ಬೆಂಗಳೂರು:ವಿಧಾನಸಭೆಯ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಧರಣಿ ನಿರತ ಕಾಂಗ್ರೆಸ್ನ ಡಿ.ಕೆ. ಶಿವಕುಮಾರ್ ಹಾಗೂ ಇತರರ ಜೊತೆ ತುಸು ಹೊತ್ತು ಮಾತುಕತೆ ನಡೆಸಿ, ಕುಶಲೋಪರಿ ವಿಚಾರಿಸಿದರು. ಈ ವೇಳೆ ಕಾಗೇರಿ ಮತ್ತು ಡಿ.ಕೆ. ಶಿವಕುಮಾರ್ ಅಕ್ಕಪಕ್ಕ ಕೂತು ಮಾತುಕತೆ ನಡೆಸಿದರು.
ನಿನ್ನೆಯೆ ಘಟನೆ ಬಗ್ಗೆ ಚರ್ಚೆ ನಡೆಸಿದ ಅವರು, ನೀವು ರಾಷ್ಟ್ರೀಯ ಪಕ್ಷದ ಅಧ್ಯಕ್ಷ ಇದ್ದೀರಿ, ಜವಾಬ್ದಾರಿಯುತ ಸ್ಥಾನದಲ್ಲಿ ಇದ್ದೀರಾ. ನಿನ್ನೆ ನೀವು ಅಷ್ಟು ಸಿಟ್ಟಾಗಿದ್ದು ಯಾವತ್ತೂ ನೋಡಿಲ್ಲ ಅಂದರು.
ಧರಣಿ ನಿರತ ಡಿಕೆಶಿ ಭೇಟಿಯಾದ ಸ್ಪೀಕರ್ ಕಾಗೇರಿ ಈ ವೇಳೆ, ಡಿಕೆಶಿ ಹಳೆ ಘಟನೆಯನ್ನು ಮೆಲಕು ಹಾಕಿದರು. ನನಗೆ ಈ ಹಿಂದೆ ನಮ್ಮಪ್ಪ ಯಾರು ಅಂತ ಪ್ರಶ್ನೆ ಮಾಡಿದ್ರು. ಆವತ್ತು ಪೊಲೀಸ್ ಕೇಸ್ ಕೂಡ ಆಗಿತ್ತು, ಅದು ದೊಡ್ಡ ಸುದ್ದಿಯಾಗಿತ್ತು ಎಂದು ಹಳೆಯ ಘಟನೆ ಸ್ಮರಿಸಿದರು.
ಇದನ್ನೂ ಓದಿ:ಹಿಜಾಬ್ ಪ್ರಕರಣ: ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸುವ ಬಗ್ಗೆ ಹೈಕೋರ್ಟ್ ಹೇಳಿದ್ದೇನು?
ಆಗ ನಾವು ಕೂಡ 25 ವರ್ಷ ವಿರೋಧ ಪಕ್ಷದಲ್ಲಿದ್ದೆವು ಎಂದು ಕಾಗೇರಿ ಹೇಳುತ್ತಾರೆ. ಸಿಎಂ ಕೂಡ ಬಂದಿದ್ರು, ಮತ್ತೆ ಬರುತ್ತೇವೆ ಅಂದಿದ್ದಾರೆ. ಅವರಿಗೆ ನಾವು ವ್ಯವಸ್ಥೆ ಮಾಡಬೇಕಾ?. ಇಲ್ಲಾ ನೀವು ವ್ಯವಸ್ಥೆ ಮಾಡುತೀರಾ ಅಂತ ಕೇಳಿದ್ರು. ಎಲ್ಲ ನಾವೇ ವ್ಯವಸ್ಥೆ ಮಾಡುತ್ತೇವೆ ಅಂತ ಹೇಳಿದ್ದೇನೆ ಎಂದು ಡಿಕೆಶಿಗೆ ಹೇಳಿದರು. ಆಗ ನಿಮ್ಮ ಖುಷಿ ಏನಿದೆ ಅದು ಮಾಡಿ ಅಂತ ಡಿಕೆಶಿ ಅನ್ನುತ್ತಾರೆ.
ಇದಕ್ಕೆ ನಮ್ಮ ಖುಷಿ ನಿಮ್ಮ ಖುಷಿ ಏನಿಲ್ಲ ಎಂದು ಕಾಗೇರಿ ಪ್ರತಿಕ್ರಿಯಿಸುತ್ತಾರೆ. ನಮ್ಮ ಇತಿಮಿತಿಯೊಳಗೆ ವ್ಯವಸ್ಥೆ ಮಾಡುತ್ತೇವೆ ಎನ್ನುತ್ತಾರೆ. ಏನು ಇಷ್ಟೊಂದು ಸ್ಮಾರ್ಟ್ ಆಗಿದ್ದೀರಾ ಅಂದು ಡಿಕೆಶಿ ಅನ್ತಾರೆ. ಒನ್ ಸೈಡ್ ಆಗಿದ್ದೀರಾ.. ಅಂತ ಡಿಕೆ ಶಿವಕುಮಾರ್ ಅವರು ಕಾಗೇರಿ ಕಾಲೆಳೆದರು.