ಬೆಂಗಳೂರು: ಇಂಡಿಯನ್ ಮನಿ ಡಾಟ್ ಕಾಂನ ಫೈನಾನ್ಸಿಯಲ್ ಫ್ರೀಡಂ ಆ್ಯಪ್ನಲ್ಲಿ ರೈತರ ಆದಾಯ ಹೆಚ್ಚಳಕ್ಕೆ ಪೂರಕವಾಗಿ ವಿನ್ಯಾಸಗೊಳಿಸಿರುವ ವಿಶೇಷ ಕೋರ್ಸ್ಅನ್ನು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಲೋಕಾರ್ಪಣೆ ಮಾಡಿದರು.
ಶಾಂತಿನಗರದಲ್ಲಿರುವ ಇಂಡಿಯನ್ ಮನಿ ಡಾಟ್ ಕಾಂನ ಕೇಂದ್ರ ಕಚೇರಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕೋರ್ಸ್ ಲೋಕಾರ್ಪಣೆ ಮಾಡಿ ಮಾತನಾಡಿದ ಅವರು, ರೈತರ ಆದಾಯ ಹೆಚ್ಚಳದ ದೃಷ್ಟಿಯಿಂದ ವಿನ್ಯಾಸಗೊಳಿಸಲಾಗಿರುವ “ಸಮಗ್ರ ಕೃಷಿಯಲ್ಲಿ 365 ದಿನಗಳೂ ಆದಾಯ ಗಳಿಸುವುದು ಹೇಗೆ” ಎನ್ನುವ ಕೋರ್ಸ್ ಅರ್ಥಪೂರ್ಣವಾಗಿದೆ. ರೈತರ ಉನ್ನತಿಯಾದರೆ ಮಾತ್ರ ದೇಶದ ಪ್ರಗತಿ ಸಾಧ್ಯ. ಈ ನಿಟ್ಟಿನಲ್ಲಿ ರೈತರಿಗೆ ಬಲ ತುಂಬಲು ಮುಂದಾಗಿರುವ ಇಂಡಿಯನ್ ಮನಿ ಡಾಟ್ ಕಾಂನ ಪ್ರಯತ್ನ ಶ್ಲಾಘನೀಯ ಎಂದು ಹೇಳಿದರು.