ಕರ್ನಾಟಕ

karnataka

ETV Bharat / state

ಆರ್​​​​ಎಸ್​​​​ಎಸ್ ವಿರುದ್ಧ ಘೋಷಣೆ ಕೂಗಿದ ಕಾಂಗ್ರೆಸ್ ಸದಸ್ಯರು: ಕಲಾಪ ನಾಳೆಗೆ ಮುಂದೂಡಿದ ಸ್ಪೀಕರ್ - Karnataka Congress leaders protest continues in session

ಇಂದು ಆರಂಭವಾದ ಕಲಾಪದಲ್ಲಿ ಕಾಂಗ್ರೆಸ್​ ಸದಸ್ಯರು ಪ್ರತಿಭಟನೆ ಮುಂದುವರೆಸಿದರು. ಸ್ಪೀಕರ್​ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಎಷ್ಟೇ ಮನವಿ ಮಾಡಿಕೊಂಡರು ಕೈ ನಾಯಕರು ಧರಣಿ ನಡೆಸಿದರು. ಇದರಿಂದ ಅಸಮಾಧಾನಗೊಂಡ ಸಭಾಧ್ಯಕ್ಷರು ಕಲಾಪವನ್ನು ನಾಳೆ 11 ಗಂಟೆಗೆ ಮುಂದೂಡಿದರು.

Speaker Vishweshwara Hegde kageri postponed the session for tomorrow
ಕಲಾಪವನ್ನು ನಾಳೆಗೆ ಮುಂದೂಡಿದ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ

By

Published : Feb 21, 2022, 3:21 PM IST

Updated : Feb 21, 2022, 3:50 PM IST

ಬೆಂಗಳೂರು :ವಿಧಾನಸಭೆಯಲ್ಲಿ ಆರ್​​​ಎಸ್​​​​​ಎಸ್ ವಿರುದ್ಧ ಘೋಷಣೆ ಕೂಗಿದ ಕಾಂಗ್ರೆಸ್ ಸದಸ್ಯರ ವಿರುದ್ಧ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅಸಮಾಧಾನ ವ್ಯಕ್ತಪಡಿಸಿದ್ದು, ಕಲಾಪವನ್ನು ನಾಳೆ 11 ಗಂಟೆಗೆ ಮುಂದೂಡಿದರು.

ಸದನ ನಡೆಸಲು ಅವಕಾಶ ಮಾಡಿಕೊಡುವಂತೆ ಸ್ಪೀಕರ್ ಎಷ್ಟೇ ಮನವಿ ಮಾಡಿಕೊಂಡರೂ ಕಾಂಗ್ರೆಸ್ ಸದಸ್ಯರು ಮಾತ್ರ ಜಗ್ಗದೇ ಸಚಿವ ಈಶ್ವರಪ್ಪ ಹಾಗೂ ಆರ್​​ಎಸ್​​​​ಎಸ್ ವಿರುದ್ಧ ಘೋಷಣೆ ಕೂಗುತ್ತಲೇ ಇದ್ದರು.

ಪ್ರತಿಭಟನೆ ನಡೆಸದಂತೆ ಮನವಿ ಮಾಡಿದ ಸ್ಪೀಕರ್​

ಇದರಿಂದ ಗರಂ ಆದ ಸ್ಪೀಕರ್, ಆರ್​ಎಸ್​ಎಸ್​​ ಅನ್ನು ಸದನದಲ್ಲಿ ಚರ್ಚೆಗೆ ತರಬೇಡಿ. ಆರ್​​ಎಸ್​​​ಎಸ್ ಒಂದು ರಾಷ್ಟ್ರೀಯ ಸಂಘಟನೆ. ಹಿಂದೂಗಳನ್ನು ಸಂಘಟನೆ ಮಾಡುತ್ತದೆ. ಇದಕ್ಕೆ ಬೆಂಬಲ ಕೊಡಬೇಕು ಹೊರತು ಅದರ ವಿರುದ್ಧ ಮಾತನಾಡಬಾರದು ಕಾಂಗ್ರೆಸ್ ಸದಸ್ಯರ ವಿರುದ್ಧ ಗರಂ ಆದರು.

ಧರಣಿ ಕೈಬಿಟ್ಟು ತಮ್ಮ ಆಸನಗಳಲ್ಲಿ ಕೂರುವಂತೆ ಶಾಸಕರನ್ನು ಮತ್ತೆ ಕರೆದರು. ಆದರೆ, ಕಾಂಗ್ರೆಸ್ ಸದಸ್ಯರು ಸ್ಪೀಕರ್ ಮನವಿಗೆ ಸ್ಪಂದಿಸಲಿಲ್ಲ. ಕೊನೆಗೆ ಕಲಾಪವನ್ನು ನಾಳೆ 11 ಗಂಟೆಗೆ ಮುಂದೂಡಿದರು.

