ಕರ್ನಾಟಕ

karnataka

ETV Bharat / state

ವಿಶ್ವಾಸಮತ ಯಾಚನೆ ಪ್ರಕ್ರಿಯೆ ಆರಂಭಿಸಲು ಸಿಎಂಗೆ ಸ್ಪೀಕರ್​ ಸೂಚನೆ: ಕಲಾಪ ಗುರುವಾರಕ್ಕೆ ಮುಂದೂಡಿಕೆ - ಮಾಜಿ ಸಿಎಂ ಸಿದ್ದರಾಮಯ್ಯ

ಪ್ರತಿಪಕ್ಷ ಬಿಜೆಪಿ ಇಂದು ಬೆಳಗ್ಗೆ ಸ್ಪೀಕರ್​ ರಮೇಶ್​ ಕುಮಾರ್​ ಅವರನ್ನ ಭೇಟಿ ಮಾಡಿ ಅವಿಶ್ವಾಸ ಮತಯಾಚನೆಗೆ ಅವಕಾಶ ಕೋರಿತ್ತು. ಈ ಹಿನ್ನೆಲೆಯಲ್ಲಿ ಕಲಾಪ ಸಲಹಾ ಸಮಿತಿ ಕರೆದ ಸ್ಪೀಕರ್​ ಗುರುವಾರ ಬೆಳಗ್ಗೆ 11 ಗಂಟೆಗೆ ವಿಶ್ವಾಸಮತ ಯಾಚನೆ ಮಾಡುವ ನಿರ್ಧಾರ ಕೈಗೊಂಡಿದ್ದಾರೆ. ಈ ಸಂಬಂಧ ಸಿಎಂಗೆ ಸೂಚನೆಯನ್ನೂ ನೀಡಿದ್ದಾರೆ. ಈ ಮಧ್ಯೆ ಕಲಾಪವನ್ನ ಗುರುವಾರಕ್ಕೆ ಮುಂದೂಡಲಾಗಿದೆ.

ಸ್ಪೀಕರ್

By

Published : Jul 15, 2019, 2:38 PM IST

Updated : Jul 15, 2019, 3:09 PM IST

ಬೆಂಗಳೂರು: ಗುರುವಾರ ವಿಶ್ವಾಸಮತ ಯಾಚಿಸುವಂತೆ ಸ್ಪೀಕರ್​​ ರಮೇಶ್ ಕುಮಾರ್ ಮೈತ್ರಿ ಸರ್ಕಾರಕ್ಕೆ ಸೂಚಿಸಿದ್ದಾರೆ. ವಿಧಾನಸೌಧದಲ್ಲಿ ಕಲಾಪ ಸಲಹಾ ಸಮಿತಿ ಸಭೆಯಲ್ಲಿ ಈ ಸೂಚನೆ ನೀಡಿದ್ದು ಗುರುವಾರ ಬೆಳಗ್ಗೆ 11 ಕ್ಕೆ ಪ್ರಕ್ರಿಯೆ ಆರಂಭಿಸುವಂತೆ ತಿಳಿಸಿದ್ದಾರೆ.

ಇದೇ ವೇಳೆ ಬಿಜೆಪಿ ಬೇಡಿಕೆಗೆ ಮಣಿದಿರುವ ರಮೇಶ್ ಕುಮಾರ್​ ಕಲಾಪವನ್ನ ಗುರುವಾರಕ್ಕೆ ಮುಂದೂಡಿದ್ದಾರೆ.

ಚರ್ಚೆ ಆರಂಭವಾಗಿದ್ದು ಅಂದೇ ಮತಕ್ಕೆ ಹೋಗುವಂತೆ ತಿಳಿಸಿಲ್ಲ. ನಾಳೆ ಸುಪ್ರೀಂಕೋರ್ಟ್ ತೀರ್ಪು ಬರುವ ಹಿನ್ನೆಲೆ ಅದರ ತೀರ್ಪು ಗಮನಿಸೋಣ, ಕಲಾಪ ನಡೆಸಲು ಅವಕಾಶ ಮಾಡಿಕೊಡಿ ಎಂದು ಪ್ರತಿಪಕ್ಷ ಬಿಜೆಪಿಗೆ ಸಲಹೆ ನೀಡಿದ್ದರು. ಬಳಿಕ ಪರಿಶೀಲಿಸಿ ಕಲಾಪ ಗುರುವಾರಕ್ಕೆ ಮುಂದೂಡುವ ನಿರ್ಧಾರವನ್ನೂ ಕೈಗೊಂಡಿದ್ದಾರೆ.

ಅವಿಶ್ವಾಸ ನಿರ್ಣಯದ ವಿಚಾರವಾಗಿ ಸುದೀರ್ಘ ಚರ್ಚೆ ನಡೆದಿದೆ. ಸಿಎಂ ನೇತೃತ್ವದ ಕಾಂಗ್ರೆಸ್ - ಜೆಡಿಎಸ್ ಪಕ್ಷಗಳು ವಿಶ್ವಾಸ ಹಾಗೂ‌ ಪ್ರತಿಪಕ್ಷಗಳು ಅವಿಶ್ವಾಸ ನಿರ್ಣಯ ಸಂಬಂಧ ಪ್ರಸ್ತಾಪಿಸಿದ್ದು, ಮಂಗಳವಾರದ ಸುಪ್ರೀಂಕೋರ್ಟ್ ತೀರ್ಪಿನ ನಂತರ ನಿರ್ಧಾರ ಕೈಗೊಳ್ಳೋಣ ಎಂದು ಸ್ಪೀಕರ್ ರಮೇಶ್ ಕುಮಾರ್ ತಿಳಿಸಿದರು.

