ಕರ್ನಾಟಕ

karnataka

ETV Bharat / state

ಗರ್ಭಿಣಿಯರು ಈ ವಿಶಿಷ್ಟ ಬಟ್ಟೆ ಧರಿಸಿದ್ರೆ ಶಿಶುಗಳಿಗಿಲ್ಲ ವಿಕಿರಣ ಭಯ - ಸ್ಟೈನ್ ಲೆಸ್ ಸ್ಟೀಲ್ ಬಟ್ಟೆ

ಗರ್ಭಿಣಿಯರು ಹಾಗೂ ಹೊಟ್ಟೆಯಲ್ಲಿ ಬೆಳೆಯುತ್ತಿರುವ ಶಿಶುಗಳನ್ನು ಮೊಬೈಲ್ ಹಾಗೂ ಇನ್ನಿತರ ವಿಕಿರಣಗಳಿಂದ ತಡೆಯಲು ಬೆಂಗಳೂರು ಮೂಲದ ಸ್ಟಾರ್ಟ್ ಅಪ್ ಕಂಪನಿಯೊಂದು ವಿಶೇಷ ಬಟ್ಟೆಯನ್ನು ತಯಾರಿಸಿದೆ.

Special cloths to protect pregnants from harmful radiations
ಶಿಶುವನ್ನು ವಿಕಿರಣಗಳಿಂದ ತಡೆಯಲು ಗರ್ಭಿಣಿಯರಿಗೆ ವಿಶಿಷ್ಟ ಬಟ್ಟೆ

By

Published : Jan 1, 2020, 12:01 PM IST

ಬೆಂಗಳೂರು:ಗರ್ಭಿಣಿಯರು ತಮ್ಮ ಹೊಟ್ಟೆಯಲ್ಲಿ ಬೆಳೆಯುತ್ತಿರುವ ಶಿಶುಗಳನ್ನು ಮೊಬೈಲ್ ಹಾಗೂ ಇನ್ನಿತರ ವಿಕಿರಣಗಳಿಂದ ತಡೆಯಲು ಬೆಂಗಳೂರು ಮೂಲದ ಸ್ಟಾರ್ಟ್ ಅಪ್ ಕಂಪನಿಯೊಂದು ವಿಶೇಷ ಬಟ್ಟೆಯನ್ನು ಮಾರುಕಟ್ಟೆಗೆ ತಂದಿದೆ.

ಶಿಶುವನ್ನು ವಿಕಿರಣಗಳಿಂದ ತಡೆಯಲು ಗರ್ಭಿಣಿಯರಿಗೆ ವಿಶಿಷ್ಟ ಬಟ್ಟೆ

ಬೆಳೆಯುತ್ತಿರುವ ತಂತ್ರಜ್ಞಾನದಿಂದ ಮೊಬೈಲ್ ಟವರ್ ಹಾಗೂ ಇನ್ನಿತರ ವಿಕಿರಣಗಳು ಹೊಟ್ಟೆಯಲ್ಲಿ ಬೆಳೆಯುತ್ತಿರುವ ಶಿಶುಗಳ ಆರೋಗ್ಯದ ಮೇಲೆ ಪ್ರಭಾವ ಬೀರಬಹುದು. ದೇಶದಲ್ಲಿ ಪ್ರಸ್ತುತ ಗರ್ಭಪಾತ ಶೇ. 3.2%ಕ್ಕೆ ಏರಿದೆ. ನವಜಾತ ಶಿಶುಗಳಲ್ಲಿ ಎಡಿ, ಹೆಚ್​ಡಿ ಕಾಯಿಲೆಗಳು ಸಾಮಾನ್ಯವಾಗುತ್ತಿವೆ. ಇವುಗಳಿಂದ ಮಕ್ಕಳನ್ನು ರಕ್ಷಿಸುವ ಸಲುವಾಗಿ ಗರ್ಭಿಣಿಯರಿಗೆ ವಿಶೇಷ ಬಟ್ಟೆ ತಯಾರಿಸಲಾಗಿದೆ ಎಂದು ಡಿಜಿಟಲ್ ಫ್ಯಾಷನ್ ಫ್ಯಾಕ್ಟ್ರಿಯ ತಂತ್ರಜ್ಞಾನದ ಮುಖ್ಯಸ್ಥ ವಿನಯ್ ಜಗತಾಪ್ ತಿಳಿಸಿದರು.

ಬಟ್ಟೆಯ ವಿಶಿಷ್ಟತೆ:

ಶೇಕಡಾ 5ರಷ್ಟು ಸ್ಟೈನ್​ಲೆಸ್ ಸ್ಟೀಲ್ ಬಳಸಿ ಈ ರೀತಿಯ ಬಟ್ಟೆ ತಯಾರಿಸಲಾಗಿದೆ. ಇದು ಅಪಾಯಕಾರಿ ವಿಕಿರಣಗಳನ್ನು ತಡೆಯುತ್ತದೆ. ಈ ಬಟ್ಟೆಯನ್ನು ಸಾಧಾರಣ ಬಟ್ಟೆಗಳಂತೆಯೇ ತೊಳೆಯಬಹದು. ಇದಕ್ಕಾಗೇ ಬೇರೆ ಉಪಕರಣ ಬೇಡ ಎಂದರು.

ವೈದ್ಯಕೀಯ ಮಾನ್ಯತೆ:

ಈ ವಿಶೇಷ ಬಟ್ಟೆಗಳನ್ನು ಭಾರತೀಯ ಸಾಸ್ ಮೀರ್​ ಹಾಗೂ ತೈವಾನ್ ಬಟ್ಟೆ ಸಂಶೋಧನಾ ಸಂಘ ಪರಿಶೀಲನೆ ನಡೆಸಿ ಮಾನ್ಯತೆ ನೀಡಿದೆ. ಸದ್ಯ ಈ ಬಟ್ಟೆಗಳಿಗೆ ಬೆಲೆ ನಿಗದಿಪಡಿಸಿಲ್ಲ. ನಿಗದಿಪಡಿಸಿದ ನಂತರ ಆನ್ ಲೈನ್ ಹಾಗೂ ಮಳಿಗೆಗಳಲ್ಲೂ ದೊರಯಲಿವೆ ಎಂದು ಜಗತಾಪ್​ ಹೇಳಿದ್ರು.

ABOUT THE AUTHOR

...view details