ನಾವೂ 35 ಶಾಸಕರಿದ್ದೇವೆ, ಚರ್ಚೆಗೆ ಅವಕಾಶ ಕೊಡಿ :ಇದಕ್ಕೂ ಮುನ್ನ ಜೆಡಿಎಸ್‍ ಉಪ ನಾಯಕ ಬಂಡೆಪ್ಪ ಕಾಶೆಂಪೂರ್ ಅವರು ಮಾತನಾಡಿ, ನಮಗೆ ಜನರ ಸಮಸ್ಯೆಗಳನ್ನು ಚರ್ಚೆ ಮಾಡಲು ಅವಕಾಶ ನೀಡಿ. ನಾವು 35 ಮಂದಿ ಶಾಸಕರು ಇದ್ದೇವೆ. ನಮಗೂ ಜವಾಬ್ದಾರಿ ಇದೆ ಎಂದು ಮನವಿ ಮಾಡಿದರು. ಆಗ ಗದ್ದಲ ಮಧ್ಯೆ ಚರ್ಚೆ ಮಾಡಲು ಸಾಧ್ಯವಿಲ್ಲ ಎಂದು ಸ್ಪೀಕರ್ ಹೇಳಿದರು.

ಇದಕ್ಕೂ ಮುನ್ನ ಸದನದ ಕಲಾಪ ಆರಂಭವಾಗುತ್ತಿದ್ದಂತೆ ಕಾಂಗ್ರೆಸ್ ಸದಸ್ಯರು ಡೌನ್.. ಡೌನ್.. ಬಿಜೆಪಿ, ದೇಶ ದ್ರೋಹಿ ಈಶ್ವರಪ್ಪ ಅವರನ್ನು ವಜಾ ಮಾಡಬೇಕು ಎಂದು ಕೈ ಸದಸ್ಯರು ಘೋಷಣೆ ಕೂಗಿದರು. ಈ ವೇಳೆ, ಸದನ ಮುಂದುವರಿಸಲು ಅವಕಾಶ ಮಾಡಿಕೊಡಿ, ನಿಮ್ಮ ಸ್ಥಾನದಲ್ಲಿ ಕುಳಿತುಕೊಳ್ಳಿ. ಪ್ರಮುಖವಾದ ಬಿಲ್ಲುಗಳಿವೆ. ನೀವೂ ಚರ್ಚೆ ಮಾಡಿ ಎಂದು ಹೇಳಿದರು.

ಕಲಾಪವನ್ನು ನಾಳೆಗೆ ಮುಂದೂಡಿದ ಸ್ಪೀಕರ್​ ಕಾಗೇರಿ

ಆದರೆ, ಕೈ ಸದಸ್ಯರು ಮಾತ್ರ ಸ್ಪಂದಿಸಲೇ ಇಲ್ಲ. ಗಲಾಟೆ ಗದ್ದಲದ ನಡುವೆಯೇ ಸ್ಪೀಕರ್​ ಪ್ರಶ್ನೋತ್ತರ ಕಲಾಪವನ್ನು ಕೈಗೆತ್ತಿಕೊಂಡರು. ಈ ವೇಳೆ, ಜೆಡಿಎಸ್ ಶಾಸಕ ಶಿವಲಿಂಗೇಗೌಡ ಪ್ರಶ್ನೆ ಕೇಳಿದರು. ಕಾಂಗ್ರೆಸ್ ಶಾಸಕರಿಂದ ಘೋಷಣೆ ಕೂತ್ತಿದ್ದರ ಪರಿಣಾಮ ಏನು ಕೇಳಿಸುತ್ತಿಲ್ಲ. ನಾವು ಹೇಳಿದ್ದು ಅವರಿಗೆ ಕೇಳಲ್ಲ, ಅವರು ಹೇಳಿದ್ದು, ನಮಗೆ ಕೇಳಲ್ಲ ಎಂದು ಶಿವಲಿಂಗೇಗೌಡ ಹೇಳಿದರು.

ಹಾಗಾದರೆ, ಮುಂದಿನ ಪ್ರಶ್ನೆಗೆ ಹೋಗುತ್ತೇನೆ ಎಂದು ಸ್ಪೀಕರ್ ಹೇಳಿದರು. ಪ್ರಶ್ನೆಗೆ ಉತ್ತರ ಪಡೆಯದೇ ಶಿವಲಿಂಗೇಗೌಡ ಕುಳಿತುಕೊಂಡರು. ನಂತರ ವಿಧೇಯಕ ಮಂಡನೆ ವೇಳೆಯೂ ಸಹ ಕಾಂಗ್ರೆಸ್ ಸದಸ್ಯರಿಗೆ ಧರಣಿ ಕೈಬಿಟ್ಟು ಚರ್ಚೆ ಮಾಡಿ ಎಂದು ಮತ್ತೊಮ್ಮೆ ಮನವಿ ಮಾಡಿದರು.

ಆದರೆ, ಕಾಂಗ್ರೆಸ್ ಶಾಸಕರು ಧರಣಿ ಕೈಬಿಡದೆ ಘೋಷಣೆ ಮುಂದುವರಿಸಿದರು. ನಂತರ ಸ್ಪೀಕರ್ ಅವರು ವಿಧೇಯಕಗಳನ್ನು ಕೈಗೆತ್ತಿಕೊಂಡರು. ನಾಲ್ಕು ವಿಧೇಯಕಗಳಿಗೆ ಸದನದಲ್ಲಿ ಅನುಮೋದನೆ ದೊರಕಿತು.

ಇದನ್ನೂ ಓದಿ: ಹಿಜಾಬ್ ಪ್ರಕರಣದ ವಿಚಾರಣೆ ಆರಂಭಿಸಿದ ಹೈಕೋರ್ಟ್ : ಸರ್ಕಾರದ ಪರ ಎಜಿ ವಾದ ಮಂಡನೆ

Last Updated : Feb 21, 2022, 3:50 PM IST

For All Latest Updates

TAGGED:

ABOUT THE AUTHOR

...view details