ಕರ್ನಾಟಕ

karnataka

ETV Bharat / state

ರಾಜ್ಯದೆಲ್ಲೆಡೆ ಸಕ್ಷಮ ಪ್ರಾಧಿಕಾರದಿಂದ ಐಎಂಎಗೆ ಸೇರಿದ ಆಸ್ತಿ ಜಪ್ತಿ‌

ವಿಶೇಷ ಸಕ್ಷಮ ಪ್ರಾಧಿಕಾರದಿಂದ ವಿವಿಧ ಜಿಲ್ಲೆಗಳಲ್ಲಿ‌ ಮನ್ಸೂರ್​​ಗೆ ಸೇರಿದ ಕಟ್ಟಡ, ಜಮೀನುಗಳನ್ನು ಜಪ್ತಿ ಮಾಡಿಕೊಳ್ಳಲಾಗಿದೆ. ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳ‌ ನೇತೃತ್ವದಲ್ಲಿ ಆಸ್ತಿ ವಶಕ್ಕೆ ಪಡೆಯಲಾಗಿದೆ.‌‌

ಸಕ್ಷಮ ಪ್ರಾಧಿಕಾರ

By

Published : Jul 29, 2019, 11:31 PM IST

ಬೆಂಗಳೂರು: ಐಎಂಎ ವಂಚನೆ ಪ್ರಕರಣದ ಆರೋಪಿ ಮೊಹಮ್ಮದ್ ಮನ್ಸೂರ್ ಖಾನ್ ಆಸ್ತಿ‌‌‌ ಮುಟ್ಟುಗೋಲು ಹಾಕಿಕೊಳ್ಳುವ ನಿಟ್ಟಿನಲ್ಲಿ ವಿಶೇಷ ಸಕ್ಷಮ ಪ್ರಾಧಿಕಾರವು ರಾಜ್ಯದೆಲ್ಲೆಡೆ ಐಎಂಎಗೆ ಸೇರಿದ ಆಸ್ತಿ ಜಪ್ತಿ‌ ಮಾಡಿಕೊಂಡಿದೆ.

ಕೋಲಾರ, ದಾವಣಗೆರೆ ಹಾಗೂ ಹಾಸನ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ‌ ಮನ್ಸೂರ್​​ಗೆ ಸೇರಿದ ಕಟ್ಟಡ, ಜಮೀನುಗಳನ್ನು ಜಪ್ತಿ ಮಾಡಿಕೊಳ್ಳಲಾಗಿದೆ. ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳ‌ ನೇತೃತ್ವದಲ್ಲಿ ಆಸ್ತಿ ವಶಕ್ಕೆ ಪಡೆದುಕೊಳ್ಳಲಾಗಿದೆ.‌‌

ಜಮೀನುಗಳ ಮೌಲ್ಯ ಏನು ಎಂಬುದರ ಬಗ್ಗೆ ಆಯಾ ಜಿಲ್ಲಾಡಳಿತ ವರದಿ ನೀಡಬೇಕಿದೆ. ಇನ್ನು ಹಾಸನ ಜಿಲ್ಲೆಯ ತಣ್ಣೀರುಬಾವಿಯಲ್ಲಿ ನಿವೇಶನ ಜಪ್ತಿ‌ ಮಾಡಿ ಜಿಲ್ಲಾಡಳಿತ ಸಕ್ಷಮ ಪ್ರಾಧಿಕಾರಕ್ಕೆ ವರದಿ‌ ನೀಡಿದೆ.

ABOUT THE AUTHOR

...view details