುದಾನ ನೀಡುತ್ತಿದ್ದರೂ ಅಭಿವೃದ್ಧಿ ಮಾತ್ರ ಕಣ್ಣಿಗೆ ಕಾಣುತ್ತಿಲ್ಲ. ಅಭಿವೃದ್ಧಿ ಕುಂಠಿತವಾಗಿರುವ ಕಾರಣಕ್ಕೆ ತೆಲಂಗಾಣ ಸಿಎಂ ಕೆಸಿಆರ್ ಇಂಥ ಹೇಳಿಕೆಗಳನ್ನು ಕೊಡುವ ಧೈರ್ಯ ಮಾಡುತ್ತಿದ್ದಾರೆ ಎನ್ನಬಹುದು.

ವಿಷೇಶ ಅಭಿವೃದ್ಧಿ ಯೋಜನೆಯ ಕಳಪೆ ಪ್ರಗತಿ: 2022-23ನೇ ಸಾಲಿನಲ್ಲಿ ವಿಶೇಷ ಅಭಿವೃದ್ಧಿ ಯೋಜನೆಗೆ (SDP) ಬೊಮ್ಮಾಯಿ ಸರ್ಕಾರ 3,289.63 ಕೋಟಿ ರೂ. ಅನುದಾನ ಹಂಚಿಕೆ ಮಾಡಿದೆ. ಹಿಂದುಳಿದ ಜಿಲ್ಲೆಗಳ ಅಭಿವೃದ್ಧಿ ನಮ್ಮ ಮೊದಲ ಆದ್ಯತೆ ಎಂಬ ಘೋಷಣೆಗಳನ್ನು ಮಾಡುತ್ತಲೇ ಇದೆ. ಆದರೆ, ವಾಸ್ತವದಲ್ಲಿ ವಿಶೇಷ ಅಭಿವೃದ್ಧಿ ಯೋಜನೆಯ ಅನುಷ್ಠಾನದ ಪ್ರಗತಿ ‌ನೋಡಿದರೆ, ಕಾಳಜಿ ಕೇವಲ ಭಾಷಣಕ್ಕೇ ಸೀಮಿತ ಎಂಬುದು ಸ್ಪಷ್ಟವಾಗುತ್ತದೆ.

ಹಿಂದುಳಿದ ತಾಲೂಕುಗಳ ಅಭಿವೃದ್ಧಿಗಾಗಿ ವಿಶೇಷ ಅಭಿವೃದ್ಧಿ ಯೋಜನೆಯಡಿ ಬೊಮ್ಮಾಯಿ ಸರ್ಕಾರ ಮೊದಲ ನಾಲ್ಕು ತಿಂಗಳಲ್ಲಿ ಕಳಪೆ ಪ್ರದರ್ಶನ ತೋರಿದೆ. 13 ಇಲಾಖೆಗಳಿಗೆ ವಿಷೇಶ ಅಭಿವೃದ್ಧಿ ಯೋಜನೆಯಡಿ 2022-23ನೇ ಸಾಲಿನ ಜುಲೈವರೆಗೆ ಬಿಡುಗಡೆಯಾದ ಅನುದಾನ ಕೇವಲ 217.88 ಕೋಟಿ ಮಾತ್ರ. ಒಟ್ಟು 3, 289.63 ಕೋಟಿ ಅನುದಾನ ಹಂಚಿಕೆಯಲ್ಲಿ ಮೊದಲ ನಾಲ್ಕು ತಿಂಗಳಲ್ಲಿ ಕೇವಲ 217.88 ಕೋಟಿ ರೂ. ಮಾತ್ರ ಬಿಡುಗಡೆಯಾಗಿದೆ.

ಇದನ್ನೂ ಓದಿ:ತಿಂಗಳಲ್ಲಿ 15 ದಿನ ಪ್ರವಾಸ ಮಾಡಿ: ಬಿಜೆಪಿ ಪದಾಧಿಕಾರಿಗಳಿಗೆ ಅರುಣ್ ಸಿಂಗ್ ಸೂಚನೆ

ಒಟ್ಟು 230.04 ಕೋಟಿ ರೂ. ಖರ್ಚು ಮಾಡಲಾಗಿದೆ. ಅಂದರೆ ವಿಶೇಷ ಅಭಿವೃದ್ಧಿ ಯೋಜನೆಯಡಿ ಈವರೆಗೆ ಮಾಡಿರುವ ವೆಚ್ಚ ಕೇವಲ 7% ಎಂದು ಸಾಂಖ್ಯಿಕ ಇಲಾಖೆ ಅಂಕಿಅಂಶ ನೀಡಿದೆ. ಒಟ್ಟು ಇಲಾಖೆಗಳಿಗೆ ವಿಶೇಷ ಅಭಿವೃದ್ಧಿ ಯೋಜನೆಯಡಿ ಈವರೆಗೆ ಅನುದಾನವೆ ಬಿಡುಗಡೆಯಾಗಿಲ್ಲ. ಜೊತೆಗೆ ಈ ಇಲಾಖೆಗಳು ಯಾವುದೇ ವೆಚ್ಚವನ್ನೂ ಮಾಡಿಲ್ಲ. ಹೀಗಾಗಿ ಈ ಏಳು ಪ್ರಮುಖ ಇಲಾಖೆಗಳ ಪ್ರಗತಿ ಶೂನ್ಯವಾಗಿದೆ.

