ಬೆಂಗಳೂರು: ಮುಂದಿನ ವಾರದಿಂದ ಅಧಿವೇಶನ ಪ್ರಾರಂಭವಾಗಲಿದ್ದು, ಸ್ಪೀಕರ್ ಕಾಗೇರಿ ವಿಧಾನಸಭೆ ಸಭಾಂಗಣದ ಪೂರ್ವ ಸಿದ್ಧತೆಯನ್ನು ಪರಿಶೀಲಿಸಿದರು.ಕೋವಿಡ್ ಹಿನ್ನೆಲೆ ಈ ಹಿಂದಿನಂತೆಯೇ ಸಾಮಾಜಿಕ ಅಂತರೊಂದಿಗೆ ಅಧಿವೇಶನ ನಡೆಯಲಿದೆ.
ಬಿಎಸ್ ವೈಗೆ ಕೊನೆಯ ಸಾಲಿನಲ್ಲಿ ಆಸನ ವ್ಯವಸ್ಥೆ?:

ಮಾಜಿ ಸಿಎಂ ಬಿಎಸ್ವೈಗೆ ಸದನದಲ್ಲಿನ ಯಾವ ಸಾಲಿನಲ್ಲಿ ಆಸನ ವ್ಯವಸ್ಥೆ ಕಲ್ಪಿಸಲಾಗುತ್ತದೆ ಎಂಬ ಕುತೂಹಲ ಮೂಡಿದೆ. ಮೊದಲ ಮೂರು ಸಾಲು ಬಹುತೇಕ ಸಚಿವರಿಗೆ ಮೀಸಲಿರುತ್ತದೆ. ಉಳಿದಂತೆ ಜೇಷ್ಠತೆ ಆಧಾರದ ಮೇಲೆ ಆಡಳಿತ ಪಕ್ಷದ ಸದಸ್ಯರಿಗೆ ಆಸನ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಹಾಗೆ ಈ ಬಾರಿಯೂ ಜೇಷ್ಠತೆ ಆಧಾರದಲ್ಲಿ ಆಸನ ವ್ಯವಸ್ಥೆ ಕಲ್ಪಿಸಲಾಗುತ್ತಿದೆ ಎಂದು ವಿಧಾನಸಭೆ ಕಾರ್ಯದರ್ಶಿ ತಿಳಿಸಿದ್ದಾರೆ.
ಮೊದಲ ಮೂರು ಸಾಲು ಸಚಿವರುಗಳಿಗೆ ಮೀಸಲಾದರೆ, ಜೇಷ್ಠತೆ ಆಧಾರದಲ್ಲಿನ ಆಸನ ಹಂಚಿಕೆಯ ಪ್ರಕಾರ ಮಾಜಿ ಸಿಎಂ ಯಡಿಯೂರಪ್ಪರಿಗೆ ಹಿಂದಿನ ಸಾಲಿನಲ್ಲಿ ಕಲ್ಪಿಸಲಾಗುತ್ತದೆ ಎನ್ನಲಾಗಿದೆ. ಮಾಜಿ ಸಿಎಂ ಜಗದೀಶ್ ಶೆಟ್ಟರ್ಗೂ ಇದೇ ರೀತಿ ಸಚಿವರುಗಳು ಕೂರುವ ಆಸನದ ಸಾಲಿನ ಹಿಂದಿನ ಸಾಲಿನಲ್ಲಿ ಆಸನ ಹಂಚಿಕೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.ಈ ಬಗ್ಗೆ ಸ್ಪೀಕರ್ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದು ವಿಧಾನಸಭೆ ಕಾರ್ಯದರ್ಶಿ ವಿಶಾಲಾಕ್ಷಿ ತಿಳಿಸಿದ್ದಾರೆ.
ಈ ಹಿಂದೆ ಮೈತ್ರಿ ಸರ್ಕಾರದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯರಿಗೂ ಹಿಂದಿನ ಸಾಲಿನಲ್ಲಿ ಆಸನ ವ್ಯವಸ್ಥೆ ಕಲ್ಪಿಸಲಾಗಿತ್ತು. ಅದೇ ರೀತಿ ಮಾಜಿ ಸಿಎಂ ಯಡಿಯೂರಪ್ಪಗೂ ಹಿಂದಿನ ಸಾಲಿನಲ್ಲಿ ಆಸನ ಹಂಚಿಕೆ ಮಾಡಲಾಗುತ್ತದೆ ಎಂದು ಹೇಳಲಾಗಿದೆ. ಜೊತೆಗೆ ಹಿಂದಿನ ಸಾಲಿನಲ್ಲೇ ಬಿಎಸ್ವೈ ಆಸನ ಆಯ್ಕೆ ಮಾಡುವ ಸಾಧ್ಯತೆನೂ ಹೆಚ್ಚಿದೆ.