ಕಲಾಪ ಗುರುವಾರಕ್ಕೆ ಮುಂದೂಡಿಕೆ

ಶಾಸಕರ ರಾಜೀನಾಮೆಯಿಂದ ಸರ್ಕಾರ ಸಂಖ್ಯಾಬಲ ಕಳೆದುಕೊಂಡಿದೆ. ಅವಿಶ್ವಾಸ ನಿರ್ಣಯ ಮಂಡಿಸಲು ಇಂದೇ ಅವಕಾಶ ನೀಡಿ ಎಂದು ಪ್ರತಿಪಕ್ಷ ಬಿಜೆಪಿ ನಾಯಕ ಬಿ. ಎಸ್. ಯಡಿಯೂರಪ್ಪ ಆಗ್ರಹಿಸಿದ್ದಾರೆ. ಆದರೆ, ತಮಗೆ ವಿಶ್ವಾಸ ಮತ ಮಂಡಿಸಲು ಕಾಲಾವಕಾಶ ನೀಡಿ ಎಂದು ಸಿಎಂ ಮನವಿ ಮಾಡಿದರು. ಇಬ್ಬರ ಮನವಿ ಆಲಿಸಿದ ಸ್ಪೀಕರ್ ಸುಪ್ರೀಂ ತೀರ್ಪು ಬಂದ ನಂತರ ನೋಡೋಣ, ಅಲ್ಲಿಯವರೆಗೂ ಕಲಾಪ ಮುಂದುವರಿಯಲು ಅವಕಾಶಮಾಡಿಕೊಡಿ ಎಂದು ಸಲಹೆ ನೀಡಿದರು. ಆದರೆ, ಒತ್ತಡ ಹೆಚ್ಚಾದ ಹಿನ್ನೆಲೆ ಈ ನಿರ್ಣಯ ಕೈಗೊಳ್ಳಲಾಗಿದೆ.

ಸಿದ್ದರಾಮಯ್ಯ ಹೇಳಿಕೆ :

ಬಿಜೆಪಿಯವರು ಅವಿಶ್ವಾಸ ನಿರ್ಣಯಕ್ಕೆ ಅವಕಾಶ ಕೋರಿದ್ದರು. ಇಂದೇ ಆಗಬೇಕು ಎಂದು ಪಟ್ಟು ಹಿಡಿದಿದ್ದರು. ನಾಳೆ ಸುಪ್ರೀಂ ತೀರ್ಪಿದೆ ಎಂದು ಸ್ಪೀಕರ್ ಹೇಳಿದ್ರು. ಕೊನೆಗೆ ಗುರುವಾರ ಅವರೂ ಒಪ್ಪಿಕೊಂಡಿದ್ದಾರೆ. ನಾವೂ ವಿಶ್ವಾಸಮತಯಾಚನೆಗೆ ಒಪ್ಪಿಗೆ ನೀಡಿದ್ದೇವೆ. ನಮ್ಮ ಮನವಿಗೆ ಬಿಜೆಪಿ ನಾಯಕರು ಒಪ್ಪಿದ್ದಾರೆ. ಅವರು ಪಟ್ಟು ಮುಂದುವರಿಸಿಲ್ಲ. ಗುರುವಾರ ಬೆಳಗ್ಗೆ 11 ಕ್ಕೆ ಬಹುಮತ ಸಾಬೀತು ಪಡಿಸುತ್ತೇವೆ. ವಿಶ್ವಾಸ ಇರೋದಕ್ಕೆ ನಾವು ಒಪ್ಪಿರೋದು. ಇಲ್ಲದೆ ಹೋಗಿದ್ರೆ ಯಾಕೆ ಕೇಳ್ತಿದ್ವಿ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದರು.

ಸಭೆಯಲ್ಲಿ ಯಾರಿದ್ದರು?

ಮಾಜಿ ಸಿಎಂ ಸಿದ್ದರಾಮಯ್ಯ, ಸಚಿವ ಡಿಕೆಶಿ, ಪ್ರತಿಪಕ್ಷ ನಾಯಕ ಯಡಿಯೂರಪ್ಪ, ಬಿಜೆಪಿ ಸಚೇತಕ ಸುನೀಲ್ ಕುಮಾರ್, ಡಿಸಿಎಂ ಪರಮೇಶ್ವರ್, ಮಾಜಿ ಸ್ಪೀಕರ್ ಕೆ.ಜಿ.ಬೋಪಯ್ಯ, ಕೆ.ಜೆ.ಜಾರ್ಜ್, ಕೃಷ್ಣಭೈರೇಗೌಡ, ಸುರೇಶ್ ಕುಮಾರ್, ಮಾಧುಸ್ವಾಮಿ ಸೇರಿ ಹಲವರು ಭಾಗಿಯಾಗಿದ್ದರು. ಕಳೆದ ಬಿಎಸಿ ಸಭೆಗೆ ಗೈರಾಗಿದ್ದ ಬಿಜೆಪಿ ನಾಯಕರು ಬಿಎಸಿ ಮೀಟಿಂಗ್ ಗೆ ಇಂದು ಆಗಮಿಸಿದ್ದರು.

Last Updated : Jul 15, 2019, 3:09 PM IST

ABOUT THE AUTHOR

...view details