SDPಯಡಿ ಇಲಾಖಾವಾರು ಪ್ರಗತಿ:

ವಸತಿ ಇಲಾಖೆ:
ಒಟ್ಟು ಹಂಚಿಕೆ- 300 ಕೋಟಿ
ಬಿಡುಗಡೆ- 37.50 ಕೋಟಿ
ವೆಚ್ಚ- 74.44 ಕೋಟಿ
ಪ್ರಗತಿ- 24.81%

ಕೃಷಿ ಇಲಾಖೆ:
ಒಟ್ಟು ಹಂಚಿಕೆ- 45 ಕೋಟಿ
ಬಿಡುಗಡೆ- 20 ಕೋಟಿ
ವೆಚ್ಚ- 15.46 ಕೋಟಿ
ಪ್ರಗತಿ- 34.36%

ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ:
ಒಟ್ಟು ಹಂಚಿಕೆ- 60 ಕೋಟಿ
ಬಿಡುಗಡೆ- 12.17 ಕೋಟಿ
ವೆಚ್ಚ- 11.57 ಕೋಟಿ
ಪ್ರಗತಿ- 19.28%

ಸಮಾಜ ಕಲ್ಯಾಣ ಇಲಾಖೆ:
ಒಟ್ಟು ಹಂಚಿಕೆ- 85 ಕೋಟಿ
ಬಿಡುಗಡೆ- 12.50 ಕೋಟಿ
ವೆಚ್ಚ- 0
ಪ್ರಗತಿ- 0%

ಶಿಕ್ಷಣ ಇಲಾಖೆ:
ಒಟ್ಟು ಹಂಚಿಕೆ- 456.26 ಕೋಟಿ
ಬಿಡುಗಡೆ- 24.58 ಕೋಟಿ
ವೆಚ್ಚ- 14 ಲಕ್ಷ
ಪ್ರಗತಿ- 0.03%

ಆರೋಗ್ಯ ಇಲಾಖೆ:
ಒಟ್ಟು ಹಂಚಿಕೆ- 483.20 ಕೋಟಿ
ಬಿಡುಗಡೆ- 97.17 ಕೋಟಿ
ವೆಚ್ಚ- 126.29 ಕೋಟಿ
ಪ್ರಗತಿ- 26.14%

ಕೌಶಲ್ಯಾಭಿವೃದ್ಧಿ ಇಲಾಖೆ:
ಒಟ್ಟು ಹಂಚಿಕೆ- 30 ಕೋಟಿ
ಬಿಡುಗಡೆ- 0%
ವೆಚ್ಚ- 0
ಪ್ರಗತಿ- 0%

ಯೋಜನಾ ಇಲಾಖೆ:
ಒಟ್ಟು ಹಂಚಿಕೆ- 1,000 ಕೋಟಿ
ಬಿಡುಗಡೆ- 0
ವೆಚ್ಚ- 0
ಪ್ರಗತಿ- 0%

ಲೋಕೋಪಯೋಗಿ ಇಲಾಖೆ:
ಒಟ್ಟು ಹಂಚಿಕೆ- 70 ಕೋಟಿ
ಬಿಡುಗಡೆ- 0
ವೆಚ್ಚ- 0
ಪ್ರಗತಿ- 0%

ಉನ್ನತ ಶಿಕ್ಷಣ ಇಲಾಖೆ:
ಒಟ್ಟು ಹಂಚಿಕೆ- 50 ಕೋಟಿ
ಬಿಡುಗಡೆ- 0
ವೆಚ್ಚ- 0
ಪ್ರಗತಿ- 0%

ಮಹಿಳಾ ಮತ್ತ ಮಕ್ಕಳ ಕಲ್ಯಾಣ ಇಲಾಖೆ:
ಒಟ್ಟು ಹಂಚಿಕೆ- 107.50 ಕೋಟಿ
ಬಿಡುಗಡೆ- 0
ವೆಚ್ಚ- 0
ಪ್ರಗತಿ- 0%

ಗ್ರಾಮೀಣಾಭಿವೃದ್ಧಿ ಇಲಾಖೆ:
ಒಟ್ಟು ಹಂಚಿಕೆ- 527.67 ಕೋಟಿ
ಬಿಡುಗಡೆ- 11.46 ಕೋಟಿ
ವೆಚ್ಚ- 2.14 ಕೋಟಿ
ಪ್ರಗತಿ- 0.41%

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ:
ಒಟ್ಟು ಹಂಚಿಕೆ- 75 ಕೋಟಿ
ಬಿಡುಗಡೆ- 2.50 ಕೋಟಿ
ವೆಚ್ಚ- 0
ಪ್ರಗತಿ- 0%

ABOUT THE AUTHOR

...view details