ಬೆಂಗಳೂರು: ಓಣಂ ಹಬ್ಬದ ಪ್ರಯುಕ್ತ ಕೇರಳ ಪ್ರಯಾಣಿಕರ ಅನುಕೂಲಕ್ಕಾಗಿ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ವಿಶೇಷ ಬಸ್ಗಳ ನಿಯೋಜನೆಯನ್ನು ಮಾಡಿದೆ. ಆಗಸ್ಟ್ 24 ರಿಂದ ಸೆಪ್ಟೆಂಬರ್ 06ರ ವರೆಗೆ ಬೆಂಗಳೂರಿನಿಂದ ಮತ್ತು ಮೈಸೂರಿನಿಂದ ಕೇರಳ ರಾಜ್ಯದ ವಿವಿಧ ಸ್ಥಳಗಳಿಗೆ ಕಾರ್ಯಾಚರಣೆ ಮಾಡಲಾಗುತ್ತೆ.
ಬೆಂಗಳೂರಿನಿಂದ ಕಣ್ಣೂರು, ಎರ್ನಾಕುಲಂ, ಕಾಞಂಗಾಡ್, ಕಾಸರಗೋಡು, ಕೊಟ್ಟಾಯಂ, ಕಲ್ಲಿಕೋಟೆ, ಪಾಲಘಾಟ್, ತ್ರಿಶೂರು, ತಿರುವನಂತಪುರಂ ಮತ್ತು ವಡಗೇರಾ ಬಸ್ ಲಭ್ಯವಿರಲಿದೆ. ಹಾಗೂ ಮೈಸೂರಿನಿಂದ ತಿರುವನಂತಪುರಂ, ಎರ್ನಾಕುಲಂ ಮತ್ತು ಕೊಟ್ಟಾಯಂವರೆಗೆ ಬಸ್ ಸಂಚಾರಿಸಲಿದೆ.
ಕೇರಳ ರಾಜ್ಯ ಸರ್ಕಾರದ ಆದೇಶದನ್ವಯ ಎಲ್ಲಾ ಪ್ರಯಾಣಿಕರು ಇತರೆ ರಾಜ್ಯದಿಂದ ಕೇರಳ ರಾಜ್ಯದೊಳಗೆ ಆಗಮಿಸಲು, ಕೇರಳ ಸರ್ಕಾರದ ಸೇವಾಸಿಂಧು ಪೋರ್ಟಲ್‌ನಲ್ಲಿ https://covid19jagratha.kerala.nic.in ನಲ್ಲಿ ಕಡ್ಡಾಯವಾಗಿ ನೋಂದಾಯಿಸಿಕೊಳ್ಳಬೇಕು.